ರಾಖಿ ಸಾವಂತ್- ಉರ್ಫಿ ಜಾವೇದ್ ಮಸ್ತ್ ಡ್ಯಾನ್ಸ್‌ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

Advertisements

ಬಾಲಿವುಡ್ ನಟಿಯರಾದ ರಾಖಿ ಸಾವಂತ್ ಮತ್ತು ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಹಾಡೊಂದಕ್ಕೆ ಸ್ಟೆಪ್ ಹಾಕಿರೋ ವಿಡಿಯೋ ಭಾರೀ ವೈರಲ್ ಆಗ್ತಿದೆ. ಅಷ್ಟೇ ಅಲ್ಲ, ಇವರಿಬ್ಬರ ಡ್ಯಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

Advertisements

ಇಂಟರ್‌ನೆಟ್ ಸೆನ್ಸೇಷನಲ್ ಸ್ಟಾರ್‌ಗಳಾದ ರಾಖಿ ಸಾವಂತ್ ಮತ್ತು ಉರ್ಫಿ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿ ಬಳಗ ಹೊಂದಿರುವವರು. ಇವರಿಬ್ಬರು ಒಟ್ಟಾದರೇ ಹೇಗಿರುತ್ತೆ ಅನ್ನೋದಕ್ಕೆ ಇವರಿಬ್ಬರು ಜತೆಯಿರೋ ವಿಡಿಯೋವೊಂದು ವೈರಲ್ ಆಗಿದೆ. `ಚೋಲಿ ಕೇ ಪೀಚೆ ಕ್ಯಾ ಹೇ’ ಸಾಂಗ್‌ಗೆ ರಾಖಿ ಮತ್ತು ಉರ್ಫಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಪತಿ ಜೊತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ

Advertisements

ಬಿಟೌನ್‌ನ ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿರೋ ರಾಖಿ ಮತ್ತು ಉರ್ಫಿ `ಚೋಲಿ ಕೇ ಪೀಚೆ ಕ್ಯಾ ಹೇ’ ಸಾಂಗ್‌ಗೆ ಸಖತ್ ಹಾಟ್ ಆಗಿ ಕುಣಿದಿದ್ದಾರೆ. ಸದಾ ಡಿಫರೆಂಟ್ ಡ್ರೆಸ್‌ನಿಂದ ಟ್ರೋಲ್ ಆಗ್ತಿದ್ದ ಉರ್ಫಿ, ಇದೀಗ ರಾಖಿ ಸಾವಂತ್ ಜತೆಗಿನ ವಿಡಿಯೋಗೆ ಭರ್ಜರಿ ಲೈಕ್ಸ್ ಗಿಟ್ಟಿಸಿಕೊಳ್ತಿದ್ದಾರೆ. ರಾಖಿ ಮತ್ತು ಉರ್ಫಿ ಬಾಂಡಿಂಗ್ ನೋಡಿ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ.

Advertisements
Exit mobile version