Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜವರ್ಧನ್ ನಟನೆಯ ‘ಪ್ರಣಯಂ’ ಚಿತ್ರದ ಟ್ರೈಲರ್ ರಿಲೀಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ರಾಜವರ್ಧನ್ ನಟನೆಯ ‘ಪ್ರಣಯಂ’ ಚಿತ್ರದ ಟ್ರೈಲರ್ ರಿಲೀಸ್

Cinema

ರಾಜವರ್ಧನ್ ನಟನೆಯ ‘ಪ್ರಣಯಂ’ ಚಿತ್ರದ ಟ್ರೈಲರ್ ರಿಲೀಸ್

Public TV
Last updated: January 19, 2024 1:11 pm
Public TV
Share
3 Min Read
PRANAYAM 2
SHARE

ಪಲ್ಲಕ್ಕಿ, ಗಣಪ, ಪಾರಿಜಾತದಂಥ ಅದ್ಭುತ  ಚಿತ್ರಗಳನ್ನು ನೀಡಿದ  ಪರಮೇಶ್ ಅವರೀಗ ಮತ್ತೊಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಪ್ರಣಯಂ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲಿದ್ದಾರೆ.  ಮನಸ್ವಿ ವೆಂಚರ್ಸ್ ಹಾಗೂ ಪಿಟು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಪರಮೇಶ್ ಅವರೇ ಕಥೆ ಬರೆದು ನಿರ್ಮಿಸಿರುವ  ಈ ಚಿತ್ರಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಿಚ್ಚುಗತ್ತಿ ಖ್ಯಾತಿಯ  ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ  ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.  ಈ ಚಿತ್ರದ ಟ್ರೈಲರ್  ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಾಜಿ ಉಪ ಮೇಯರ್ ಮೋಹನ್ ರಾಜು ಟ್ರೈಲರ್ ರಿಲೀಸ್ ಮಾಡಿ  ಈ ಟೈಟಲ್  ಕನ್ನಡದ ಜೊತೆ ತೆಲುಗು ಭಾಷೆಗೂ ಹತ್ತಿರವಾಗುವಂತಿದೆ. ಹಾಡು, ಕಾನ್ಸೆಪ್ಟ್ ಎರಡೂ ಚೆನ್ನಾಗಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.  ಈ ಚಿತ್ರದಲ್ಲಿ  ಜಯಂತ್ ಕಾಯ್ಕಿಣಿ ಅವರು 3 ಹಾಡುಗಳನ್ನು ಬರೆದಿದ್ದು, ಮನೋಮೂರ್ತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ನಾಗೇಶ್ ಆಚಾರ್ಯ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

Pranayam 2

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಮನೋಮೂರ್ತಿ ಚಿತ್ರದಲ್ಲಿ 5 ಹಾಡಿದ್ದು, ಕ್ಯಾಮೆರಾ ವರ್ಕ್ ಅದ್ಭುತವಾಗಿ ಮೂಡಿಬಂದಿದೆ. ಪ್ರಣಯಂ ಅಂದ್ರೆ ಲವ್, ಅದನ್ನಿಲ್ಲಿ  ಢಿಫರೆಂಟಾಗಿ ಹೇಳಿದ್ದಾರೆ. ಖಂಡಿತ ಈ ವರ್ಷದ ಮೊದಲ ಹಿಟ್ ಸಿನಿಮಾ ಆಗುತ್ತೆ ಎಂದರು. ನಂತರ ಜಯಂತ್ ಕಾಯ್ಕಿಣಿ ಮಾತನಾಡಿ ಪರಮೇಶ್ ತುಂಬಾ ಜೋಷ್ ಇರುವಂಥ ಪ್ರೊಡ್ಯೂಸರ್ ಸಿನಿಮಾಗಾಗಿ ತುಂಬಾ ಕಷ್ಟಪಡುತ್ತಾರೆ. ಮನೋಮೂರ್ತಿ ಹಾಗೂ ನಮ್ಮ ದಾಂಪತ್ಯಕ್ಕೆ 17 ವರ್ಷ ಆಯ್ತು. ಆಗಿದ್ದ ಕುತೂಹಲ, ಚಡಪಡಿಕೆ ಈಗಲೂ ಇದೆ. ಹಿಂದೆ ಪರಮೇಶ್ ಅವರ ಕರಿಯ, ಗಣಪ, ಪಾರಿಜಾತ ಚಿತ್ರಗಳಿಗೂ ನಾನೇ ಸಾಂಗ್ ಬರೆದಿದ್ದೆ. ಇದರಲ್ಲಿ 3 ಹಾಡನ್ನು ಬರೆದಿದ್ದೇನೆ ಎಂದು ಹೇಳಿದರು.  ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ ನಾನು ಈ ಸ್ಕ್ರಿಪ್ಟ್ ಮಾಡಿಕೊಂಡು ಬಂದಾಗ ನಿರ್ಮಾಪಕರು  ತುಂಬಾ ಚೆನ್ನಾಗಿ ಬಂದಿದೆ ಎಂದು ಖುಷಿಯಿಂದ ಹಗ್ ಮಾಡಿದರು.  ಸುಮಾರು ಲೊಕೇಶನ್ ಗಳನ್ನು ನೋಡಿ ಕೊನೆಗೆ ಮಡಿಕೇರಿಯಲ್ಲಿ ನಮಗೆ ಬೇಕಾದ  ಲೊಕೇಶನ್ ಸಿಕ್ತು.  ಎಲ್ಲಾ ಲೆಜೆಂಡರಿಗಳ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಬಂದಿದೆ. ನಾಗೇಶ್ ನನಗೆ ಇನ್ನೊಂದು ಕಣ್ಣಿದ್ದ ಹಾಗೆ. ತುಂಬಾ ಚೆನ್ನಾಗಿ ಶೂಟ್ ಮಾಡಿಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಜನ  ಇಷ್ಟಪಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

Pranayam 3

ನಾಯಕ ರಾಜವರ್ಧನ್ ಮಾತನಾಡುತ್ತ ಬಿಚ್ಚುಗತ್ತಿಗೂ ಮುಂಚೆಯೇ ಪರಮೇಶ್ ಈ ಕಥೆಯನ್ನು ಹೇಳಿದರು .ಇವತ್ತಿನ ಫ್ಯಾಮಿಲಿಗಳಲ್ಲಿ ಈ ಥರದ ಘಟನೆಗಳು ನಡೆಯುತ್ತಲೇ ಇವೆ. ಅಂಥಾ ಒಂದು ಸ್ಟ್ರಾಂಗ್ ಕಂಟೆಂಟ್ ಇಟ್ಟುಕೊಂಡು ನಾವೀ ಸಿನಿಮಾ ಮಾಡಿದ್ದೇವೆ. ಬಿ.ಸಿ. ಸೆಂಟರ್ ಆಡಿಯನ್ಸ್ ಗಳಿಗೆ ಬೇಕಾದ ಕಾನ್ಸೆಪ್ಟ್  ಚಿತ್ರದಲ್ಲಿದೆ. ಆಗಿನ್ನೂ ವಿದೇಶದಿಂದ ಬರುವ ಗೌತಂ ಎಂಬ  ಪಾತ್ರ ಮಾಡಿದ್ದೇನೆ. ಆತ 5-10 ದಿನದಲ್ಲಿ  ಸ್ವಂತ ರಿಲೇಶನ್ ನಲ್ಲೇ ಹುಡುಗಿಯೊಬ್ಬಳನ್ನು ಮದುವೆಯಾಗ್ತಾನೆ. ಆನಂತರ  15-20 ದಿನಗಳಲ್ಲಿ ನಡೆಯುವ ಕಥೆ, ನನ್ನದು ತುಂಬಾ ಇನ್ ಟೆನ್ಸಿವ್ ಆಗಿರುವ ಪಾತ್ರ. ಮನೋಮೂರ್ತಿ, ಜಯಂತ್ ಕಾಯ್ಕಿಣಿ ಅವರಂಥ ಲೆಜೆಂಡರಿಗಳ‌ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದರು.

Pranayam 1

ನಿರ್ಮಾಪಕ ಪರಮೇಶ್ ಮಾತನಾಡುತ್ತಾ, ನಾನು ಈವರೆಗೆ 9 ಸಿನಿಮಾ ಮಾಡಿದ್ದೇನೆ. ಆದರೂ ಗಾಂಧಿನಗರದಲ್ಲಿ ಪ್ರೊಡ್ಯೂಸರ್ ಗೆ ನೆಲೆಯೆ ಇಲ್ಲದಾಗಿದೆ. ನಮ್ಮದು ತುಂಬಾ ಕ್ರಿಟಿಕಲ್ ಫೀಲ್ಡ್. ಈಗ ಸಿನಿಮಾ ಹೇಗೋ ಮಾಡಿಬಿಡಬಹುದು. ರಿಲೀಸ್ ಮಾಡೋದು ತುಂಬಾ ಕಷ್ಟ. ರಿಲೀಸ್ ಡೇಟ್ ಅನೌನ್ಸ್ ಮಾಡಲಿಕ್ಕೇ ಭಯವಾಗುತ್ತೆ. ಬಿಡುಗಡೆಗೇ 2ಕೋಟಿ ಬೇಕಾಗುತ್ತೆ, ಎಲ್ಲಿಂದ ತರೋದು. ಹಾಗೂ, ರಿಲೀಸ್ ಮಾಡಲು ಮೂರು ಸಲ ಟ್ರೈ ಮಾಡಿದೆ. ಆಗಲಿಲ್ಲ. ಈಗ ಧೈರ್ಯ ಮಾಡಿದ್ದೇನೆ. ಇಂಡಸ್ಟ್ರಿಗೆ ಒಂದೊಳ್ಳೆ ಸಿನಿಮಾ ಕೊಟ್ಟಿದ್ದೇನೆ. ಜನ ಕೈ ಹಿಡಿಯುತ್ತಾರೆಂಬ ನಂಬಿಕೆಯಿದೆ ಎಂದರು.

 

ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ ಗಳಲ್ಲಿ  ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಝಂಕಾರ್ ಮ್ಯೂಸಿಕ್ ಈ ಚಿತ್ರದ ಹಾಡುಗಳನ್ನು ಹೊರತಂದಿದೆ. ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಇತರರು ದನಿಯಾಗಿದ್ದಾರೆ. ಚಿತ್ರದಲ್ಲಿ ಗೋವಿಂದೇಗೌಡ,  ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಉಳಿದ ಪಾತ್ರಗಳಲ್ಲಿ  ನಟಿಸಿದ್ದಾರೆ. ಮನೋಮೂರ್ತಿ ಅವರ  ಸಂಗೀತ ನಿರ್ದೇಶನ, ವಿ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಪ್ರಣಯಂ ಚಿತ್ರಕ್ಕಿದೆ.

TAGGED:ParameshPranayamrajavardhantrailerಟ್ರೈಲರ್ಪರಮೇಶ್ಪ್ರಣಯಂರಾಜವರ್ಧನ್
Share This Article
Facebook Whatsapp Whatsapp Telegram

Cinema news

Udupi Kapu Marigudi Temple Actor Shashi Kumar
ಕಾಪು ದೇವಸ್ಥಾನಕ್ಕೆ ನಟ ಶಶಿಕುಮಾರ್ ಭೇಟಿ
Cinema Districts Karnataka Latest Top Stories Udupi
kannada actor daali dhananjaya and his wife dr dhanyatha have been blessed with a baby boy
ಡಾಲಿ ಈಗ ಡ್ಯಾಡಿ – ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ
Cinema Karnataka Latest Sandalwood Top Stories
Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood

You Might Also Like

BN Lavanya
Bengaluru City

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎಸ್ಪಿ ಲಾವಣ್ಯ ಸಾವು

Public TV
By Public TV
52 seconds ago
Kolar Photographer Suicide
Crime

ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಫೋಟೋಗ್ರಾಫರ್ ಆತ್ಮಹತ್ಯೆ

Public TV
By Public TV
22 minutes ago
BY Vijayendra 1
Districts

ಮೇ 8ರಂದು ಮಿನಿ ದಸರಾ ಮಾದರಿಯಲ್ಲಿ ಯಡಿಯೂರಪ್ಪನವರ ಪುರ ಪ್ರವೇಶ: ವಿಜಯೇಂದ್ರ

Public TV
By Public TV
53 minutes ago
petrol bunk karwar
Latest

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌; ಉತ್ತರ ಕನ್ನಡದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಕೊರತೆ

Public TV
By Public TV
60 minutes ago
Rajegowda
Chikkamagaluru

ಶೃಂಗೇರಿ | ಮರು ಎಣಿಕೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗೆ ಜಯ – ಲೀಡ್‌ ಹೆಚ್ಚಿಸಿಕೊಂಡ ರಾಜೇಗೌಡ

Public TV
By Public TV
1 hour ago
BMTC KSRTC
Bengaluru City

ಸಾರಿಗೆ ನೌಕರರು – ಸರ್ಕಾರದ ನಡುವೆ ತಿಕ್ಕಾಟ; ಮೇ 20 ರಿಂದ ಬಸ್‌ ಸಂಚಾರ ಬಂದ್?‌

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?