ಬೆಂಗಳೂರು: ನಗರದ (Bengaluru) ಅರಮನೆ ಮೈದಾನದ ಗಾಯಿತ್ರಿ ವಿಹಾರ ಗೇಟ್ 4ರಲ್ಲಿ ಪಬ್ಲಿಕ್ ಟಿವಿ ಆಯೋಜಿಸಿರುವ ವಿದ್ಯಾಪೀಠ ಶೈಕ್ಷಣಿಕ ಮೇಳಕ್ಕೆ (Public TV Vidhyapeeta) ಮೊದಲ ದಿನವೇ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಮುಗಿದ ಬಳಿಕ ಮುಂದೇನು ಎನ್ನುವ ನೂರಾರು ಪ್ರಶ್ನೆಗಳಿಗೆ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೆರವಾಗಲು ಈ ಶೈಕ್ಷಣಿಕ ಮೇಳ ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೆ ಗಾರ್ಡನ್ ಸಿಟಿ ಯೂನಿವರ್ಸಿಟಿಯ ಚಾನ್ಸಲರ್ ಡಾ. ವಿಜಿ ಜೋಸೆಫ್, ಸಿಎಂಆರ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್‍ನ ಚೇರ್ಮನ್ ಡಾ. ಕೆಸಿ ರಾಮಮೂರ್ತಿ, ರೇವಾ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಡಾ. ಎಂ ಧನಂಜಯ್, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಿಕೆ ಮೋಹನ್, ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಜೊತೆ ಸೇರಿ ರಿಬ್ಬನ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: AI ಕಾಲದಲ್ಲಿ ನಾಳೆ ಏನಾಗುತ್ತೆ ಅಂತ ಹೇಳೋದೇ ಕಷ್ಟ, ಜೋತಿಷ್ಯಿಗಳಂತೆ ಭವಿಷ್ಯವನ್ನು ಊಹೆ ಮಾಡ್ಬೇಕು: ಹೆಚ್.ಆರ್ ರಂಗನಾಥ್

ಬಳಿಕ ಮೇಳದಲ್ಲಿನ ಕಾಲೇಜುಗಳ ಸ್ಟಾಲ್‍ಗಳಿಗೆ ವಿಸಿಟ್ ಮಾಡಿದರು. ಸ್ಫರ್ಧಾ ಜಗತ್ತಿನಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರ, ಕನಸಿನ ಕೋರ್ಸ್ ಹಾಗೂ ಆಯ್ಕೆಗಳ ಬಗ್ಗೆ ಗಣ್ಯರು ಮಾತನಾಡಿದರು. ಇನ್ನು ಸಿಇಟಿ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನರಿಂದ ಉಪನ್ಯಾಸ ನಡೆಯಿತು. ಸಿಇಟಿ ಸೀಟು ಆಯ್ಕೆ, ಅರ್ಜಿ ಸಲ್ಲಿಕೆ ಸೇರಿ ಹಲವು ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮಾಹಿತಿ ನೀಡಲಾಯಿತು.
ನಾಳೆಯೂ ವಿದ್ಯಾಪೀಠ ಶೈಕ್ಷಣಿಕ ಮೇಳ ನಡೆಯಲಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನೂರಾರು ವಿದ್ಯಾರ್ಥಿಗಳು, ಪೋಷಕರು ವಿವಿಧ ಶೈಕ್ಷಣಿಕ ಸಂಸ್ಥೆಗಳ ಸ್ಟಾಲ್‍ಗಳ ಬಳಿ ಮಾಹಿತಿ ಪಡೆದರು.

ಕಾರ್ಯಕ್ರಮಕ್ಕೆ ಬಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನ ಆಯೋಜಿಸಲಾಗಿತ್ತು. ಪ್ರತಿ ಸ್ಪರ್ಧೆಗೂ ವಿಶೇಷ ಉಡುಗೊರೆ ಇತ್ತು. ಇನ್ನೂ ಲಕ್ಕಿ ಡಿಪ್ ಮೂಲಕ ಅಕ್ಷಯ್ ಎಂಬ ವಿದ್ಯಾರ್ಥಿ ಲ್ಯಾಪ್‌ಟಾಪ್ ವಿಜೇತರಾದರು. ಸಪ್ತಗಿರಿ ವಿವಿಯಿಂದ ಲ್ಯಾಪ್ ಟಾಪ್ ನೀಡಲಾಯ್ತು. ಈ ಕಾರ್ಯಕ್ರಮದಲ್ಲಿ ಪಿಯುಸಿ ಟಾಪರ್ಸ್ ಗೆ ಸನ್ಮಾನಿಸಿ ಗೌರವಿಸಲಾಯ್ತು. ಕಾರ್ಯಕ್ರಮಕ್ಕೆ ಬಂದಿದ್ದ ವಿದ್ಯಾರ್ಥಿಗಳು, ಪೋಷಕರು ಪಬ್ಲಿಕ್ ಟಿವಿ ವಿದ್ಯಾಪೀಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಐದು ಅದೃಷ್ಟವಂತ ವಿದ್ಯಾರ್ಥಿನಿಯರಿಗೆ ಬೈಸಿಕಲ್ ಬಹುಮಾನ ಸಿಕ್ಕಿದೆ. ಅರವಿಂದ್ ರೆಸಿಡೆನ್ಷಿಯಲ್ ಸ್ಕೂಲ್ ಮತ್ತು ಪಿಯು ಕಾಲೇಜ್‌ನಿಂದ ಬಂಪರ್ ಬಹುಮಾನ ಬೈಸಿಕಲ್ ಗಿಫ್ಟ್ ನೀಡಿದೆ. ಇದೇ ವೇಳೆ ಬೈಸಿಕಲ್ ರೇಸ್ ಸಹ ನಡೆಯಿತು.
ನಾಳೆಯೂ ಈ ಕಾರ್ಯಕ್ರಮ ನಡೆಯಲಿದ್ದು, ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿ. ಗುಣಮಟ್ಟದ ಶಿಕ್ಷಣ, ಬದುಕನ್ನು ಬದಲಿಸುತ್ತದೆ. ವಿದ್ಯಾಪೀಠ ಎಂಬ ಅದ್ಭುತ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಿಮ್ಮ ಆಯ್ಕೆ ಕಾಲೇಜು, ಕೋರ್ಸ್‍ಗಳ ಬಗ್ಗೆ ಮಾಹಿತಿ ಪಡೆಯಿರಿ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಪಬ್ಲಿಕ್ ವಿದ್ಯಾಪೀಠ ದಾರಿದೀಪ – ಇಂದು, ನಾಳೆ ಬನ್ನಿ… ಆಕರ್ಷಕ ಬಹುಮಾನ ಗೆಲ್ಲಿ



