ಹಾವೇರಿ: ಪಡಿತರ ಅಂಗಡಿಯಲ್ಲಿ `ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಮಾರಾಟ ಮಾಡಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಹಾವೇರಿ ಸೇರಿದಂತೆ ರಾಜ್ಯದ 20 ಸಾವಿರಕ್ಕೂ ಅಧಿಕ ಅಂಗಡಿಯಲ್ಲಿ ಸಿನಿಮಾದ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಒಂದು ಟಿಕೆಟ್ ಬೆಲೆ 150 ರೂ. ನಿಗದಿ ಮಾಡಲಾಗಿದೆ. ಹೀಗೆ ಒಂದು ಅಂಗಡಿಗೆ 50 ಟಿಕೆಟ್, 100 ಟಿಕೆಟ್,150 ಟಿಕೆಟ್ ನೀಡಲಾಗಿದೆ. ಕೆಲವು ಅಂಗಡಿಯ ಮಾಲೀಕರು ಗ್ರಾಹಕರು ಜಗಳ ಮಾಡುತ್ತಾರೆ ಅನ್ನೋ ಕಾರಣಕ್ಕಾಗಿ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: 1 ಕೋಟಿ ದೇಣಿಗೆ, ಉಚಿತ ಕಾನೂನು ನೆರವು – ಸಿಜೆಪಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್
ಈ ಸಂಬಂಧ ಆಯುಕ್ತರು ಸಹ ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಸ್ವತಃ ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.ಜೆ ಅವರು ಮಾಹಿತಿ ನೀಡಿ, ಯಾರಿಗೂ ಬಲವಂತವಾಗಿ ಟಿಕೆಟ್ ಮಾರಾಟ ಮಾಡಿಲ್ಲ. ಜಾಗೃತಿ ಸಿನಿಮಾ ಇರುವ ಕಾರಣಕ್ಕಾಗಿ ಪ್ರೀಮಿಯರ್ ಶೋ ಪ್ರದರ್ಶನಕ್ಕಾಗಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದೆಡೆ ಗ್ರಾಮೀಣ ಪ್ರದೇಶಗಳಲ್ಲಿ ಬಡಜನರು ಮುಂದಿನ ತಿಂಗಳು ರೇಷನ್ ಕೊಡುತ್ತಾರೋ ಇಲ್ಲೋ ಅನ್ನೋ ಭಯದಲ್ಲಿ ಟಿಕೆಟ್ ತೆಗೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಜನರಿಗೆ ಉಚಿತವಾಗಿ ನೀಡುವ ಪಡಿತರ ಅಕ್ಕಿ, ಜೋಳದ ಜೊತೆಗೆ ಪ್ರೀಮಿಯರ್ ಶೋ ಟಿಕೆಟ್ ಮಾರಾಟಕ್ಕೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಚಲನಚಿತ್ರದಲ್ಲಿ ಅನ್ನಭಾಗ್ಯ ಯೋಜನೆ ಜಾಗೃತಿ ಕುರಿತು ಮಾಹಿತಿ ಇದೆ ಎನ್ನಲಾಗಿದೆ. ಅಲ್ಲದೇ ಎರಡು ತಿಂಗಳ ಹಿಂದಷ್ಟೇ ಈ ಸಿನಿಮಾದ ಪೋಸ್ಟರ್‌ನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಬಿಡುಗಡೆ ಮಾಡಿದ್ದರು.ಇದನ್ನೂ ಓದಿ: ಕರೂರು ಕಾಲ್ತುಳಿತ ಸಂತ್ರಸ್ತರಿಗೆ ಉದ್ಯೋಗ ನೀಡಿದ ವಿಜಯ್‌ಗೆ ಶಾಕ್ – ಆದೇಶವೇ ರದ್ದು
