Bengaluru CityCinemaKarnatakaLatestMain PostSandalwoodTV Shows

ರಾಕೇಶ್ ಅಡಿಗ ಮಾಡಿದ ಎಡವಟ್ಟಿಗೆ ಸಿಡಿದೆದ್ದ ಸಂಬರ್ಗಿ

ಟಿವಿ ಲೋಕದಲ್ಲಿ ಇದೀಗ ಬಿಗ್ ಬಾಸ್ (Bigg Boss) ಹವಾ ಜೋರಾಗಿದೆ. ಹೊಸ ಸೀಸನ್‌ನಲ್ಲಿ ಪ್ರವೀಣ ಜೊತೆ ನವೀನರ ಜುಗಲ್‌ಬಂದಿ ನೋಡುಗರನ್ನ ಮೋಡಿ ಮಾಡುತ್ತಿದೆ. ಇದೀಗ ಮನೆಗೆ ಎರಡನೇ ಬಾರಿ ಪ್ರಶಾಂತ್ ಸಂಬರ್ಗಿ ಎಂಟ್ರಿಯಾಗಿದೆ. ಖಡಕ್ ಮಾತಿನ ಮೂಲಕ ಹೈಲೆಟ್ ಆಗಿರುವ ಸಂಬರ್ಗಿ ಇದೀಗ ರಾಕೇಶ್ ಅಡಿಗ (Rakesh Adiga)  ಮೇಲೆ ಸಿಡಿದೆದ್ದಿದ್ದಾರೆ. ದೊಡ್ಮನೆಯಲ್ಲಿ ರಾಕೇಶ್ ಮಾಡಿರುವ ಎಡವಟ್ಟಿನಿಂದ ಸಂಬರ್ಗಿ ಫುಲ್ ಗರಂ ಆಗಿದ್ದಾರೆ.

ಬಿಗ್ ಬಾಸ್ ಇದೀಗ ಒಂದು ವಾರ ಪೂರ್ತಿಗೊಂಡು ಎರಡನೇ ವಾರಕ್ಕೆ ಕಾಲಿಟ್ಟಿದೆ. ರಾಕೇಶ್ ಪ್ರ್ಯಾಂಕ್ ಮಾಡಲು ಹೋಗಿ ಪ್ರಶಾಂತ್ ಸಂಬರ್ಗಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎಲ್ಲರನ್ನೂ ಪ್ರ‍್ಯಾಂಕ್ ಮಾಡುವ ನಿರ್ಧಾರಕ್ಕೆ ಅನುಪಮಾ ಹಾಗೂ ರಾಕೇಶ್ ಬಂದರು. ಈ ಐಡಿಯಾ ಬಂದಿದ್ದೇ ಬಾಯಲ್ಲಿ ಪೇಸ್ಟ್ ಹಾಕಿಕೊಂಡ ರಾಕೇಶ್ ಅವರು ಗಾರ್ಡನ್ ಏರಿಯಾಗೆ ಬಂದು ಬಿದ್ದರು. ಪಿಡ್ಸ್ ಬಂದ ರೀತಿಯಲ್ಲಿ ಒದ್ದಾಡಿದರು. ಅಮೂಲ್ಯ ಗೌಡ ಅವರು ನಗುತ್ತಲೇ ಜೋರಾಗಿ ಕೂಗಿ ಮನೆ ಮಂದಿಯನ್ನು ಕರೆದರು.

ರಾಕೇಶ್ ಬಿದ್ದಿದ್ದಾರೆ. ಕಬ್ಬಿಣ ಹಿಡಿದುಕೊಂಡು ಬನ್ನಿ ಪ್ಲೀಸ್ ಎಂದು ಕರೆದರು. ಮನೆ ಮಂದಿಯೆಲ್ಲ ಆತಂಕದಿಂದ ಓಡಿ ಬಂದರು. ಪ್ರಶಾಂತ್ ಸಂಬರ್ಗಿ ಅವರಂತೂ ಸಾಕಷ್ಟು ಆತಂಕಗೊಂಡರು. ಮನೆಯಲ್ಲಿ ಆತಂಕದ ವಾತಾವರಣ ಹೆಚ್ಚುತ್ತಿದ್ದಂತೆ ಇದು ಪ್ರ‍್ಯಾಂಕ್ (Prank)  ಎಂದು ನಕ್ಕಿದ್ದಾರೆ ರಾಕೇಶ್. ಇದನ್ನು ನೋಡಿ ಪ್ರಶಾಂತ್ ಸಂಬರ್ಗಿಗೆ ಸಖತ್ ಸಿಟ್ಟು ಬಂದಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಪಿಸ್ಸೆ ಔಟ್

ರಾಕೇಶ್ (Rakesh) ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ (Prashanth Sambargi) ರಾಕೇಶ್ ಇದು ಸರಿ ಅಲ್ಲ. ಈ ರೀತಿ ಮಾಡೋದ್ರಿಂದ ನೀವು ಆ ರೋಗಕ್ಕೆ, ಆ ರೋಗ ಬಂದವರಿಗೆ ಅವಮಾನ ಮಾಡಿದ್ದೀರಿ. ನನ್ನ ಮಗನಿಗೂ ಇದೇ ರೀತಿಯ ಕಾಯಿಲೆ ಇತ್ತು. ಆತ ನಿಂತಲ್ಲೇ ನಿಂತು ಬಿಡುತ್ತಿದ್ದ. ಚಿಕಿತ್ಸೆ ಕೊಡಿಸಿ ಕೊಡಿಸಿ ಆತನಿಗೆ ಕಾಯಿಲೆ ಈಗ ಗುಣಮುಖ ಆಗಿದೆ. ನನ್ನ ಮಗನೇ ನನಗೆ ನೆನಪಿಗೆ ಬಂದ ಎಂದು ಸಂಬರ್ಗಿ ಗಳಗಳನೇ ಅತ್ತಿದ್ದಾರೆ. ಈ ಪ್ರ‍್ಯಾಂಕ್‌ನಲ್ಲಿ ಭಾಗಿ ಆದ ಅನೇಕರು ಪ್ರಶಾಂತ್ ಬಳಿ ಕ್ಷಮೆ ಕೇಳಿದರು. ಪ್ರಶಾಂತ್ ಸಂಬರ್ಗಿ ಅವರು ರಾಕೇಶ ಕಾಲರ್ ಹಿಡಿದಾಗ ಒಂದಷ್ಟು ಮಂದಿಗೆ ಆತಂಕ ಕೂಡ ಆಯಿತು. ಬಳಿಕ ರಾಕೇಶ್ ಕೂಡ ಪ್ರಶಾಂತ್ ಅವರ ಬಳಿ ಕ್ಷಮೆ ಕೇಳಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button