ಢಾಕಾ: ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಇಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅಲ್ಲಿನ ಹಿಂದೂ ಸಮುದಾಯದ ಜನರೊಂದಿಗೆ ಸಂವಾದ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಈ ದೇಶದಲ್ಲಿರುವ ಹಿಂದೂ ಸಮಯದಾಯಕ್ಕೆ ನನ್ನಷ್ಟೇ ಹಕ್ಕುಗಳಿವೆ. ನೀವು ಈ ದೇಶದ ಪ್ರಜೆಗಳೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಲಗಿದ್ದಾಗ ಐಟಿಬಿಪಿ ಶಿಬಿರದಿಂದ ಯೋಧರ ಎರಡು AK-47 ರೈಫಲ್ ಕಳವು – ವಿಶೇಷ ತಂಡದಿಂದ ತಲಾಶ್
Advertisement
Advertisement
ಹಿಂದೂ ಸಮುದಾಯದ ಮಂದಿ ಅಲ್ಪಸಂಖ್ಯಾತರೆಂದು ಭಾವಿಸಬಾರದು. ಇಲ್ಲಿ ಎಲ್ಲಾ ಧರ್ಮದ ಜನರು ಸಮಾನ ಹಕ್ಕುಗಳೊಂದಿಗೆ ಬದುಕಬೇಕೆಂದು ನಾವು ಬಯಸುತ್ತೇವೆ. ನೀವೂ ಈ ದೇಶದ ಪ್ರಜೆಗಳು, ಇಲ್ಲಿ ನನ್ನಂತೆಯೇ ನಿಮಗೂ ಸಮಾನ ಹಕ್ಕುಗಳಿವೆ. ನೀವು ಯಾವಾಗಲೂ ಈ ದೇಶದ ಪ್ರಜೆಗಳೆಂದು ಭಾವಿಸುವುದರಿಂದ ನೀವೂ ಸಮಾನ ಹಕ್ಕುಗಳನ್ನು ಅನುಭವಿಸುತ್ತೀರಿ. ನಾವು ಕೂಡ ನಿಮ್ಮನ್ನು ಆ ರೀತಿಯಲ್ಲಿ ನೋಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊಟ್ಟೆಯ ವಿಭಿನ್ನ ಬಳಕೆ: ಕಾಂಗ್ರೆಸ್-ದಾಸೋಹ, ಬಿಜೆಪಿ-ಜನದ್ರೋಹ – ʼಕೈʼ ಟೀಕೆ
Advertisement
Advertisement
ದೇಶದಲ್ಲಿ ಅಹಿತಕರ ಘಟನೆ ನಡೆದಾಗ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯಕ್ಕೆ ಯಾವುದೇ ಹಕ್ಕು ಇಲ್ಲ ಎಂಬಂತೆ ಬಣ್ಣ ಕಟ್ಟಲಾಗಿದೆ. ಹಿಂದೂಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಾಗ ಸ್ಥಳೀಯ ಸರ್ಕಾರಗಳೂ ಗಮನ ಕೊಡುತ್ತಿಲ್ಲ ಎನ್ನುವುದೂ ಇದಕ್ಕೆ ಕಾರಣವಾಗಿದೆ. ಇನ್ನು ಮುಂದೆ ಅದು ಆಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.