ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ವಿದೇಶಾಂಗ ಸಚಿವರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾದ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ (Abbas Araghchi) ಹಾಗೂ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾಗಿದ್ದಾರೆ.
Glad to interact with Foreign Ministers and Heads of Delegation of BRICS countries.
BRICS has emerged as an important platform for advancing cooperation among emerging economies and giving voice to the aspirations of the Global South.
Under India’s Chairmanship this year, we… pic.twitter.com/RrK1pia1Du
— Narendra Modi (@narendramodi) May 14, 2026
ಅಮೆರಿಕ-ಇಸ್ರೇಲ್ vs ಇರಾನ್ ನಡುವೆ ಯುದ್ಧ ಶುರುವಾದ ಬಳಿಕ ಇರಾನ್ ವಿದೇಶಾಂಗ ಸಚಿವರ ಜೊತೆಗಿನ ಮೊದಲ ಭೇಟಿ ಇದಾಗಿದೆ. ಮೇ 14 ಮತ್ತು 15 ರಂದು (ಇಂದು & ನಾಳೆ) ದೆಹಲಿಯಲ್ಲಿ ಬ್ರಿಕ್ಸ್ ವಿದೇಶಾಂಗ ಸಚಿವರು ಮತ್ತು ಹಿರಿಯ ಪ್ರತಿನಿಧಿಗಳ ಸಭೆ ಆಯೋಜನೆಗೊಂಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಮದ್ಯ ಖರೀದಿಗೆ 21 ವರ್ಷ ಕಡ್ಡಾಯ – ವಿಜಯ್ ಸರ್ಕಾರ ಆದೇಶ
Pleased to receive Russia’s Foreign Minister Sergei Lavrov. Thanked him for an update on the progress on various facets of our Special & Privileged Strategic Partnership.
We also exchanged views on various regional and global issues, including situation in Ukraine and West… pic.twitter.com/fg9YL1b0Se
— Narendra Modi (@narendramodi) May 14, 2026
ʻಭಾರತ್ ಮಂಟಪʼದಲ್ಲಿ ಜೈಶಂಕರ್‌ರಿಂದ ಸ್ವಾಗತ
ಬ್ರಿಕ್ಸ್ ಶೃಂಗದ ಮೊದಲ ದಿನ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅವರು, ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದಲ್ಲಿ ಹಲವಾರು ವಿದೇಶಾಂಗ ಸಚಿವರು ಮತ್ತು ಹಿರಿಯ ರಾಜತಾಂತ್ರಿಕರನ್ನ ಬರಮಾಡಿಕೊಂಡರು. ಅಧಿಕೃತ ಚರ್ಚೆಗಳು ಶುರುವಾಗುವ ಮುನ್ನ ಜೈಶಂಕರ್ ಸ್ವಾಗತಿಸಿದ ಗಣ್ಯರಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ (Sergey Lavrov), ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ಇದ್ದರು.
ಇದರೊಂದಿಗೆ ಇಂಡೋನೇಷ್ಯಾದ ವಿದೇಶಾಂಗ ಸಚಿವ ಸುಗಿಯೊನೊ, ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವ ರೊನಾಲ್ಡ್ ಲಮೋಲಾ, ಇಥಿಯೋಪಿಯನ್ ವಿದೇಶಾಂಗ ಸಚಿವ ಗೆಡಿಯನ್ ಟಿಮೊಥೆವೊಸ್ ಹೆಸ್ಸೆಬಾನ್ ಅವರಿಗೂ ಸಾಂಪ್ರದಾಯಿಕ ಸ್ವಾಗತ ಕೋರಿದರು. ಇದನ್ನೂ ಓದಿ: ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಆದೇಶ
ಇನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭೇಟಿ ನೀಡಿರುವ ಹಿನ್ನೆಲೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಗೈರಾಗಿದ್ದರು. ಅವರ ಬದಲಿಗೆ ಬೀಜಿಂಗ್ ಪ್ರತಿನಿಧಿಯಾಗಿ ರಾಯಭಾರಿ ಕ್ಸು ಫೀಹಾಂಗ್ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡರು.
ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಖಲೀಫಾ ಶಾಹೀನ್ ಅಲ್ ಮರಾರ್ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಸಭೆಗೂ ಮುನ್ನ ಜೈಶಂಕರ್ ನವದೆಹಲಿಯಲ್ಲಿ ಇಂಡೋನೇಷ್ಯಾದ ವಿದೇಶಾಂಗ ಸಚಿವ ಸುಗಿಯೊನೊ ಅವರೊಂದಿಗೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಹೈಡ್ರಾಮಾಕ್ಕೆ ಕೊನೆಗೂ ತೆರೆ – ವಿ.ಡಿ. ಸತೀಶನ್‌ಗೆ ಕೇರಳ ಸಿಎಂ ಪಟ್ಟ

