Bengaluru CityKarnatakaLatestMain PostTech

ಅಮೆಜಾನ್‌ನಲ್ಲಿ ಉದ್ಯೋಗ ಕಡಿತ – ಕ್ಯಾಬಿನ್‌ನಲ್ಲೇ ಕಣ್ಣೀರಿಟ್ಟ ಉದ್ಯೋಗಿಗಳು

ಬೆಂಗಳೂರು: ಆನ್‌ಲೈನ್‌ ಶಾಪಿಂಗ್‌ ದಿಗ್ಗಜ ಅಮೆಜಾನ್‌ ಕಂಪನಿಯಲ್ಲಿ (Amazon India) ಉದ್ಯೋಗ ಕಡಿತ (Layoffs) ಆರಂಭಗೊಂಡಿದ್ದು ಉದ್ಯೋಗಿಗಳು ಕಣ್ಣೀರಿಟ್ಟು ಕಂಪನಿಯನ್ನು ತೊರೆದಿದ್ದಾರೆ.

ವಿಶ್ವಾದ್ಯಂತ 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಅಮೆಜಾನ್‌ ಮುಂದಾಗಿದ್ದು, ಭಾರತದಲ್ಲಿ ಕನಿಷ್ಠ 1 ಸಾವಿರ ಉದ್ಯೋಗಿಗಳನ್ನು ಮನೆಗೆ ಹೋಗಲಿದ್ದಾರೆ. ಈ ತಿಂಗಳು ಸುಮಾರು 1,000 ಉದ್ಯೋಗಿಗಳನ್ನು ವಜಾ ಮಾಡುವ ನಿರೀಕ್ಷೆಯಿದೆ ಮತ್ತು ಈಗಾಗಲೇ ವಜಾಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.

ಟೆಕ್ ಮತ್ತು ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡತ್ತಿರುವ ಉದ್ಯೋಗಿಗಳಿಗೆ ಈಗಾಗಲೇ ಮೇಲ್‌ ಬಂದಿದೆ. ಇದನ್ನೂ ಓದಿ: ನನ್ನ ಸಂಬಳ ಭಾರೀ ಹೆಚ್ಚಾಯ್ತು: ಟಿಮ್‌ ಕುಕ್‌ ಸಂಬಳ ಅರ್ಧಕ್ಕರ್ಧ ಇಳಿಕೆ

 

ಸಾಮಾಜಿಕ ಜಾಲತಾಣದಲ್ಲಿ ಅಮೆಜಾನ್‌ ಇಂಡಿಯಾದ ಸದ್ಯದ ಸ್ಥಿತಿಯನ್ನು ಉದ್ಯೋಗಿಯೊಬ್ಬರು ವಿವರಿಸುವ ಪೋಸ್ಟ್‌ ವೈರಲ್‌ ಆಗಿದೆ. ನನ್ನ ತಂಡದ ಶೇ.75 ರಷ್ಟು ಸದಸ್ಯರನ್ನು ತೆಗೆಯಲಾಗಿದೆ. ನಾನು ಸೇರಿದಂತೆ ತಂಡದಲ್ಲಿ ಶೇ.25 ಮಂದಿ ಇದ್ದಾರೆ. ಕ್ಯಾಬಿನ್‌ನಲ್ಲಿ ಕುಳಿತಿರುವಾಗಲೇ ಕೆಲಸದಿಂದ ತೆಗೆಯುತ್ತಿದ್ದಾರೆ. ವಜಾಗೊಂಡ ಸುದ್ದಿ ಕೇಳಿ ಅವರು ಕ್ಯಾಬಿನ್‌ನಲ್ಲೇ ಕಣ್ಣೀರಿಟ್ಟಿದ್ದಾರೆ. ನನಗೆ ಇನ್ನು ಮುಂದೆ ಕೆಲಸ ಮಾಡಲು ಯಾವುದೇ ಉತ್ಸಾಹ ಇಲ್ಲ ಎಂದು ಬರೆದಿದ್ದಾರೆ.

ಗುರುಗ್ರಾಮ ಮತ್ತು ಬೆಂಗಳೂರಿನ ಕಚೇರಿಗಳಲ್ಲಿ ವಜಾ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇದು ಭಾರತದ ಹಲವಾರು ವಿಭಾಗಗಳ ಮೇಲೆ ಪರಿಣಾಮ ಬೀರಿದೆ. ವಜಾಗೊಳಿಸಿದ ಉದ್ಯೋಗಿಗಳಿಗೆ 5 ತಿಂಗಳ ವೇತನವನ್ನು ಅಮೆಜಾನ್‌ ಪಾವತಿ ಮಾಡಿದೆ. ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಕಳೆದ ವರ್ಷದ ನವೆಂಬರ್‌ನಲ್ಲಿ  ಸಾಮೂಹಿಕ ವಜಾಗೊಳಿಸಿ ಉದ್ಯೋಗ ಕಡಿತ ಮಾಡಲಾಗುವುದು ಎಂದು ತಿಳಿಸಿದ್ದರು.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button