ಪಾಟ್ನಾ: ಬಿಹಾರದ (Bihar) ಸಸಾರಾಮ್ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲೊಂದು (Train) ಹೊತ್ತಿ ಉರಿದಿದೆ. ಬೆಂಕಿಯ ತೀವ್ರತೆಗೆ ಒಂದು ಬೋಗಿ ಸಂಪೂರ್ಣ ಸುಟ್ಟುಹೋಗಿದೆ.
ಬೆಂಕಿಯನ್ನು ನಂದಿಸಲು ರೈಲ್ವೆ ಸಿಬ್ಬಂದಿ ಹರಸಾಹಸ ಪಡುತ್ತಿರುವ ದೃಶ್ಯಗಳು ಹಾಗೂ ರೈಲು ಬೋಗಿಯಿಂದ ದಟ್ಟ ಹೊಗೆ ಹೊರಬರುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ರೈಲು ಪಾಟ್ನಾಗೆ ತೆರಳಲು ಸಜ್ಜಾಗಿತ್ತು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಹೊತ್ತಿ ಉರಿದ ತಿರುವನಂತಪುರಂ To ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್ – ತಪ್ಪಿದ ಭಾರೀ ಅನಾಹುತ
ಅಗ್ನಿ ಅವಘಡಕ್ಕೆ (Fire Accident) ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Sasaram, Bihar – A major fire broke out in one of the passenger coaches of the Patna Fast Passenger Train at Sasaram railway station on Platform No. 6, completely gutting the coach in a dramatic incident that could have turned tragic pic.twitter.com/9A2Nt4Yzfp
— NextMinute News (@nextminutenews7) May 18, 2026
ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಪ್ಲಾಟ್‌ಫಾರ್ಮ್‌ನಲ್ಲಿದ್ದ ಪ್ರಯಾಣಿಕರು ದಟ್ಟವಾದ ಬೆಂಕಿಯನ್ನು ಕಂಡು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.
ಭಾನುವಾರ ಮಧ್ಯಪ್ರದೇಶದ ರತ್ಲಂನಲ್ಲಿ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಮರುದಿನವೇ ಬಿಹಾರದಲ್ಲಿ ಅಂತಹ ಅವಘಡ ನಡೆದಿದೆ.
ಈ ಅವಘಡದಲ್ಲಿ ಬಿ-1 ಕೋಚ್‌ನ ಹಿಂದೆ ಜೋಡಿಸಲಾದ ಎರಡನೇ ಲಗೇಜ್-ಕಮ್-ಗಾರ್ಡ್ ವ್ಯಾನ್ (ಎಸ್‌ಎಲ್‌ಆರ್) ಕೂಡ ಬೆಂಕಿಗೆ ಆಹುತಿಯಾಗಿತ್ತು. ಕೋಚ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಸುರಕ್ಷಿತವಾಗಿ ರಕ್ಷಿಸಲಾಗಿತ್ತು. ಈ ಅವಘಡದ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದನ್ನೂ ಓದಿ: US ನ ಎರಡು F-18 ಯುದ್ಧ ವಿಮಾನಗಳು ಡಿಕ್ಕಿ – ಆಗಸದಲ್ಲಿ ಉರಿದ ಜೆಟ್, ಚಿಮ್ಮಿದ ಬೆಂಕಿ ಉಂಡೆಗಳು

