ವಾಷಿಂಗ್ಟನ್: ವಾಯು ಪ್ರದರ್ಶನದ ವೇಳೆ ಎರಡು EA-18G ಗ್ರೋಲರ್ ಯುದ್ಧ ವಿಮಾನಗಳು ಆಗಸದಲ್ಲೇ ಡಿಕ್ಕಿಯಾಗಿ (Fighter Jets Collide) ಪತನಗೊಂಡಿರುವ ಘಟನೆ ಅಮೆರಿಕದ ಮೌಂಟೇನ್ ಹೋಮ್ ವಾಯುನೆಲೆಯಲ್ಲಿ (Mountain Home Air Force Base) ಸಂಭವಿಸಿದೆ. ಘಟನೆ ಸಂಭವಿಸುತ್ತಿದ್ದಂತೆ ವಾಯುಪ್ರದೇಶವನ್ನು ತಕ್ಷಣವೇ ಲಾಕ್‌ಡೌನ್ ಮಾಡಲಾಗಿದೆ.
BREAKING: 2 U.S. Navy Super Hornets/Growlers crash and collide during Gunfighter Skies Air Show at Mountain Home Air Force Base in Idaho.
Aviation sources tell KTVB that both aircrews ejected safely. pic.twitter.com/GPsdrwTFWq
— Open Source Intel (@Osint613) May 17, 2026
ಈ ಘಟನೆಯು ಭಾನುವಾರ ಮಧ್ಯಾಹ್ನ 12:30 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಸಂಭವಿಸಿದೆ. ವಿಪರೀತ ಗಾಳಿಯಿಂದ ನಿಯಂತ್ರಣ ತಪ್ಪಿ ಒಂದು ಯುದ್ಧ ವಿಮಾನ (Fighter Jet) ಮತ್ತೊಂದು ಯುದ್ಧವಿಮಾನಕ್ಕೆ ಡಿಕ್ಕಿ ಹೊಡಿದಿದೆ. ತಕ್ಷಣವೇ ವಿಮಾನ ಹಾನಿಗೀಡಾಗಿ ಆಕಾಶದಲ್ಲಿ ಬೆಂಕಿ ಉಂಡೆಗಳು ಚಿಮ್ಮಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ.
ಅಪಘಾತದಲ್ಲಿ ಸಿಲುಕಿರುವ ವಿಮಾನಗಳು F-18 ಹಾರ್ನೆಟ್‌ನ ಸುಧಾರಿತ ಯುದ್ಧ ವಿಮಾನದ ರೂಪಾಂತರ ಮತ್ತು US ನೌಕಾಪಡೆ/ವಾಯುಪಡೆಯು ಬಳಸುವ ಎರಡು EA-18G ಗ್ರೋಲರ್ ಯುದ್ಧ ವಿಮಾನಗಳಾಗಿವೆ. 2 ವಿಮಾನಗಳು ಅಮೆರಿಕದ ವಾಯುನೆಲೆಯಿಂದ ಸುಮಾರು 2 ಮೈಲಿಗಳಷ್ಟು ದೂರದಲ್ಲಿ ಅಪಘಾತಕ್ಕೀಡಾಗಿವೆ. ಘಟನೆ ಸಂಭವಿಸುತ್ತಿದ್ದಂತೆ ವಾಯುಪಡೆಯ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯನ್ನು ಮೇಲ್ವಿಚಾರಣೆ ನಡೆಸಯುತ್ತಿವೆ. ಜೊತೆಗೆ ವಿಮಾನ ಅಪಘಾತಕ್ಕೆ ನಿಖರ ಕಾರಣವೇನೆಂಬುದನ್ನ ಪತ್ತೆ ಮಾಡುತ್ತಿವೆ.

ಆಕಾಶದಲ್ಲೇ ಉರಿದ ವಿಮಾನ, ಪೈಲಟ್ ಸೇಫ್
ಇನ್ನೂ ಫೈಟರ್ ಜೆಟ್‌ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಆಗಸದಲ್ಲೇ ಹೊತ್ತಿ ಉರಿದರೂ, ಫೈಟರ್ ಪೈಲಟ್ ಸೇರಿ ನಾಲ್ವರು ಸಿಬ್ಬಂದಿ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ. ಸಂಪೂರ್ಣ ಸುರಕ್ಷಿತವಾಗಿಯೂ ಇದ್ದಾರೆ ಎಂದು ಯುಎಸ್ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಮೌಂಟೇನ್ ಹೋಮ್ ವಾಯುನೆಲೆಯಲ್ಲಿ ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿರುವುದು ಇದೇ ಮೊದಲೇನಲ್ಲ. 2018 ರಲ್ಲಿ ಹ್ಯಾಂಗ್ ಗ್ಲೈಡರ್ ಪೈಲಟ್ ರನ್‌ವೇಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು, 2003 ರಲ್ಲಿ, ಥಂಡರ್‌ಬರ್ಡ್ ಜೆಟ್ ಅಪಘಾತಕ್ಕೀಡಾಗಿತ್ತು. ಆದ್ರೆ ಪೈಲಟ್ ಸುರಕ್ಷಿತವಾಗಿದ್ದರು.

