InternationalLatestLeading NewsMain Post

ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಬಾಂಧವ್ಯ ಬಯಸುತ್ತೆ: ಪಾಕ್‌ ಪ್ರಧಾನಿ

ಇಸ್ಲಮಾಬಾದ್: ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಬಾಂಧವ್ಯವನ್ನು ಬಯಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಹೇಳಿದ್ದಾರೆ.

ಯುಎನ್‌ಎಸ್‌ಸಿ (ವಿಶ್ವಸಂಸ್ಥೆಯ ಭದ್ರತಾ ಮಂಡಳಿ) ನಿರ್ಣಯಗಳಿಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆಯ ಮುತ್ತು ತಂದ ಆಪತ್ತು – ಜೈಲಿನಲ್ಲೇ ಪ್ರಿಯಕರ ಸಾವು

ಪಾಕಿಸ್ತಾನಕ್ಕೆ ಹೊಸದಾಗಿ ನೇಮಕಗೊಂಡ ಆಸ್ಟ್ರೇಲಿಯಾದ ಹೈ ಕಮಿಷನರ್ ನೀಲ್ ಹಾಕಿನ್ಸ್ ಅವರು ಇಸ್ಲಾಮಾಬಾದ್‌ನಲ್ಲಿ ತಮ್ಮನ್ನು ಭೇಟಿಯಾಗಿ ಸಭೆ ನಡೆಸಿದ ಸಂದರ್ಭದಲ್ಲಿ ಶೆಹಬಾಜ್‌ ಈ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ಅಂತರರಾಷ್ಟ್ರೀಯ ಸಮುದಾಯವು ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪಾತ್ರವನ್ನು ವಹಿಸಬೇಕು ಎಂದು ಎಂದು ಪಾಕ್‌ ಪ್ರಧಾನಿ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಟ್ವೀಟ್ ಮಾಡಿದ್ದಕ್ಕೆ ಸೌದಿ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ನಂತರ ಷರೀಫ್ ಈ ಹೇಳಿಕೆ ನೀಡಿದ್ದಾರೆ. ರಷ್ಯಾದ ತೈಲವನ್ನು ಖರೀದಿಸಿದ ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಇಮ್ರಾನ್ ಹರಿಹಾಯ್ದಿದ್ದರು.

ಏಪ್ರಿಲ್‌ನಲ್ಲಿ ಅಧಿಕಾರದಿಂದ ಕೆಳಗಿಳಿದ ನಂತರ, ಇಮ್ರಾನ್ ಖಾನ್ ತನ್ನ ವಿರುದ್ಧ ಯುಎಸ್ ನೇತೃತ್ವದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಜೋ ಬೈಡನ್ ಆಡಳಿತವನ್ನು ಟೀಕಿಸುವಾಗ ಇಮ್ರಾನ್ ಖಾನ್ ಅನೇಕ ಸಂದರ್ಭಗಳಲ್ಲಿ ಭಾರತವು ಪಶ್ಚಿಮದ ಬೇಡಿಕೆಗೆ ಮಣಿಯದೆ ಮತ್ತು ಯುಎಸ್‌ನ ಕಾರ್ಯತಂತ್ರದ ಮಿತ್ರ ಆಗಿದ್ದರೂ ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸಿದ್ದಕ್ಕಾಗಿ ಶ್ಲಾಘಿಸಿದ್ದರು.

Live Tv

Leave a Reply

Your email address will not be published.

Back to top button