ಹಾಸನ: ಹಾಸನಾಂಬ ದೇವಿ (Hasanamba Devi) ಸಾರ್ವಜನಿಕ ದರ್ಶನಕ್ಕೆ ಒಂಭತ್ತನೇ ದಿನ. ನಿನ್ನೆವರೆಗೂ 18 ಲಕ್ಷ ಜನರು ದರ್ಶನ ಪಡೆದುಕೊಂಡಿದ್ದಾರೆ.
ಇಂದು ಕೂಡ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ವಿಳಂಬವಾದರೂ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆಯುತ್ತಿದ್ದಾರೆ. ನಿನ್ನೆವರೆಗೂ (ನ.6) ಒಟ್ಟು 18 ಲಕ್ಷ ಜನರು ದೇವಿ ದರ್ಶನ ಪಡೆದಿದ್ದಾರೆ. ಜೊತೆಗೆ 1000, 300 ರೂ. ವಿಶೇಷ ದರ್ಶನದ ಟಿಕೆಟ್ ಮಾರಾಟ ಹಾಗೂ ಲಾಡು ಪ್ರಸಾದ ಮಾರಾಟದಿಂದ 17 ಕೋಟಿ ರೂ. ಅಧಿಕ ಆದಾಯ ಸಂಗ್ರಹವಾಗಿದೆ. ಇದನ್ನೂ ಓದಿ: ಚಿನ್ನದ ವ್ಯಾಮೋಹಕ್ಕೆ ಬ್ರೇಕ್: ಭಾರತದಲ್ಲಿ ಬಹು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಹಳದಿ ಲೋಹದ ಬೇಡಿಕೆ!
ಇಂದು ಕೂಡ ಪ್ರೋಟೋಕಾಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸಲಿದ್ದಾರೆ. ಧರ್ಮದರ್ಶನದ ಸಾಲು ತುಂಬಿ ತುಳುಕುತ್ತಿದ್ದು, 1,000, 300 ರೂ. ವಿಶೇಷ ದರ್ಶನದ ಸಾಲಿನಲ್ಲಿ ಭಕ್ತರು ಕಡಿಮೆಯಿದ್ದಾರೆ.
