Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: `ಆಪರೇಷನ್ ಟ್ರೂ ಪ್ರಾಮಿಸ್-4′ – ಕದನ ವಿರಾಮ ಮಾತುಕತೆ ನಡುವೆ ಹೊಸ ದಾಳಿ ಆರಂಭಿಸಿದ ಇರಾನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | `ಆಪರೇಷನ್ ಟ್ರೂ ಪ್ರಾಮಿಸ್-4′ – ಕದನ ವಿರಾಮ ಮಾತುಕತೆ ನಡುವೆ ಹೊಸ ದಾಳಿ ಆರಂಭಿಸಿದ ಇರಾನ್

Latest

`ಆಪರೇಷನ್ ಟ್ರೂ ಪ್ರಾಮಿಸ್-4′ – ಕದನ ವಿರಾಮ ಮಾತುಕತೆ ನಡುವೆ ಹೊಸ ದಾಳಿ ಆರಂಭಿಸಿದ ಇರಾನ್

Public TV
Last updated: March 27, 2026 12:12 pm
Public TV
Share
3 Min Read
Iran Israel
SHARE

– ಹಾರ್ಮುಜ್‌ ಬಿಕ್ಕಟ್ಟಿನ ಮಧ್ಯೆಯೂ ಇರಾನ್ ಗಳಿಕೆ ದಿನಕ್ಕೆ 13 ಸಾವಿರ ಕೋಟಿ
– ಸೇನೆಯ ಸನ್ನದ್ಧತೆ ಬಗ್ಗೆ ಕಳವಳ; ಇಸ್ರೇಲ್‌ಗೆ ಇಯಾಲ್ ಜಮೀರ್ ಎಚ್ಚರಿಕೆ

ಟೆಹ್ರಾನ್‌/ಜೆರುಸಲೆಂ: ಮಧ್ಯಪ್ರಾಚ್ಯದ ಸಂಘರ್ಷ ಇನ್ನಷ್ಟು ದಿನ ಹೆಚ್ಚುವ ಸಾಧ್ಯತೆಗಳಿದೆ, ಕದನ ವಿರಾಮದ ದಿನಾಂಕ ಪದೇ ಪದೇ ಮುಂದೂಡುತ್ತಿರುವ ಅಮೆರಿಕ – ಇರಾನ್ (US vs Iran_ ಮುಂದೆ ಮಾತುಕತೆ ಪ್ರಸ್ತಾಪ ಇಡುತ್ತಿದೆ. ಆದರೆ ಸಂಪೂರ್ಣ ಶರಣಾಗತಿ ಸಾಧ್ಯವಿಲ್ಲ ಎಂದಿರುವ ಇರಾನ್ ಮಾತುಕತೆಯನ್ನು ಧಿಕ್ಕರಿಸಿ ದಾಳಿ ಮುಂದುವರಿಸಿದೆ. ಈ ನಡುವೆ ಇಸ್ರೇಲ್‌ಗೆ ಗೆ ಗಂಭೀರ ಎಚ್ಚರಿಕೆಯೊಂದು ಸಿಕ್ಕಿದೆ.

ದೊಡ್ಡಣ್ಣನ ಎದುರು ಮಂಡಿಯೂರದ ಇರಾನ್‌
ಅಮೆರಿಕ – ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ 28 ನೇ ದಿನಕ್ಕೆ ತಲುಪಿದೆ. ಕದನ ವಿರಾಮದ ಮಾತುಕತೆಗಳ ನಡುವೆ ತೀವ್ರ ಸ್ವರೂಪದ ದಾಳಿಗಳು ನಡೆಯುತ್ತಿವೆ. 15 ಷರತ್ತುಗಳೊಂದಿಗೆ ಕದನ ವಿರಾಮದ ಪ್ರಸ್ತಾಪ ಇಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಕದನ ವಿರಾಮದ ದಿನಾಂಕ ಮುಂದೂಡಿದ್ದಾರೆ.

Iran 2

ಇಂಧನ ಮೂಲಸೌಕರ್ಯಗಳನ್ನ ಗುರಿಯಾಗಿಸಿಕೊಂಡು ಸೇನಾ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧವಾಗಿದ್ದ ಅಮೆರಿಕ, ಇದೀಗ ಇದ್ದಕ್ಕಿದ್ದಂತೆ 10 ದಿನಗಳ ಗಡುವು ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಟ್ರಂಪ್ ಅವರು ಯುದ್ಧದ ನಡುವೆಯೂ ರಾಜತಾಂತ್ರಿಕ ಮಾರ್ಗಕ್ಕೆ ಒತ್ತು ನೀಡುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಅವರು, ಈ ನಿರ್ಧಾರವನ್ನು ಇರಾನ್‌ನ ವಿನಂತಿಯ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಾತುಕತೆಗಳಿಗೆ ಇನ್ನಷ್ಟು ಸಮಯ ನೀಡುವುದರಿಂದ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬಹುದು ಎಂಬ ನಂಬಿಕೆಯನ್ನ ಅವರು ವ್ಯಕ್ತಪಡಿಸಿದ್ದಾರೆ. ಈ ಅವಧಿಯಲ್ಲಿ ಇರಾನ್ ತನ್ನ ನಿಲುವಿನಲ್ಲಿ ಬದಲಾವಣೆ ತರಬಹುದು ಮತ್ತು ಅಮೆರಿಕ ನೀಡಿದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ಆದರೆ, ಇರಾನ್ ಈ ಹೇಳಿಕೆಗಳಿಗೆ ಸ್ಪಷ್ಟ ಬೆಂಬಲ ನೀಡಿಲ್ಲ. ಅಮೆರಿಕ ನೀಡಿದ ಪ್ರಸ್ತಾವನೆಗಳು ಏಕಪಕ್ಷೀಯವಾಗಿವೆ ಮತ್ತು ತಮ್ಮ ಹಿತಾಸಕ್ತಿಗಳಿಗೆ ಅನುಕೂಲಕರವಾಗಿಲ್ಲ ಎಂದು ಟೀಕಿಸಿದೆ.

Trump unveils Board of Peace India absent from stage Pakistan joins

ಪಾಕ್‌ ಮಧ್ಯಸ್ಥಿಕೆ
ಪಾಕಿಸ್ತಾನ, ಟರ್ಕಿ ಮತ್ತು ಇತರ ಕೆಲವು ದೇಶಗಳು ಅಮೆರಿಕ ಮತ್ತು ಇರಾನ್ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ನೇರ ಮಾತುಕತೆಗಳಿಗಿಂತ ಪರೋಕ್ಷ ಮಾತುಕತೆಗಳು ನಡೆಯುತ್ತಿರುವುದರಿಂದ ಶಾಂತಿ ಒಪ್ಪಂದದ ಬಗ್ಗೆ ಅನುಮಾನಗಳು ಮೂಡತೊಡಗಿವೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಇರಾನ್ ಜೊತೆಗಿನ ಮಾತುಕತೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂಬ ಹೇಳಿಕೆ ಮತ್ತು ಇರಾನ್ ಪ್ರತಿಕ್ರಿಯೆ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.

ಮಾತುಕತೆ ನಡುವೆಯೇ ಹೊಸ ದಾಳಿ
ಕದನ ವಿರಾಮಕ್ಕೆ ಮಾತುಕತೆಗಳು ನಡೆಯುತ್ತಿರುವ ಹೊತ್ತಲ್ಲೇ ಆಪರೇಷನ್ ಟ್ರೂ ಪ್ರಾಮಿಸ್-4 ರ 83 ನೇ ಹೊಸ ದಾಳಿಯನ್ನ ಇರಾನ್‌ನ ಐಆರ್‌ಜಿಸಿ ಪ್ರಾರಂಭಿಸಿದೆ. ಸುಧಾರಿತ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಧ್ಯಪ್ರಾಚ್ಯದ ಪ್ರಮುಖ ಅಮೆರಿಕನ್‌ ಮತ್ತು ಇಸ್ರೇಲಿ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿ ದಾಳಿ ಅಮೇರಿಕಾದ‌ ನೆಲೆಗಳು ಮತ್ತು ಇಸ್ರೇಲ್ ಮೇಲೆ ತೀವ್ರ ಸ್ವರೂಪದ ದಾಳಿ ನಡೆಸುತ್ತಿದೆ.

Hormuz

ಬಿಕ್ಕಟ್ಟಿನ ನಡುವೆಯೂ ಇರಾನ್‌ಗೆ ಭರ್ಜರಿ ಆದಾಯ
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕವೂ ಇರಾನ್ ದೇಶ 139 ದಶಲಕ್ಷ ಡಾಲರ್ (ಸುಮಾರು 13 ಸಾವಿರ ಕೋಟಿ) ಹೆಚ್ಚುವರಿ ಆದಾಯವನ್ನು ತೈಲ ಮಾರಾಟದಿಂದ ಗಳಿಸುತ್ತಿರುವ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಇರಾನ್ ಹಡಗುಗಳು ಮಾತ್ರ ಹಾದುಹೋಗಲು ಅವಕಾಶವಿರುವುದರಿಂದ ಕಚ್ಚಾತೈಲದ ಬೆಲೆ ಏರಿಕೆಯ ಲಾಭವನ್ನು ಇರಾನ್ ಪಡೆಯುತ್ತಿದೆ. ಅತಿಹೆಚ್ಚು ತೈಲ ರಫ್ತು ಮಾಡುತ್ತಿರುವ ದೇಶವಾಗಿ ಇರಾನ್ ಹೊರಹೊಮ್ಮಿದೆ. ಯುದ್ಧಾರಂಭಕ್ಕಿಂತ ಮೊದಲು ಪಡೆಯುತ್ತಿದ್ದ ದುಪ್ಪಟ್ಟು ಆದಾಯವನ್ನು ಇರಾನ್ ಪಡೆಯುತ್ತಿದೆ. ಮುಖ್ಯವಾಗಿ ಚೀನಾ ಸೇರಿದಂತೆ ಹಲವು ಗ್ರಾಹಕರಿಗೆ ಕಚ್ಚಾ ತೈಲವನ್ನು ಮಾರಾಟ ಮಾಡುತ್ತಿದೆ.

ಈ ನಡುವೆ ಶತ್ರುದೇಶಗಳ ಹಡಗು ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸದಂತೆ ತಡೆಯುವ ಕಾನೂನುಬದ್ಧ ಹಕ್ಕು ಇರಾನ್ ಗೆ ಇದೆ ಎಂದು ಇರಾನ್ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅಬ್ಬಾಸ್ ಅರಘ್ಚಿ ಪ್ರತಿಪಾದಿಸಿದ್ದಾರೆ.

ಇಸ್ರೇಲ್‌ಗೆ ಬಂತು ಬಹುದೊಡ್ಡ ಎಚ್ಚರಿಕೆ
ಇರಾನ್, ಲೆಬನಾನ್ ಮೇಲೆ ತೀವ್ರ ದಾಳಿ ನಡೆಸುತ್ತಿರುವ ಹೊತ್ತಲ್ಲೇ ಇಸ್ರೇಲ್‌ಗೆ ಬಹುದೊಡ್ಡ ಎಚ್ಚರಿಕೆ ಬಂದಿದೆ. ಇಸ್ರೇಲ್‌ನಲ್ಲಿ ಮಿಲಿಟರಿ ಶಕ್ತಿ ಕುಸಿಯುವ ಸಾಧ್ಯತೆ ಇದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್ ಎಚ್ಚರಿಕೆ ನೀಡಿದ್ದಾರೆ. ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿರುವ ಜಮೀರ್ ಸೇನೆಯ ಸನ್ನದ್ಧತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಸುಧೀರ್ಘ ಯುದ್ಧಕ್ಕೆ ಇಸ್ರೇಲ್ ಸನ್ನದ್ಧಗೊಂಡಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

TAGGED:Abbas Araghchidonald trumpEnemy Ships Strait Of HormuzHormuz Tolliranunಅಮೆರಿಕಇರಾನ್‌ ಯುದ್ಧಇಸ್ರೇಲ್ತೈಲ ಬಿಕ್ಕಟ್ಟುಹಾರ್ಮುಜ್ ಜಲಸಂಧಿ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

strait of hormuz 4
Latest

ಹಾರ್ಮುಜ್‌ ಜಲಸಂಧಿ ಮತ್ತೆ ಬಂದ್‌ – ಭಾರತಕ್ಕೆ ತೆರಳುತ್ತಿದ್ದ 14 ಹಡಗುಗಳಿಗೆ ಇರಾನ್‌ ತಡೆ

Public TV
By Public TV
25 minutes ago
Tumakuru Narcotic Pill Sale 6 Arrested
Crime

ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆ ಮಾರಾಟಕ್ಕೆ ಯತ್ನ – 6 ಮಂದಿ ಅರೆಸ್ಟ್

Public TV
By Public TV
1 hour ago
Noida Workers Protest Arrest
Latest

ನೋಯ್ಡಾ ಹಿಂಸಾತ್ಮಕ ಪ್ರತಿಭಟನೆ ಹಿಂದಿನ ಮಾಸ್ಟರ್‌ಮೈಂಡ್‌ ತಮಿಳುನಾಡಿನಲ್ಲಿ ಅರೆಸ್ಟ್‌

Public TV
By Public TV
1 hour ago
Vinay Kulkarni 2
Crime

ಯೋಗೇಶ್ ಗೌಡ ಹತ್ಯೆ ಕೇಸ್; ಪರಸ್ಪರ 57 ಬಾರಿ ಮೊಬೈಲ್ ಕರೆ ಮಾಡಿ ಕುಲಕರ್ಣಿ-ಮುತ್ತಗಿ ಮಾತುಕತೆ

Public TV
By Public TV
2 hours ago
Manipal County Road Man Suspect Death
Bengaluru City

ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ – ಕೊಲೆ ಶಂಕೆ

Public TV
By Public TV
2 hours ago
Bengaluru Yelahanka Businessman Arrested for Blackmailing And Raping Female Customs Officer
Bengaluru City

ಪ್ರೀತಿ, ಮದುವೆ ಹೆಸರಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಗಳೊಂದಿಗೆ ದೈಹಿಕ ಸಂಪರ್ಕ – 50 ಜನರಿಗೆ ಕೃಪಾಲನಿ ಬ್ಲ್ಯಾಕ್‌ಮೇಲ್

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?