ಬಳ್ಳಾರಿ: ಹೊಸಪೇಟೆ (Hospete) ತಾಲೂಕಿನ ನಂದಿಬಂಡಿಯಲ್ಲಿ ಜೀತಕ್ಕೆ (Bonded Labour) ನೇಮಿಸಿಕೊಂಡಿದ್ದ ಒಡಿಶಾದ (Odisha) 37 ಮಂದಿಯನ್ನು ಅಧಿಕಾರಿಗಳು ಜೀತದಿಂದ ಮುಕ್ತಿ ನೀಡಿದ್ದಾರೆ.
ಶ್ರೀನಿವಾಸ್, ಮಹಾದೇವ ರಾವ್ ಮತ್ತು ವೆಂಕಟ ಪ್ರಸಾದ್ ಎಂಬವರು ಕಾರ್ಮಿಕರನ್ನು ಶೆಡ್‌ನಲ್ಲಿ ಕೂಡಿ ಹಾಕಿ ಬಲವಂತವಾಗಿ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಬೆಳಗಾವಿಯ ಸ್ಪಂದನ ಸಂಸ್ಥೆ ವಿಜಯನಗರ (Vijayanagar) ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿತ್ತು. ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿ, ಕಾರ್ಮಿಕರನ್ನು ಜೀತದಿಂದ ಮುಕ್ತಿಗೊಳಿಸಿದ್ದಾರೆ. ಇದನ್ನೂ ಓದಿ: ಸೋನಾ ಪಪ್ಪು ಸುಲಿಗೆ ಪ್ರಕರಣದಲ್ಲಿ ಕೋಲ್ಕತ್ತಾ ಡಿಸಿಪಿ ಸಂತನು ಸಿನ್ಹಾ ಅರೆಸ್ಟ್
ಪ್ರತಿ ಕುಟುಂಬಕ್ಕೆ 40,000 ರೂ. ಹಣ ಮುಂಗಡವಾಗಿ ಹಣ ನೀಡಿ, ಶ್ರೀನಿವಾಸ್ ಕರೆದುಕೊಂಡು ಬಂದಿದ್ದ. ಬಲವಂತವಾಗಿ ಕೆಲಸ ಮಾಡಿಸಿಕೊಂಡು, ವಾರಕ್ಕೆ ಒಂದೊಂದು ಕುಟುಂಬಕ್ಕೆ 500 ರೂ. ಕೊಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಎಲ್ಲಾ ಕಾರ್ಮಿಕರನ್ನು ರೈಲಿನ ಮೂಲಕ ಒಡಿಶಾಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಕಳಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ಹಾರ್ಟ್ ಅಟ್ಯಾಕ್ ಅಲ್ಲ, ಪತ್ನಿಯಿಂದ ಕೊಲೆ ಎಂದ ಸಹೋದರ- ಹೂತಿಟ್ಟ ಶವ ಹೊರತೆಗೆದು ಮರು ತನಿಖೆ

