ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸರಿಸುಮಾರು ಇನ್ನೂ 10 ತಿಂಗಳು ಬಾಕಿ ಇದೆ. ಈ ನಡುವೆ ರಾಜಕೀಯ ಪಕ್ಷಗಳ ಅಸಲಿ ಆಟಕ್ಕೆ ವೇದಿಕೆ ಸಜ್ಜಾಗುತ್ತಿದೆ.
Advertisement
ಜುಲೈ ಬಳಿಕ ಎಲೆಕ್ಷನ್ ಜ್ವರ ಮತ್ತಷ್ಟು ಕಾವೇರಲಿದ್ದು, ಬಿಜೆಪಿಯಲ್ಲೀಗ ವಯಸ್ಸಿನ ಸಮಸ್ಯೆ ಎದುರಾಗಿದೆ. 120 ಶಾಸಕರ ಪೈಕಿ ಡಜನ್‍ಗೂ ಹೆಚ್ಚು ಶಾಸಕರಿಗೆ ಏಜ್ ಫಿಯರ್ ಇದೆ. ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಕುರ್ಚಿಯಿಂದ ನಿರ್ಗಮಿಸಿದ್ದು, ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಮುನ್ಸೂಚನೆ ಕೊಟ್ಟಾಗಿದೆ. ಆದರೆ ಇನ್ನುಳಿದ ಕೆಲ ಶಾಸಕರಿಗೆ 75 ವಯಸ್ಸಿನ ಮಿತಿ ಅಡ್ಡ ಬರುತ್ತಾ ಎಂಬ ಭಯ ಇದೆ. ಹೈಕಮಾಂಡ್ ಟಿಕೆಟ್ ಕೊಡುತ್ತಾ ಇಲ್ವಾ..? ಅನ್ನೋ ಟೆನ್ಷನ್‍ನಲ್ಲಿದೆ.
Advertisement
Advertisement
2023ಕ್ಕೆ ಐವರು ಶಾಸಕರ ವಯಸ್ಸು 75 ದಾಟಲಿದ್ದು, ಬಹುತೇಕ ಎಲ್ಲರಿಗೂ ಟಿಕೆಟ್ ನಿರಾಕರಿಸಬಹುದಾ ಎಂಬ ಚರ್ಚೆ ಜೋರಾಗಿದೆ. 2023ರ ಹೊತ್ತಿಗೆ ನಾಲ್ವರು ಶಾಸಕರಿಗೆ 72 ದಾಟಲಿದ್ರೆ, ಮೂವರು ಶಾಸಕರಿಗೆ 71 ವರ್ಷ ದಾಟಲಿದೆ. ಹಾಗಾಗಿ 75 ದಾಟಿದವರಿಗೆ ಮಾತ್ರ ಟಿಕೆಟ್ ನಿರಾಕರಿಸುತ್ತಾ..? ಅಥವಾ 75ರ ಸಮೀಪ ಇರೋರಿಗೂ ಟಿಕೆಟ್ ಕೊಡಲ್ಲ ಎನ್ನುತ್ತಾ ಬಿಜೆಪಿ ಹೈಕಮಾಂಡ್ ಎಂಬ ನಾನಾ ಲೆಕ್ಕಚಾರಗಳು ನಡೆಯುತ್ತಿವೆ. ಇದನ್ನೂ ಓದಿ: ಬಂಡಾಯ ಶಾಸಕರಿಂದ ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಮೊರೆ- ಇಂದು ವಿಚಾರಣೆ
Advertisement
ಈ ನಡುವೆ ಕೆಲವರು ಅಪ್ಪಿತಪ್ಪಿ ನಮಗೆ ಟಿಕೆಟ್ ತಪ್ಪಿದ್ರೂ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಂಗೆ ಇದೆ. ಹಾಗಾಗಿ ಕೆಲ ಶಾಸಕರು ಎರಡನೇಯ ಆಪ್ಶನ್ ಆಗಿ ಮಕ್ಕಳನ್ನ ಚಾಲ್ತಿಯಲ್ಲಿಡುವ ಪ್ರಯತ್ನ ಮಾಡಿದ್ದಾರೆ. ಸದ್ಯ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ 79 ವರ್ಷ ವಯಸ್ಸಾಗಿದ್ದು, 2023ಕ್ಕೆ 80 ವರ್ಷ ತುಂಬಲಿದೆ.
2023ಕ್ಕೆ 75 ವರ್ಷ ದಾಟುವವರು..!
> ಎಸ್.ಎ.ರವೀಂದ್ರನಾಥ್, ವಯಸ್ಸು: 75, ದಾವಣಗೆರೆ ದಕ್ಷಿಣ
> ಸಿ.ಎಂ.ನಿಂಬಣ್ಣನವರ್, ವಯಸ್ಸು: 75, ಕಲಘಟಗಿ
> ಕೆ.ಎಸ್ ಈಶ್ವರಪ್ಪ, ವಯಸ್ಸು: 74, ಶಿವಮೊಗ್ಗ ನಗರ
> ಜಿ.ಹೆಚ್.ತಿಪ್ಪಾರೆಡ್ಡಿ, ವಯಸ್ಸು: 74, ಚಿತ್ರದುರ್ಗ
> ಮಾಡಾಳ್ ವಿರೂಪಾಕ್ಷಪ್ಪ, ವಯಸ್ಸು: 74, ಚನ್ನಗಿರಿ
* 2023ಕ್ಕೆ 72 ವರ್ಷ ದಾಟುವವರು..!
> ಗೋವಿಂದ ಕಾರಜೋಳ, ವಯಸ್ಸು: 71, ಮುಧೋಳ
> ವಿ.ಸೋಮಣ್ಣ, ವಯಸ್ಸು: 71, ಗೋವಿಂದರಾಜನಗರ
> ಹಾಲಾಡಿ ಶ್ರೀನಿವಾಸ ಶೆಟ್ಟಿ, ವಯಸ್ಸು: 71, ಕುಂದಾಪುರ
> ಸುಭಾಷ್ ಗುತ್ತೇದಾರ್, ವಯಸ್ಸು: 71, ಆಳಂದ
* 2023ಕ್ಕೆ 71 ವರ್ಷ ದಾಟುವವರು..!
> ಸುಕುಮಾರ ಶೆಟ್ಟಿ, ವಯಸ್ಸು: 70, ಬೈಂದೂರು
> ರಾಮಣ್ಣ ಲಮಾಣಿ, ವಯಸ್ಸು: 70, ಶಿರಹಟ್ಟಿ
> ಎಂ.ಟಿ.ಬಿ.ನಾಗರಾಜ್, ವಯಸ್ಸು 70, ಪರಿಷತ್ ಸದಸ್ಯ