– 400 ಜನರಿದ್ದ ವಾಟ್ಸಪ್ ಗ್ರೂಪ್‌ನಲ್ಲಿ ಶೇರ್; ತನಿಖೆ ಸಿಬಿಐ ಹೆಗಲಿಗೆ
ನವದೆಹಲಿ: ವೃತ್ತಿಪರ ಕೋರ್ಸ್‌ಗಳ ಕನಸು ಕಂಡು ಹಗಲು ರಾತ್ರಿ ಎನ್ನದೇ ಕಣ್ಣಿಗೆ ಎಣ್ಣೆ ಬಿಟ್ಟು ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಮೇ 3ರಂದು ನೀಟ್ ಯುಜಿ ಪರೀಕ್ಷೆ ನಡೆದಿತ್ತು. ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನೀಟ್-ಯುಜಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರದ್ದುಗೊಳಿಸಿದೆ.
ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಬಗ್ಗೆ ಬಗೆದಷ್ಟು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಅಷ್ಟಕ್ಕೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದೆಲ್ಲಿ ಎಂಬ ಮಾಹಿತಿಯೂ ಲಭ್ಯವಾಗಿದೆ. ಒಟ್ಟು 3 ಹಂತಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಜೈಪುರದಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣವಾಗಿದ್ರೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸೋರಿಕೆಗೆ ಪ್ಲ್ಯಾನ್ ಮಾಡಿದ್ರು ಎನ್ನಲಾಗಿದೆ. ಹರಿಯಾಣದ ಗುರುಗ್ರಾಮದ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಮಾಹಿತಿ ಲಭ್ಯವಾಗಿದೆ. ಇನ್ನೂ 5 ಸೆಟ್‌ಗಳ 10 ಪ್ರಶ್ನೆಗಳು ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ಲೀಕ್ ಆಗಿದೆ. ಒಟ್ಟು 10 ಮಾದರಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ.

ಪ್ರಶ್ನೆಪತ್ರಿಕೆ ಮಾಫಿಯಾ ಹಿಂದೆ ನಾಸಿಕ್ ಗ್ಯಾಂಗ್
`ಪ್ರೈವೇಟ್ ಮಾಫಿಯಾ’ ವಾಟ್ಸಫ್ ಗ್ರೂಪ್ ಮೂಲಕ ಪ್ರಶ್ನೆಪತ್ರಿಕೆ ಹಂಚಿಕೆಲಾಗಿದೆ. ಡಿಜಿಟಲ್ ಪ್ರಶ್ನೆಪತ್ರಿಕೆಯನ್ನ ಟೆಲಿಗ್ರಾಮ್, ವಾಟ್ಸಾಪ್ ಮೂಲಕ ಲೀಕ್ ಮಾಡಲಾಗಿದೆ. ಅಷ್ಟೇ ಅಲ್ಲದೇ, ಪ್ರಶ್ನೆಪತ್ರಿಕೆ ಮಾಫಿಯಾ ಹಿಂದೆ ನಾಸೀಕ್ ಗ್ಯಾಂಗ್ ಇರುವುದು ತನಿಖೆಯಲ್ಲಿ ಬಯಲಾಗಿದೆ. ಇತ್ತ ಪ್ರೈವೇಟ್ ಕಂಪನಿಯ ಕೊರಿಯರ್ ಉದ್ಯೋಗಿಗಳು ಕೂಡ ಭಾಗಿಯಾಗಿರುವ ಶಂಕೆಯೂ ವ್ಯಕ್ತವಾಗಿತ್ತು. ಅದರಂತೆ ಓರ್ವ ಕೊರಿಯರ್ ಉದ್ಯೋಗಿಯನ್ನು ಬಂಧಿಸಲಾಗಿದೆ. ಜೊತೆಗೆ ನಾಸೀಕ್‌ನಲ್ಲಿ ಮತ್ತೊಬ್ಬ ಯುವಕನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪರೀಕ್ಷೆ ಹಿಂದಿನ ರಾತ್ರಿ ಪ್ರಶ್ನೆ ಪತ್ರಿಕೆ ಸೋರಿಕೆ
ರಾಜಸ್ಥಾನದ ಸಿಕರ್‌ನಲ್ಲಿ ಲೀಕ್ ಆಗಿದ್ದ ಪ್ರಶ್ನೆ ಪತ್ರಿಕೆಗೂ ಅಸಲಿ ಪ್ರಶ್ನೆ ಪತ್ರಿಕೆಗೂ ಹೊಂದಾಣಿಕೆ ಕಂಡುಬಂದಿತ್ತು. ಲೀಕ್ ಆದ ಪತ್ರಿಕೆ ಜೊತೆ 140 ಪ್ರಶ್ನೆಗಳು ಮ್ಯಾಚ್ ಆಗ್ತಿದ್ದವು. ಮೊದಲು 30 ಲಕ್ಷ ರೂ.ಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪರೀಕ್ಷೆ ದಿನಗಳು ಸಮೀಪಿಸುತ್ತಿದ್ದಂತೆ ದರವನ್ನ ಕಡಿಮೆ ಮಾಡುತ್ತಾ ಬಂದಿದ್ದವು. 1 ವಾರ ಮೊದಲು ಬೇಕಿದ್ದರೆ 30 ಲಕ್ಷ ರೂ., ಒಂದು ದಿನದ ಹಿಂದೆ ಪಡೆದವರಿಗೆ 5 ಲಕ್ಷ ರೂ.ಗೆ ಪ್ರಶ್ನೆಪತ್ರಿಕೆ ಸೇಲ್ ಮಾಡಿದ್ದ ಗ್ಯಾಂಗ್ ಪರೀಕ್ಷೆ ಹಿಂದಿನ ರಾತ್ರಿ ಖರೀದಿಸುವವರಿಗೆ 30 ಸಾವಿರ ರೂ.ಗೆ ಮಾರಾಟ ಮಾಡಲಾಗಿತ್ತು ಎನ್ನಲಾಗ್ತಿದೆ. ಹ್ಯಾಂಡ್ ರೈಟಿಂಗ್‌ನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ವು ಎನ್ನಲಾಗ್ತಿದೆ. ನೀಟ್ ಜೀವಶಾಸ್ತ್ರದ 90 ಪ್ರಶ್ನೆಗಳು, ಕೆಮಿಸ್ಟ್ರಿಯ 35 ಪ್ರಶ್ನೆಗಳು, ಒಟ್ಟು 140 ಪ್ರಶ್ನೆಗಳು ಸೋರಿಕೆ ಆಗಿವೆ.

ಇನ್ನು, ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಓರ್ವ ಡಾಕ್ಟರ್, ಎಂಬಿಬಿಎಸ್ ಸ್ಟೂಡೆಂಟ್ ಹಾಗೂ ಸಿಕಾರ್‌ನ ಪಿಜಿ ಕೈವಾಡ ಇದೆ ಅನ್ನೋದು ಬೆಳಕಿಗೆ ಬಂದಿದೆ. ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕಿರುವ ಇವರು ಹೇಗೆ ಪೇಪರ್ ಲೀಕ್ ಮಾಡಿದರು ಅನ್ನೋದನ್ನು ನೋಡೋದಾದರೆ…
ಕ್ವೇಶ್ಚನ್ ಪೇಪರ್ ಲೀಕ್ ಜಾಲ..!
* ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪೇಪರ್ ಲೀಕ್
* ನಾಸಿಕ್‌ನಿಂದ ಹರ್ಯಾಣದ ಗುರುಗ್ರಾಮಕ್ಕೆ ರವಾನೆ
* ಗುರುಗ್ರಾಮದಿಂದ ರಾಜಸ್ಥಾನದ ಜೈಪುರ, ಜಾಮ್‌ವಾರಾಮ್‌ಗಢ, ಸಿಕಾರ್‌ಗೆ ರವಾನೆ
* ರಾಜಸ್ಥಾನದ ಸಿಕಾರ್‌ನಿಂದ ದೇಶದ ಹಲವೆಡೆಗೆ ಪ್ರಶ್ನೆ ಪತ್ರಿಕೆ ಹಂಚಿಕೆ
* ಸಿಕಾರ್‌ನಿಂದ ಜಮ್ಮು & ಕಾಶ್ಮೀರ, ಬಿಹಾರ, ಕೇರಳ, ಉತ್ತರಾಖಂಡ್‌ಗೆ ಹಂಚಿಕೆ
* ಸಿಕಾರ್‌ನಿಂದ ಕೋಚಿಂಗ್, ಕೌನ್ಸಿಲಿಂಗ್, ವಿದ್ಯಾರ್ಥಿ ವಾಟ್ಸಪ್ ಗುಂಪುಗಳಿಗೆ ಹಂಚಿಕೆ
* 5,000 ರೂಪಾಯಿಯಿಂದ 28 ಲಕ್ಷದವರೆಗೆ ಪೇಪರ್ ಲೀಕ್ ಡೀಲ್
ಇದೀಗ ಇಡೀ ಜಾಲ, ಹಂಚಿಕೆ ಕೇಂದ್ರದ ಬೆನ್ನುಬಿದ್ದಿದೆ ರಾಜಸ್ಥಾನದ ಎಸ್‌ಓಜಿ ಹಾಗೂ ಸಿಬಿಐ ತನಿಖಾ ತಂಡ.
400 ಜನರಿದ್ದ ವಾಟ್ಸಪ್ ಗ್ರೂಪ್‌ನಲ್ಲಿ ಶೇರ್
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ದೊಡ್ಡ ಮಾಫಿಯಾವೇ ಇದೆ ಎನ್ನಲಾಗ್ತಿದೆ. ನಾಸಿಕ್‌ನಲ್ಲಿ ಭೇಟಿಯಾಗಿದ್ದ ಆರೋಪಿಗಳ ಗ್ಯಾಂಗ್ ಪ್ರವೇಟ್ ಮಾಫಿಯಾ ಎಂಬ 400 ಜನರಿದ್ದ ವಾಟ್ಸಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ರಂತೆ. ವಾಟ್ಸಪ್ ಮೂಲಕ 10 ಕಾಪಿಗಳನ್ನು ರವಾನೆ ಮಾಡಿದ್ದಾರೆ. ತನಿಖೆ ವೇಳೆ ಹಲವು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಐದಾರು ಹಂತಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆ ಇದೆ. ಮಾಸ್ಟರ್ ಮೈಂಡ್ ಮನೀಶ್ ಯಾದವ್ ಜೊತೆ ಸೇರಿ ರಾಕೇಶ್ ಮಂಡಾವರಿಯಾ ಎಂಬಾತ ಪ್ರಶ್ನೆ ಪತ್ರಿಕೆ ಹಂಚಿದ್ದ. ಸದ್ಯ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಪ್ರಶ್ನೆ ಪತ್ರಿಕೆ ಪ್ರಿಂಟಿಂಗ್ ವೇಳೆಯೇ ಸೋರಿಕೆ ಶಂಕೆ ಇದೆ. ರಾಜಸ್ಥಾನ ಅಲ್ಲದೇ ವಿವಿಧ ರಾಜ್ಯಗಳಿಗೆ ಪ್ರಶ್ನೆ ಪತ್ರಿಕೆ ರವಾನೆ ಮಾಡಲಾಗಿದೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಆಂಧ್ರ, ತೆಲಂಗಾಣ, ಕೇರಳ ರಾಜ್ಯಗಳಿಗೆ ಪ್ರಶ್ನೆ ಪತ್ರಿಕೆ ಹಂಚಿಕೆ ಮಾಹಿತಿ ಇದೆ.

