– ತಾಂತ್ರಿಕ ದೋಷ ಸರಿಪಡಿಸಲು ಮುಂದಾದ ಎನ್‌ಟಿಎ
ನವದೆಹಲಿ: ನೀಟ್-ಯುಜಿ ಮರುಪರೀಕ್ಷೆ(Re-NEET )ವೇಳೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಮರುಪರೀಕ್ಷೆಯ ಪ್ರವೇಶ ಪತ್ರ (ಹಾಲ್‌ಟಿಕೆಟ್)ದಲ್ಲಿ ಅಭ್ಯರ್ಥಿಗೆ ಅಬುಧಾಬಿ ಕೇಂದ್ರವನ್ನ ನಿಗದಿಮಾಡಲಾಗಿದೆ.
ನಾಗ್ಪುರದ (Nagpur) ವಿದ್ಯಾರ್ಥಿಗೆ ತಾಂತ್ರಿಕ ದೋಷದಿಂದ ಅಬುಧಾಬಿಯ (Abu Dhabi) ಪರೀಕ್ಷಾ ಕೇಂದ್ರ ನಿಗದಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಎನ್‌ಟಿಎ ಮಾಡಿದ ಈ ಎಡವಟ್ಟು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ನಾಗ್ಪುರ ಮೂಲದ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬ ವಿದ್ಯಾರ್ಥಿ, ರೀ-ನೀಟ್ 2026 ಪ್ರವೇಶ ಪತ್ರ ಡೌನ್‌ಲೋಡ್ ಮಾಡಿದ ವೇಳೆ ಪರೀಕ್ಷಾ ಕೇಂದ್ರವಾಗಿ ಯುಎಇಯ ಅಬುಧಾಬಿ ನಗರದ ಶಾಲೆಯೊಂದರ ಹೆಸರು ಕಾಣಿಸಿಕೊಂಡಿದೆ.
ಅಬ್ದುಲ್ಲಾ ನಾಗ್ಪುರದಿಂದಲೇ ಅರ್ಜಿ ಸಲ್ಲಿಸಿದ್ದರು. ನಾಗ್ಪುರ, ವರ್ಧಾ ಮತ್ತು ಭಂಡಾರಾ ನಗರಗಳನ್ನು ಪರೀಕ್ಷಾ ಕೇಂದ್ರಗಳಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಪ್ರವೇಶ ಪತ್ರದಲ್ಲಿ ಅಬುಧಾಬಿ ಕೇಂದ್ರ ತೋರಿಸಿದ್ದಕ್ಕೆ ವಿದ್ಯಾರ್ಥಿ ಸೇರಿದಂತೆ ಆತನ ಕುಟುಂಬಕ್ಕೆ ಅಚ್ಚರಿಯಾಗಿದೆ. ಪಾಸ್‌ಪೋರ್ಟ್ ಇಲ್ಲದ ಮಗ ವಿದೇಶಕ್ಕೆ ಹೋಗಿ ಹೇಗೆ ಪರೀಕ್ಷೆ ಬರೆಯಬೇಕು ಎಂದು ಆತನ ತಂದೆ-ತಾಯಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಷಯ ಕೆಲವೇ ಸಮಯದೊಳಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.ಇದನ್ನೂಓದಿ: Operation Tiger | ಫೈವ್ ಸ್ಟಾರ್ ಹೋಟೆಲ್‌ನಲ್ಲಿ ರೆಬಲ್ ಸಂಸದರು – ನಾಳೆಯೇ ಶಿಂಧೆ ಬಣ ಸೇರುವ ಸಾಧ್ಯತೆ
ಘಟನೆಯ ಮಾಹಿತಿ ತಿಳಿದ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸ್ಪಂದಿಸಿದೆ. ಇದು ತಾಂತ್ರಿಕ ದೋಷದಿಂದ ಆಗಿರುವ ತಪ್ಪು ಎಂದು ಸಂಸ್ಥೆ ತಿಳಿಸಿದೆ. ವಿದ್ಯಾರ್ಥಿಯ ದೂರನ್ನು ಪರಿಶೀಲಿಸಲಾಗುತ್ತಿದೆ. ಅಗತ್ಯ ಪರಿಶೀಲನೆ ಬಳಿಕ ನಾಗ್ಪುರದಲ್ಲೇ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಿ ಹೊಸ ಪ್ರವೇಶ ಪತ್ರ ನೀಡಲಾಗುವುದು ಎಂದು ಎನ್‌ಟಿಎ ಭರವಸೆ ನೀಡಿದೆ.
ಇದೇ ವೇಳೆ ಪರೀಕ್ಷಾರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿರುವ ಹೆಸರು, ವೈಯಕ್ತಿಕ ಮಾಹಿತಿ, ಪರೀಕ್ಷಾ ಕೇಂದ್ರ ಮತ್ತು ಇತರ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಎನ್‌ಟಿಎ ಸೂಚಿಸಿದೆ. ಯಾವುದೇ ತಪ್ಪು ಕಂಡುಬಂದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಲಹೆ ನೀಡಲಾಗಿದೆ. ಇದನ್ನೂಓದಿ: ಕೇರಳ ಮೂಲದವರ 20 ಲಕ್ಷ ರಾಬರಿ ಕೇಸ್ – ಸಿಐಡಿ ಇನ್ಸ್ಪೆಕ್ಟರ್ ಸೇರಿ ಮೂವರು ಅರೆಸ್ಟ್
