Bengaluru CityCinemaKarnatakaLatestMain PostTV Shows

ಹೊಟ್ಟೆಗೆ ಗಾಯ, ತೀವ್ರ ರಕ್ತಸ್ರಾವದಿಂದ ಸಮನ್ವಿ ಸಾವು: ಡಿಸಿಪಿ ಕುಲದೀಪ್ ಜೈನ್

ಬೆಂಗಳೂರು: ಗುರುವಾರ ನಡೆದ ದುರ್ಘಟನೆಯಲ್ಲಿ ಟಿಪ್ಪರ್‌ನ ಮಡ್‌ಗಾರ್ಡ್ ಬಾಲಕಿ ಸಮನ್ವಿಯ ಹೊಟ್ಟೆಗೆ ತಾಗಿದ್ದರಿಂದ ತೀವ್ರವಾದ ಗಾಯವಾಗಿದೆ. ಇದರಿಂದ ಹೆಚ್ಚಿನ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮಗು ಸಾವನ್ನಪ್ಪಿದೆ ಎಂದು ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಗುರುವಾರ ಸಂಜೆ ಕೋಣನಕುಂಟೆ ಕ್ರಾಸ್ ಬಳಿ ತಾಯಿ-ಮಗಳು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಸ್ಕೂಟಿಗೆ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟಿಯಲ್ಲಿದ್ದ ಮಗು-ತಾಯಿ ಇಬ್ಬರು ಬಿದ್ದಿದ್ದರಿಂದ ಅಫಘಾತವಾಗಿದೆ. ತನಿಖೆಯಲ್ಲಿ ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಇರುವುದು ತಿಳಿದುಬಂದಿದ್ದು, ಟಿಪ್ಪರ್ ಗಾಡಿ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

ಮಗು ರಿಯಾಲಿಟಿ ಶೋ ಒಂದರಲ್ಲಿ ಗುರುತಿಸಿಕೊಂಡಿದ್ದು, ಅವರ ತಂದೆ ಕೂಡಾ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೂ ಈ ಘಟನೆ ನೋವು ತಂದಿದೆ ಎಂದು ಡಿಸಿಪಿ ಕುಲದೀಪ್ ಜೈನ್ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ : ಬಿಕ್ಕಿ ಬಿಕ್ಕಿ ಅತ್ತ ತಂದೆ ರೂಪೇಶ್

Leave a Reply

Your email address will not be published. Required fields are marked *

Back to top button