ಮಲಯಾಳಂ ಸಿನಿಮಾ ರಂಗದಲ್ಲಿನ ಲೈಂಗಿಕ ದೌರ್ಜನ್ ವರದಿ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಜಸ್ಟಿಸ್ ಹೇಮಾ ಸಲ್ಲಿಸಿದ ವರದಿಯಲ್ಲಿನ ಕೆಲವು ಅಂಶಗಳು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿವೆ. ಈಗಾಗಲೇ ಕೆಲವರ ತಲೆದಂಡ ಕೂಡ ಆಗಿದೆ. ಅನೇಕ ನಟಿಯರು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ, ಈ ವರದಿ ಕುರಿತಂತೆ ಪ್ರಮುಖ ನಟರಾರೂ ಬಹಿರಂಗವಾಗಿ ಮಾತಾಡಿರಲಿಲ್ಲ. ಮೊದಲ ಬಾರಿಗೆ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮಾತಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿರಾಜ್ (Prithviraj Sukumaran) , ಹೇಮಾ ವರದಿಯಲ್ಲಿನ ಹೆಸರುಗಳನ್ನು ಸರಕಾರವೇ ಬಹಿರಂಗ ಪಡಿಸಬೇಕು. ಚಿತ್ರೀಕರಣದ ಸ್ಥಳದಲ್ಲಿನ ಸುರಕ್ಷತೆಯ ಬಗ್ಗೆ ಗಮನ ಹೆರಿಸಬೇಕು. ಏಕರೂಪದ ಮಾರ್ಗಸೂಚಿಯನ್ನು ತಯಾರಿಸಬೇಕು. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ತನಿಖೆ ಆಗಿ ಶಿಕ್ಷೆಯಾಗಬೇಕು. ಮಹಿಳೆಯರು ಈ ವಿಷ್ಯದಲ್ಲಿ ಸುಳ್ಳು ಹೇಳಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ.

ಆರಂಭಿಕ ಹಂತಗಳಲ್ಲಿ ಕೆಲವು ತಪ್ಪುಗಳು ಆಗಿರಬಹುದು. ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಸಂಪೂರ್ಣ ಮತ್ತು ವಿವರವಾದ ತನಿಖೆಯ ಅಗತ್ಯವಿದೆ. ಆರೋಪಿಗಳು ತನಿಖೆಯನ್ನು ಎದುರಿಸಲೇಬೇಕು. ಮತ್ತು ತನಿಖೆ ಎದುರಿಸುವಾಗ ತಮ್ಮ ಸ್ಥಾನದಿಂದ ಕೆಳಗೆ ಇಳಿದಿರಬೇಕು ಎಂದು ಪೃಥ್ವಿರಾಜ್ ಮಾತನಾಡಿದ್ದಾರೆ.

ಮಲಯಾಳಂ ಸಿನಿಮಾ ರಂಗದ ಗುಂಪುಗಾರಿಕೆಯ ಕುರಿತಂತೆಯೂ ಪೃಥ್ವಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಗುಂಪುಗಾರಿಕೆಯನ್ನು ನಾನು ವಿರೋಧಿಸುತ್ತೇನೆ. ಇಂತಹ ಗುಂಪುಗಳು ಯಾವುದೇ ಸಿನಿಮಾ ರಂಗದಲ್ಲಿ ಇರಬಾರದು ಎಂದಿದ್ದಾರೆ. ಹೇಮಾ ಸಮಿತಿ ವರದಿ ಬಿಡುಗಡೆ ಆದ ನಂತರ ಯಾರೂ ಈ ಕುರಿತಂತೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಪೃಥ್ವಿರಾಜ್ ಆಡಿದ ಮಾತೂ ಕೂಡ ವೈರಲ್ ಆಗ್ತಿವೆ.

ಏನಿದೆ ಜಸ್ಟಿಸ್ ಹೇಮಾ ವರದಿಯಲ್ಲಿ?
ಮಲಯಾಳಂ (Malayalam) ಸಿನಿಮಾರಂಗದಲ್ಲಿ 2017ರಲ್ಲಿನಡೆದಲೈಂಗಿಕದೌರ್ಜನ್ಯಪ್ರಕರಣವನ್ನುಗಂಭೀರವಾಗಿತೆಗೆದುಕೊಂಡಿದ್ದಕೇರಳಸರಕಾರ, ಮಲಯಾಳಂಚಿತ್ರರಂಗದಲ್ಲಿನಡೆಯುತ್ತಿರುವಮಹಿಳಾಲೈಂಗಿಕದೌರ್ಜನ್ಯದಕುರಿತಂತೆವರದಿನೀಡಲುನ್ಯಾಯಮೂರ್ತಿಕೆಹೇಮಾಸಮಿತಿಯನ್ನು (Hema Report) ರಚಿಸಿತ್ತು. ಈವರದಿಯನ್ನುಸರಕಾರಕ್ಕೆಸಲ್ಲಿಸಲಾಗಿದ್ದು, ಈಗಆರ್ಟಿಐಮೂಲಕವರದಿಯುಬಹಿರಂಗಗೊಂಡಿದೆ. ವರದಿಯಲ್ಲಿಉಲ್ಲೇಖವಾಗಿರೋಅಂಶಗಳುಚಿತ್ರೋದ್ಯಮದಲ್ಲಿಅಲ್ಲೋಲಕಲ್ಲೋಲಸೃಷ್ಟಿಮಾಡಿವೆ.

ಮಲಯಾಳಂಸಿನಿಮಾರಂಗ (Film Industry) ಕೆಲವುಪುರುಷಹಿಡಿತದಲ್ಲಿದ್ದು, ಅವರುಹೇಳಿದಂತೆಕೇಳದೇಇದ್ದರೆ, ಯಾವನಟಿಯರಿಗೂಅಲ್ಲಿಅವಕಾಶಸಿಗುವುದಿಲ್ಲ. ಮಹಿಳೆಯರುಚಿತ್ರೋದ್ಯಮದಲ್ಲಿಹೊಂದಾಣಿಕೆಮಾಡಿಕೊಂಡುಕೆಲಸಮಾಡಬೇಕು, ಇಲ್ಲಚಿತ್ರೋದ್ಯಮವನ್ನುತೊರೆಯಬೇಕುಅನ್ನುಅಂಶಗಳನ್ನುವರದಿಯಲ್ಲಿಉಲ್ಲೇಖಮಾಡಲಾಗಿದೆ. ಚಿತ್ರೋದ್ಯಮದಲ್ಲಿಮಾಫಿಯಾಎಂಟ್ರಿಕೊಟ್ಟಿದೆಅನ್ನೋಅಂಶವೂಸೇರ್ಪಡೆಯಾಗಿದೆ. ವರದಿಯಅಧ್ಯಯನದಸಂದರ್ಭದಲ್ಲಿಮಲಯಾಳಂಚಿತ್ರೋದ್ಯಮವುಕೆಲನಿರ್ಮಾಪಕರ, ನಿರ್ದೇಶಕರಹಾಗೂನಟರಹಿಡಿತದಲ್ಲಿರುವುದುಕಂಡುಬಂದಿದೆ. ಇದಿಷ್ಟೇಜನರುಮಲಯಾಳಂಚಿತ್ರೋದ್ಯಮವನ್ನನಿಯಂತ್ರಿಸುತ್ತಿದ್ದಾರೆ. ಈಉದ್ಯಮವುಅಪರಾಧಿಗಳಮತ್ತುಸ್ತ್ರೀದ್ವೇಷಿಗಳಿಂದಹೆಚ್ಚುಪ್ರಭಾವಿತವಾಗಿದೆಎಂದು ವರದಿಯಲ್ಲಿಉಲ್ಲೇಖಮಾಡಲಾಗಿದೆ.

ಮಹಿಳೆಯರುಚಿತ್ರೋದ್ಯಮಕ್ಕೆಹಣಮಾಡಲುಬರುತ್ತಿದ್ದಾರೆ. ಹಾಗಾಗಿಅವರುಎಲ್ಲದಕ್ಕೂರೆಡಿಆಗಿರುತ್ತಾರೆಎನ್ನುವಮಾತುಕೇಳಿಬರುತ್ತಿದೆ. ಅದುನಿಜವಾದದ್ದುಅಲ್ಲ. ಕಲೆಮತ್ತುನಟನೆಯಮೇಲಿನಆಸಕ್ತಿಕಾರಣದಿಂದಾಗಿಮಹಿಳೆಯರುಸಿನಮಾರಂಗಕ್ಕೆಬರುತ್ತಿದ್ದಾರೆ. ಕೆಲವರುಅವಕಾಶಪಡೆಯಲುಅಡ್ಡದಾರಿಯನ್ನೂಹಿಡಿದಿದ್ದಾರೆಎಂದಿದೆವರದಿ. ಇದರಜೊತೆಗೆತಮ್ಮನಿಯಮಗಳಿಗೆಒಪ್ಪುವಂಥಮಹಿಳೆಯರಗುಂಪುಕೂಡಅಲ್ಲಿರಚನೆಯಾಗಿದ್ದು, ಅವರನ್ನುಕೋಡ್‍್ಹೆಸರುಗಳಿಂದಉಲ್ಲೇಖಿಸಲಾಗುತ್ತದೆ. ಎಷ್ಟೋಮಹಿಳಯರುಪಾತ್ರಗಳಿಗಾಗಿಈರೀತಿಗುಂಪಿಗೆಸೇರಿದ್ದಾರೆಅನ್ನೋಆತಂಕಕಾರಿಅಂಶಕೂಡವರದಿಯಲ್ಲಿದೆ. ನಟಿಯೊಬ್ಬಳುನಟನಿಂದದೌರ್ಜನ್ಯಕ್ಕೆಒಳಗಾಗಿ, ಮರುದಿನವೇಆಕೆಆತನೊಂದಿಗೆಪತ್ನಿಯಾಗಿಸಿನಿಮಾದಲ್ಲಿನಟಿಸಬೇಕಿತ್ತು. ಆಘಾತದಲ್ಲಿದ್ದನಟಿಯುಆದೃಶ್ಯವನ್ನುಎದುರಿಸೋಕೆಆಗದೇ 17 ಟೇಕ್ ಗಳನ್ನುತೆಗೆದುಕೊಂಡಳು. ಮತ್ತುಅವನನ್ನುಎದುರಿಸೋಕೆಆಗದೇದೃಶ್ಯಮುಗಿಸಲುಹರಸಾಹಸಪಟ್ಟಳು. ಆದೃಶ್ಯದಲ್ಲಿಒಬ್ಬರನ್ನೊಬ್ಬರುತಬ್ಬಿಕೊಳ್ಳುವಂಥದೃಶ್ಯವಿತ್ತು. ನಿಜಕ್ಕೂಅದುಭಯಾನಕಆಗಿತ್ತುಎಂದುಆನಟಿಹೇಳಿಕೊಂಡಿದ್ದಾಳೆ.

ಮಲಯಾಳಂಸಿನಿಮಾರಂಗದಲ್ಲಿನಟಿಯರಮನೆಬಾಗಿಲುಗಳುಅಥವಾತಂಗಿದಸ್ಥಳಗಳಬಾಗಿಲುಗಳುಬಡಿದುಕೊಳ್ಳುತ್ತಲೇಇರುತ್ತವೆ. ನಟಿಯರುಸ್ಪಂದಿಸದೇಹೋದರೆ, ಬಾಗಿಲುಬಡಿತ ಇನ್ನೂಜೋರಾಗುತ್ತವೆಎಂದುಮತ್ತೋರ್ವನಟಿಯೊಬ್ಬರುಸಮಿತಿಯಮುಂದೆಕರಾಳತೆಯನ್ನುಬಿಚ್ಚಿಟ್ಟಿದ್ದಾರೆ. ಜೀವಭಯಕಾರಣದಿಂದಾಗಿಪೊಲೀಸರನ್ನುಸಂಪರ್ಕಿಸಲುಸಾಕಷ್ಟುಜನರುಹಿಂದೇಟುಹಾಕಿದ್ದಾರೆಅಂತಿದೆವರದಿ. ಧೈರ್ಯದಿಂದದೂರುನೀಡಿದರೆ, ಆನಟಿಯಬದುಕೇಮುಗಿದುಹೋಗುತ್ತದೆಅನ್ನೋಅಂಶಕೂಡ ಉಲ್ಲೇಖವಾಗಿದೆ. ನಟಿಯವೃತ್ತಿಜೀವನಮುಗಿಸುವುದರಜೊತೆಗೆಆಕುಟುಂಬಗಳನ್ನುಗುರಿಯಾಗಿಸಿನಿತ್ಯಬೆದರಿಕೆಹಾಕಲಾಗುತ್ತದೆಎನ್ನುವುದನ್ನೂವರದಿಯಲ್ಲಿಉಲ್ಲೇಖ ಮಾಡಲಾಗಿದೆ. ಕುಟುಂಬಕ್ಕೆಬೆದರಿಕೆಜೊತೆಗೆಮತ್ತೆಅವಕಾಶಸಿಗುವುದಿಲ್ಲಅನ್ನೋಕಾರಣಕ್ಕೆಅನೇಕನಟಿಯರುಮೌನಕ್ಕೆಜಾರಿದ್ದಾರಂತೆ.
ಜ್ಯೂನಿಯರ್ಆರ್ಟಿಸ್ಟ್ಕುರಿತಂತೆಯೂವರದಿಯಲ್ಲಿಉಲ್ಲೇಖಿಸಲಾಗಿದ್ದು, ಲೈಂಗಿಕಹೊಂದಾಣಿಕೆಇರದೇಹೋದರೆಜ್ಯೂನಿಯರ್ಕಲಾವಿದರಿಗೆಅವಕಾಶವೇಸಿಗೋದಿಲ್ಲಅಂತಿದೆವರದಿ. ವಾಟ್ಸಪ್ಗ್ರೂಪ್ಗಳನ್ನುಮಾಡಿಕೊಂಡುಜ್ಯೂನಿಯರ್ಆರ್ಟಿಸ್ಟ್ಸಂಯೋಜಕರುಮತ್ತುಮ್ಯಾನೇಜರ್ಗಳುನಿತ್ಯಕಿರುಕುಳನೀಡುತ್ತಲೇಇರುತ್ತಾರೆ. ಕೆಲಸಬೇಕುಅಂದರೆಸಹಕರಿಸಲೇಬೇಕುಅಂತಿದೆವರದಿ.












