ಶಿವಮೊಗ್ಗ: ದೀಪಾವಳಿ ನಂತರ ವಿದ್ಯುತ್ (Electricity) ದರವನ್ನೂ ಈ ಸರ್ಕಾರ ಏರಿಕೆ ಮಾಡಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ (B.Y Raghavendra) ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ʻಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿʼ ಪಾದಯಾತ್ರೆಯಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಕೊಟ್ಟ ಹಾಗೆ ಮಾಡಿ, ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಬಸ್ ದರ ಹೆಚ್ಚಳ ಮಾಡಲಾಗಿದೆ. ಹಾಲಿನ ದರ 8 ರೂ. ಹೆಚ್ಚಳ ಎಂದು ಹೇಳಿ ಈಗ 12 ರೂ. ಏರಿಕೆಯಾಗಿದೆ. ದೀಪಾವಳಿ ಆದ ನಂತರ ವಿದ್ಯುತ್ ಬೆಲೆ ಸಹ ಏರಿಕೆ ಮಾಡೇ ಮಾಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬರದ ಸಂಕಷ್ಟದಲ್ಲಿರುವ ರೈತರಿಗೆ ಕೊನೆಗೂ ಪರಿಹಾರ – ಇಂದು ಡಿಕೆಶಿಯಿಂದ ಬೆಳೆ ಪರಿಹಾರ ಬಿಡುಗಡೆ
30 ರಿಂದ 40% ರಷ್ಟು ದರ ಹೆಚ್ಚಳ ಮಾಡುವ ನೀಚ ಕೆಲಸ ಈ ಸರ್ಕಾರ ಮಾಡಿದೆ. ಹೆಣ್ಮಕ್ಕಳಿಗೆ ಉಚಿತ ನೀಡಿ, ಗಂಡು ಮಕ್ಕಳಿಂದ ಮೂರು ಪಟ್ಟು ಕಿತ್ತುಕೊಳ್ಳುವ ಕೆಲಸ ಆಗಿದೆ. ಬ್ಯಾಲೇಟ್ ಪ್ರಕಾರವೇ ನಡೆದ ಚುನಾವಣೆಯಲ್ಲಿ ಇವರು ಗೆಲ್ಲಲು ಆಗಲಿಲ್ಲ. ಜನ ಈಗಾಗಲೇ ತಿರ್ಮಾನ ತೆಗೆದುಕೊಂಡಿದ್ದಾರೆ. ಮುಂದೆ ಜನ ಪಾಠ ಕಲಿಸುತ್ತಾರೆ.
ಪ್ರಿಯಾಂಕ್ ಖರ್ಗೆ ಏನೇ ಮಾತನಾಡಿದ್ರೂ ನಡೆಯುತ್ತೆ ಎಂದುಕೊಂಡಿದ್ದಾರೆ. ಕುಮಾರಸ್ವಾಮಿಯವರಿಗೆ ತುಂಬಾ ಹಗುರವಾಗಿ ಹಳ್ಳಿಗುಗ್ಗು ಎಂದಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಅಸಂಸ್ಕೃತ ಮಾತುಗಳನ್ನ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಅಪಪ್ರಚಾರದ ಮೂಲಕ ಅರಾಜಕತೆ ಸೃಷ್ಟಿಸುತ್ತಿದೆ. ಅದಕ್ಕಾಗಿ ಪಾದಯಾತ್ರೆ ಮಾಡ್ತಿದ್ದೇವೆ. ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಾಗ ಪ್ರಜಾತಂತ್ರ ವ್ಯವಸ್ಥೆ ಸರಿ ಇರುತ್ತದೆ. ಕಾಂಗ್ರೆಸ್ ಸೋತಾಗ ಎಸ್ಐಆರ್, ಚುನಾವಣಾ ಆಯೋಗ ಸರಿ ಇರಲ್ಲ ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿಯವರು ಪ್ರಧಾನಿಗೆ, ಐದು ನಿಮಿಷ ನನ್ನ ಮುಂದೆ ಬಂದು ಕುಳಿತುಕೊಳ್ಳಿ. ನೀವು ದೇಶ ವಿರೋಧಿ ಎಂದು ನಾನು ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ವಿರೋಧ ಪಕ್ಷದ ನಾಯಕರಾದ ನೀವು ಸಂಸತ್ನಲ್ಲಿ ಮಾತಾಡಲು ಅವಕಾಶ ಇದೆ. ಈ ರೀತಿಯ ಮಾರ್ಗದ ಮೂಲಕ ಪ್ರಜಾತಂತ್ರವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಆಗ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗಾಳಿ, ನೀರಿನಲ್ಲಿ ಬಸ್ ಓಡಿಸೋಕೆ ಆಗಲ್ಲ: ಪ್ರಿಯಾಂಕ್ ಖರ್ಗೆ
