ಬೆಂಗಳೂರು: ಬರದ ಸಂಕಷ್ಟದಲ್ಲಿ ಇರುವ ರೈತರಿಗೆ ಕೊನೆಗೂ ಇಂದು (ನ.5) ರಾಜ್ಯ ಸರ್ಕಾರ (State Govt) ಪರಿಹಾರ ವಿತರಣೆ ಮಾಡಲಿದೆ.
ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಂದು ಮಧ್ಯಂತರ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಲಿದ್ದು, ಮಧ್ಯಾಹ್ನ 12:30ಕ್ಕೆ ಪರಿಹಾರ ವಿತರಣೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಬೆಳಗ್ಗೆಯೇ ಮದ್ಯದ ಅಮಲಿನಲ್ಲಿರುವ ಮುಖ್ಯಮಂತ್ರಿಯಿಂದ ಪಂಜಾಬ್ ಅನ್ನು ಡ್ರಗ್ಸ್ಮುಕ್ತ ಮಾಡಲು ಸಾಧ್ಯವೇ? – ರಾಹುಲ್ ವಾಗ್ದಾಳಿ
ಈಗಾಗಲೇ ಸರ್ಕಾರ ಮಧ್ಯಂತರ ಬೆಳೆ ಪರಿಹಾರದ ಹಣ 2500 ರೂ. ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಇದೀಗ ಆ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಮುಹೂರ್ತ ನಿಗದಿಯಾಗಿದ್ದು, ಆ ಹಣ ಇದೀಗ ರೈತರ ಖಾತೆಗೆ ಜಮೆಯಾಗಲಿದೆ.
