ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವು (Parliament Monsoon Session) ಜುಲೈ 20ರಿಂದ ಆಗಸ್ಟ್ 13ರವರೆಗೆ ನಡೆಯುವ ಸಾಧ್ಯತೆ ಇದ್ದು, ಈ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ಸುಮಾರು ನಾಲ್ಕು ವಾರಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಹಲವು ಮಹತ್ವದ ಮಸೂದೆಗಳು ಕುರಿತು ಚರ್ಚೆ ನಡೆಯಲಿದೆ.
ಈ ಬಾರಿಯ ಅಧಿವೇಶನದಲ್ಲಿ ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ 33% ಮೀಸಲಾತಿ ಜಾರಿಗೊಳಿಸುವ ಸಂವಿಧಾನ ತಿದ್ದುಪಡಿ ಮಸೂದೆ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರ ಪುನರ್‌ವಿಂಗಡನೆ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಚಯಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹಸು, ಕರುಗಳ ವಧೆ ನಿಷೇಧಿಸಿ ಹೈಕೋರ್ಟ್ ಆದೇಶ – ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ ತ.ನಾಡು ಸರ್ಕಾರ
ಈ ಎರಡೂ ಮಸೂದೆಗಳು ಏಪ್ರಿಲ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಅಗತ್ಯವಾದ ಮೂರನೇ ಎರಡರಷ್ಟು ಬಹುಮತ ದೊರೆಯದ ಕಾರಣ ಅಂಗೀಕಾರವಾಗಿರಲಿಲ್ಲ. ಈಗ ಕೆಲವು ವಿರೋಧ ಪಕ್ಷಗಳ ವಿಷಯಾಧಾರಿತ ಬೆಂಬಲದ ನಿರೀಕ್ಷೆಯೊಂದಿಗೆ ಸರ್ಕಾರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಇದನ್ನೂ ಓದಿ: ಡಿಕೆಶಿ ಕನಸಿನ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ಗೆ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರೋಧ
ಈ ಬಾರಿ ಅಧಿವೇಶನದಲ್ಲಿ ಟಿಎಂಸಿ ಮತ್ತು ಶಿವಸೇನೆಯಲ್ಲಿನ (ಯುಬಿಟಿ) ಬಂಡಾಯವು ಹೊರಹೊಮ್ಮುವ ಸಾಧ್ಯತೆ ಇದೆ. ಈಗಾಗಲೇ ಪ್ರತ್ಯೇಕ ಗುಂಪುಗಳಾಗಿ ಗುರುತಿಸಲು ಕೋರಿರುವ 20 ಟಿಎಂಸಿ ಮತ್ತು ಆರು ಶಿವಸೇನೆ (ಯುಬಿಟಿ) ಸಂಸದರ ಬೇಡಿಕೆಗಳ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ. ಇದನ್ನೂ ಓದಿ: ಕೆ.ಆರ್ ಪುರಂ ತ್ರಿವಳಿ ಕೊಲೆ ಕೇಸ್; ಸಾಕ್ಷ್ಯ ಸಂಗ್ರಹಕ್ಕೆ ಘಟನೆ ಮರುಸೃಷ್ಟಿ ಮಾಡಿಸಿದ ಪೊಲೀಸರು
ರಾಜ್ಯಸಭೆಯಲ್ಲಿ, ಹೊಸದಾಗಿ ಆಯ್ಕೆಯಾದ ಮತ್ತು ಮರು ಆಯ್ಕೆಯಾದ ಸಂಸದರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಸಭೆಯಲ್ಲಿ ಚುನಾವಣೆ ಬಳಿಕ ಆಡಳಿತಾರೂಢ ಎನ್‌ಡಿಎ ಪರವಾಗಿ ಬಲ ಹೆಚ್ಚಿದೆ. ಇದನ್ನೂ ಓದಿ: ಶುದ್ಧ ಚಿನ್ನದಲ್ಲೇ ಒಳ ಉಡುಪು, 146 ಕೋಟಿ ಕ್ಯಾಶ್, ಗೋಪುರದ ರೀತಿ ಹಣ ಸಂಗ್ರಹ – ಜಗತ್ತಿನ ಅತಿದೊಡ್ಡ ಭ್ರಷ್ಟ ಸಂಸದೆ ಲಾಕ್
