ಮಡಿಕೇರಿ: ಒಂದೂವರೆ ತಿಂಗಳ ಹಿಂದೆ ಕೊಡಗಿನ (Kodagu) ಕುಶಾಲನಗರದಿಂದ ನಾಪತ್ತೆಯಾಗಿದ್ದ ಸಚಿತಾ ಹಾಗೂ ಆಕೆಯ 9 ವರ್ಷದ ಮಗು ಕೇರಳ(Kerala) ರಾಜ್ಯದ ಮಲಪ್ಪುರಂ ಜಿಲ್ಲೆಯ ಮದರಸವೊಂದರಲ್ಲಿ ಪತ್ತೆಯಾಗಿದ್ದಾರೆ.
ಈ ಪ್ರಕರಣದ ಹಿಂದೆ ಮತಾಂತರ ಹಾಗೂ ಲವ್ ಜಿಹಾದ್‌ನ (Love Jihad) ದೊಡ್ಡ ಸಂಚು ಇದೆ ಎಂದು ಕುಶಾಲನಗರದ ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಮಲಪ್ಪುರಂ ಜಿಲ್ಲೆಯ ಪೊನ್ನಾಣಿ ಹಾಗೂ ಮಂಜೇರಿ ಭಾಗಗಳಲ್ಲಿ ಮತಾಂತರ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪವನ್ನೂ ಮಾಡಿವೆ.
ಕುಶಾಲನಗರ ಬಳಿಯ ಎನ್‌ಟಿಸಿ ಕಾಂಪ್ಲೆಕ್ಸ್‌ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಚಿತಾ, ಅಂಗಡಿ ಮಾಲೀಕ ಸಲೀಂ ಸಂಪರ್ಕಕ್ಕೆ ಬಂದ ಬಳಿಕ ಗಂಡನನ್ನು ಬಿಟ್ಟು ಮಗುವಿನೊಂದಿಗೆ ತೆರಳಿದ್ದರು ಎಂದು ಆರೋಪಿಸಲಾಗಿದೆ.
ಪತ್ನಿ ಹಾಗೂ ಮಗು ಕಾಣೆಯಾಗಿದ್ದ ಬಳಿಕ ಮಹಿಳೆಯ ಪತಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಬಳಿಕ ಪತ್ನಿ ಕೆಲಸ ಮಾಡುತ್ತಿದ್ದ ಅಂಗಡಿ ಮೇಲೆ ಅನುಮಾನ ವ್ಯಕ್ತಪಡಿಸಿ, ಹಿಂದೂಪರ ಸಂಘಟನೆಗಳ ಸಹಕಾರದೊಂದಿಗೆ ಕುಶಾಲನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಪೊಲೀಸರು ಹಾಗೂ ಹಿಂದೂಪರ ಸಂಘಟನೆಗಳ ಹುಡುಕಾಟದ ವೇಳೆ ತಾಯಿ ಮತ್ತು ಮಗು ಪತ್ತೆಯಾಗಿದ್ದಾರೆ. ಪತ್ನಿ ಮತ್ತು ಮಗುವನ್ನು ಪತ್ತೆ ಮಾಡಿದ ಬಳಿಕ ಮಹಿಳೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಅಷ್ಟೇ ಅಲ್ಲ ಮಗನಿಗೂ ಸುನ್ನತ್ ಮಾಡಿಸಿ ಅವನನ್ನೂ ಮತಾಂತರಗೊಳಿಸಲಾಗಿತ್ತು.
ಕುಶಾಲನಗರ ಸಮೀಪದ ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ನ ಅಂಗಡಿಯೊಂದರಲ್ಲಿ ಸಚಿತಾ ಕೆಲಸ ಮಾಡುತ್ತಿದ್ದರು. 10 ವರ್ಷಗಳಿಂದ ಟೂರಿಸ್ಟ್ ಸೆಂಟರ್‌ನಲ್ಲಿ ಅಂಗಡಿ ನಡೆಸುತ್ತಿದ್ದ ಸಲೀಂ ಮಾಲೀಕತ್ವದ ಅಂಗಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಮಹಿಳೆಯನ್ನು ಪ್ರಭಾವಿತಗೊಳಿಸಿ ಮಗುವಿನೊಂದಿಗೆ ಕೇರಳಕ್ಕೆ ಕಳುಹಿಸಲಾಗಿದೆ ಎಂದು ಸಲೀಂ ವಿರುದ್ಧ ಆರೋಪಿಸಲಾಗಿದೆ. ಮತಾಂತರ ಸಂಚಿನಲ್ಲಿ ಜಲೀಲ್ ಎಂಬಾತ ಕೂಡ ಸಹಕರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಸಲೀಂ ಹಾಗೂ ಜಲೀಲ್ ಅವರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಟೂರಿಸ್ಟ್ ಸೆಂಟರ್‌ನಲ್ಲಿದ್ದ ಅಂಗಡಿಯನ್ನು ಮಾಲೀಕರು ಬಂದ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಧಾರವಾಡ ಕೋರ್ಟ್‌ಗೆ ಇ-ಮೇಲ್ ಬಾಂಬ್ ಬೆದರಿಕೆ – ಕಲಾಪ ಸ್ಥಗಿತ
ಎನ್‌ಟಿಸಿ ಅಂಗಡಿ ಮಳಿಗೆಗಳಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಲಾಗುತ್ತಿದೆ ಹಾಗೂ ಈ ಭಾಗದಲ್ಲಿ ಲವ್ ಜಿಹಾದ್ ಮತ್ತು ಮತಾಂತರ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಮತಾಂತರ ಹಾಗೂ ಲವ್ ಜಿಹಾದ್ ಆರೋಪಗಳ ಕುರಿತು ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಪ್ರಕರಣದ ಎಲ್ಲ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಅಮೆರಿಕ – ಇರಾನ್ ಮಾತುಕತೆ ದಿಢೀರ್ ರದ್ದು

