ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಏನೇ ಮಾಡಿದ್ರು ಅಂಧ ಭಕ್ತರು ಸಂತೋಷ ಪಡ್ತಾರೆ ಅಂತ ಸಚಿವ ಸುಧಾಕರ್ (M.C.Sudhakar) ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಇದು ಸಂತೋಷದ ವಿಚಾರ. ಯಾಕಂದ್ರೆ ಅಂಧ ಭಕ್ತರು ಏನೇ ಮಾಡಿದ್ರು ಸಂತೋಷ ಪಡ್ತಾರೆ. ಮೊನ್ನೆ ಚಿನ್ನ ಖರೀದಿ ಮಾಡಬೇಡಿ ಅಂದಾಗ ಸಪೋರ್ಟ್ ಮಾಡಿದ್ರು. ವಾಹನ ಬಳಸಬೇಡಿ ಅಂದಾಗ ಓಡಾಡಲ್ಲ ಅಂದ್ರು. ಮೋದಿಯವರು ಹೇಳೋದನ್ನ ಎಲ್ಲಾ ಕಡೆ ಕೇಳ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ 44.4%, ಯುಎಇನಲ್ಲಿ 52.4% ಏರಿಕೆ – ಭಾರತದಲ್ಲಿ ಪೆಟ್ರೋಲ್ ದರ ಕೇವಲ 3.2% ಮಾತ್ರ ಏರಿಕೆ: ಬಿಜೆಪಿ ಸಮರ್ಥನೆ
ಮೋದಿ ಅವರು ಜನಸ್ನೇಹ ಆಡಳಿತ ಕೊಡ್ತಿದ್ದಾರೆ ಅಂತ ಹೇಳಿದ್ರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿರೋದಕ್ಕೆ ಅವರೆಲ್ಲರಿಗೂ ಸಂತೋಷ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

