ನವದೆಹಲಿ: ತೈಲ ಬೆಲೆಯನ್ನು 3 ರೂ. ಏರಿಕೆಯಾಗಿದ್ದಕ್ಕೆ ಕೇಂದ್ರ ಸರ್ಕಾರವನ್ನು ಟೀಕಿಸಲು ಆರಂಭಿಸಿದ ಪ್ರತಿಪಕ್ಷಗಳಿಗೆ ಬಿಜೆಪಿ (BJP) ತಿರುಗೇಟು ನೀಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ(India) ಕಡಿಮೆ ದರ ಏರಿಕೆಯಾಗಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದೆ.
ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ(Amit Malviya) ತಮ್ಮ ಎಕ್ಸ್ ಖಾತೆಯಲ್ಲಿ ಬೇರೆ ದೇಶಗಳಲ್ಲಿ ಎಷ್ಟು ಏರಿಕೆಯಾಗಿದೆ? ನಮ್ಮ ದೇಶದಲ್ಲಿ ದರ ಎಷ್ಟು ಏರಿಕೆಯಾಗಿದೆ ಎಂಬ ಪಟ್ಟಿಯ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷದ ಬಳಿಕ ಹಲವು ರಾಷ್ಟ್ರಗಳಲ್ಲಿ ಇಂಧನ ದರಗಳು ಭಾರೀ ಏರಿಕೆಯಾದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕೇವಲ 3%ರಷ್ಟೇ ಏರಿಕೆಯಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಆರಂಭದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್ (9,592.32 ರೂ.) ಗಡಿ ದಾಟಿತ್ತು. ಇದರ ಪರಿಣಾಮ ಅನೇಕ ರಾಷ್ಟ್ರಗಳಲ್ಲಿ ದರ ಏರಿಕೆಯಾಗಿದ್ದರೂ ಭಾರತ ದರವನ್ನು ಹೆಚ್ಚಿಸಿರಲಿಲ್ಲ. ಅದರೆ ಈಗ ಭಾರತ ಈಗ ಸ್ವಲ್ಪ ದರ ಏರಿಕೆ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ – ಯಾವ ನಗರಗಳಲ್ಲಿ ಎಷ್ಟು ದರವಿದೆ?
The surge in global fuel prices since the outbreak of the West Asia conflict offers a revealing comparison of how different countries have managed economic shocks. The closure of the Strait of Hormuz, the world’s most critical oil chokepoint, and the prolonged disruption of… pic.twitter.com/JtGwvpnLkP
— Amit Malviya (@amitmalviya) May 15, 2026
ಪೋಸ್ಟ್‌ನಲ್ಲಿ ಏನಿದೆ?
ಭಾರತದಲ್ಲಿ ಪೆಟ್ರೋಲ್ ದರ ಕೇವಲ 3.2% ಮತ್ತು ಡೀಸೆಲ್ ದರ 3.4% ಮಾತ್ರ ಏರಿಕೆಯಾಗಿದೆ. ಉಳಿದ ದೇಶಗಳಿಗೆ ಹೋಲಿಸಿದರೆ ಬಾರತದಲ್ಲಿ ಇಂಧನ ಬೆಲೆ ಹೆಚ್ಚಾಗಿ ಏರಿಕೆಯಾಗಿಲ್ಲ. ಸೌದಿ ಅರೇಬಿಯಾದಲ್ಲಿ ಮಾತ್ರ ಸರ್ಕಾರದ ನೇರ ಸಬ್ಸಿಡಿಯಿಂದ ಯಾವುದೇ ದರ ಏರಿಕೆ ಕಂಡಿಲ್ಲ.
ಭಾರತದಲ್ಲಿ ಇಂಧನ ಚಿಲ್ಲರೆ ಮಾರುಕಟ್ಟೆಯ ಬಹುಪಾಲು ಸಾರ್ವಜನಿಕ ವಲಯದ ತೈಲ ಕಂಪನಿಗಳ ನಿಯಂತ್ರಣದಲ್ಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾದರೂ, ಈ ಕಂಪನಿಗಳು ತಕ್ಷಣವೇ ಅದರ ಸಂಪೂರ್ಣ ಹೊರೆ ಜನರ ಮೇಲೆ ಹಾಕಲಿಲ್ಲ. ತೈಲ ಕಂಪನಿಗಳು ಕಡಿಮೆ ವಸೂಲಿ ಭರಿಸಿಕೊಂಡು ದರಗಳನ್ನು ನಿಯಂತ್ರಣದಲ್ಲಿಟ್ಟವು.
ಇಂದು ಭಾರತದಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿಗಳಷ್ಟು ಇಂಧನ ದರ ಏರಿಕೆ ಘೋಷಿಸಲಾಗಿದ್ದು, ಇದು ಸುಮಾರು ನಾಲ್ಕು ವರ್ಷಗಳ ಬಳಿಕ ನಡೆದ ಮೊದಲ ಪ್ರಮುಖ ದರ ಪರಿಷ್ಕರಣೆಯಾಗಿದೆ. ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳಲ್ಲಿ 10%, 20%, 50% ರಿಂದ 90%ರವರೆಗೂ ಇಂಧನ ದರ ಏರಿಕೆಯಾದ ಸಂದರ್ಭದಲ್ಲೂ ಭಾರತದಲ್ಲಿ ಅದನ್ನು 3%ರೊಳಗೆ ನಿಯಂತ್ರಿಸಿರುವುದು ದೊಡ್ಡ ಸಾಧನೆ ಎಂದು ಹೇಳಿದ್ದಾರೆ.

