ನವದೆಹಲಿ: ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಪಶ್ಚಿಮ ಏಷ್ಯಾದಲ್ಲಿ ಉದ್ವಿಘ್ನತೆ ಹೆಚ್ಚುತ್ತಿರುವ ಕಾರಣ ತೈಲ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆ ಪ್ರತಿ ಲೀಟರ್ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಯಲ್ಲಿ ತಲಾ 3 ರೂ. ಏರಿಕೆಯಾಗಿದೆ.
ತೆಲಂಗಾಣ, ಕೇರಳ ಮತ್ತು ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 110 ರೂ.ಗಳನ್ನು ದಾಟಿದೆ. ಆದರೆ, ಡೀಸೆಲ್ ಬೆಲೆ 100 ರೂ.ಗಳ ಸಮೀಪವಿದೆ. ಇದನ್ನೂ ಓದಿ: ದಿನಕ್ಕೆ ತೈಲ ಕಂಪನಿ 1,600 ಕೋಟಿ ಲಾಸ್ – ನಷ್ಟ ಸರಿದೂಗಿಸಬೇಕಾದರೆ ಪ್ರತಿ ಲೀಟರ್ ಪೆಟ್ರೋಲ್ ದರ ಎಷ್ಟಾಗಬೇಕು?
ಪೆಟ್ರೋಲ್ ಬೆಲೆ ಎಷ್ಟು?
ಬೆಂಗಳೂರು – 106.17
ನವದೆಹಲಿ- 97.77
ಮುಂಬೈ- 108.70
ಕೊಲ್ಕತ್ತಾ- 106.60
ಚೆನ್ನೈ – 103.67
ಹೈದರಾಬಾದ್- 110.89
ಡೀಸೆಲ್ ದರ ಎಷ್ಟು?
ಬೆಂಗಳೂರು – 94.10
ನವದೆಹಲಿ- 90.67
ಮುಂಬೈ- 93.14
ಕೊಲ್ಕತ್ತಾ- 95.13
ಚೆನ್ನೈ – 95.25
ಹೈದರಾಬಾದ್- 98.96
ದರ ನಿಗದಿ ಹೇಗೆ?
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಮೂಲ ತೈಲ ಬೆಲೆಯಿಂದ ಹಿಡಿದು ಗ್ರಾಹಕರ ಕೈ ಸೇರುವವರೆಗೆ ಹಲವು ಹಂತಗಳಲ್ಲಿ ಲೆಕ್ಕ ಹಾಕಿ ನಿಗದಿಪಡಿಸಲಾಗುತ್ತದೆ. ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ, ಡಾಲರ್ ಎದುರು ರೂಪಾಯಿ ಮೌಲ್ಯ, ಸಂಸ್ಕರಣಾ ವೆಚ್ಚ, ಕೇಂದ್ರ ಸರ್ಕಾರದ ಅಬಕಾರಿ ಸುಂಕ, ಡೀಲರ್ ಕಮಿಷನ್, ರಾಜ್ಯ ಸರ್ಕಾರದ ವ್ಯಾಟ್ ಸೇರಿ ದರ ನಿಗದಿ ಮಾಡುತ್ತದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಶೇಕಡಾವಾರು ಆಧಾರದ ಮೇಲೆ ಬದಲಾಗುವುದರಿಂದ, ವಿವಿಧ ರಾಜ್ಯಗಳಲ್ಲಿ ಇಂಧನ ದರ ಬೇರೆ ಬೇರೆಯಾಗಿರುತ್ತದೆ.

