BollywoodCinemaCrimeLatestMain Post

ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

ರ್ಯಾಣ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೊದಲು ಇದು ಹೃದಯಾಘಾತದಿಂದ ನಡೆದ ಸಾವು ಎಂದು ಹೇಳಲಾಗಿತ್ತು. ಆದರೆ, ಇದನ್ನು ಸೊನಾಲಿ ಕುಟುಂಬ ಒಪ್ಪಿಕೊಳ್ಳಲಿಲ್ಲ. ಇದೊಂದು ಕೊಲೆ ಎಂದು ಆರೋಪಿಸಿ, ತನಿಖೆಗೆ ಒತ್ತಾಯಿಸಲಾಯಿತು. ತನಿಖೆಗೆ ಇಳಿದ ಪೊಲೀಸರು ಸೊನಾಲಿ ಜೊತೆಯೇ ಗೋವಾಗೆ ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆನಂತರ ಇದೊಂದು ಕೊಲೆ ಎನ್ನುವ ತೀರ್ಮಾನಕ್ಕೆ ಬರಲಾಯಿತು.

ಸೊನಾಲಿ ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದ ಮೇಲೆ ಗಾಯಗಳ ಗುರುತು ಇರುವ ವರದಿ ಬಂದಿದ್ದೇ ತಡ, ಪೊಲೀಸರು ಅಲರ್ಟ್ ಆದರು. ಸೊನಾಲಿ ಜೊತೆಗೆ ಬಂದಿದ್ದ, ಅವರ ಸಹಾಯಕರೂ ಆಗಿರುವ ಸುಧೀರ್ ಸಾಂಗ್ವಾನ್ ಮತ್ತು ಸಖ್ವೀಂದರ್ ಎನ್ನುವವರನ್ನು ಅರೆಸ್ಟ್ ಮಾಡಿದಾಗ, ತಾವು ಸೊನಾಲಿಗೆ ಡ್ರಗ್ಸ್ ಕೊಟ್ಟಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಯಿತು. ಪ್ರತಿಷ್ಠಿತ ಪಬ್ ಗೆ ಹೋಗಿ ಚೆನ್ನಾಗಿ ಕುಡಿದೆವು. ಅದೇ ಪಬ್ ನಲ್ಲಿಯೇ ಡ್ರಗ್ಸ್ ತಗೆದುಕೊಂಡು ನೀರಿನಲ್ಲಿ ಹಾಕಿ ಕುಡಿಸಿದೆವು. ನಂತರ ಹೋಟೆಲ್ ಗೆ ಬಂದೆವು. ಮರು ದಿನ ಸೊನಾಲಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ:ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

ಸೋನಾಲಿ ಪಬ್ ನಲ್ಲಿ ಡಾನ್ಸ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಈ ವಿಡಿಯೋ ಗೋವಾದಲ್ಲ ಎಂದು ಅವರ ಸಹೋದರ ಹೇಳಿಕೊಂಡಿದ್ದಾರೆ. ಇದು ಗುರುಗ್ರಾಮದ್ದು. ಸೊನಾಲಿ ಹೆಸರು ಹಾಳು ಮಾಡುವುದಕ್ಕೆ ಈ ವಿಡಿಯೋ ಗೋವಾದ್ದು ಎಂದು ನಂಬಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಮೂಲಕ ಸೊನಾಲಿ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

Live Tv

Leave a Reply

Your email address will not be published.

Back to top button