CinemaKarnatakaLatestMain PostSandalwood

ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರುವ ವಿಚಾರ ಹಲವು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಈ ತಿಂಗಳು, ಮುಂದಿನ ತಿಂಗಳು ಅಂತ ಮುಂದೂಡುತ್ತಲೇ ಬಂದಿದೆ. ಆದರೆ, ಈ ಬಾರಿ ರಮ್ಯಾ ಚಿತ್ರರಂಗಕ್ಕೆ ವಾಪಸ್ಸಾಗುವುದು ನಿಕ್ಕಿಯಾಗಿದೆ. ರಮ್ಯಾ ಅವರ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಲಿದ್ದು, ಈಗಾಗಲೇ ಸಿನಿಮಾದ ಕಥೆಯನ್ನೂ ನಿರ್ದೇಶಕರು ರಮ್ಯಾ ಅವರಿಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ರಾಜ್ ಬಿ ಶೆಟ್ಟಿ ಅವರು ರಮ್ಯಾ ಮನೆಗೆ ತೆರಳಿ, ಸಿನಿಮಾದ ಸಂಪೂರ್ಣ ಕಥೆಯನ್ನು ಮತ್ತು ಚಿತ್ರಕಥೆಯನ್ನು ಹೇಳಿದ್ದಾರೆ ಎನ್ನಲಾಗುತ್ತಿದ್ದು, ಕಥೆ ಕೇಳಿ ರಮ್ಯಾ ಕೂಡ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಮತ್ತೊಂದು ಮೂಲಗಳ ಪ್ರಕಾರ ಈ ಸಿನಿಮಾವನ್ನು ರಮ್ಯಾ ಅವರೇ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೆ.ಆರ್.ಜಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎನ್ನುವ ಸುದ್ದಿಯಿದೆ. ಇದನ್ನೂ ಓದಿ:ಸಾನ್ಯ-ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಉದಯ್ ಸೂರ್ಯ

ಈಗಾಗಲೇ ರಮ್ಯಾ ಅವರು ಕೆ.ಆರ್.ಜಿ ಸ್ಟುಡಿಯೋ ಭೇಟಿ ನೀಡಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜೊತೆಯೂ ಒಂದು ಹಂತದ ಮಾತುಕತೆ ಕೂಡ ಆಡಿದ್ದಾರೆ. ಕೆಆರ್.ಜಿ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಹೊಯ್ಸಳ ಶೂಟಿಂಗ್ ಸೆಟ್ ಗೂ ರಮ್ಯಾ ಹೋಗಿದ್ದರು. ಹೀಗಾಗಿ ಈ ಸಿನಿಮಾ ಕೆ.ಆರ್.ಜಿ. ಬ್ಯಾನರ್ ನಿಂದ ಮೂಡಿ ಬಂದರೆ ಅಚ್ಚರಿ ಪಡಬೇಕಿಲ್ಲ.

Live Tv

Leave a Reply

Your email address will not be published. Required fields are marked *

Back to top button