ಮಂಗಳೂರು: ಇಲ್ಲಿನ ಖ್ಯಾತ ಉದ್ಯಮಿಯೊಬ್ಬರಿಗೆ ಕಾಂಗ್ರೆಸ್ ಮುಖಂಡ ಹನಿಟ್ರ್ಯಾಪ್ (Honey Trap) ಮಾಡಿರುವ ಘಟನೆ ನಡೆದಿದೆ. ಅಶ್ಲೀಲ ವಿಡಿಯೋ ಬಳಸಿ ಮಂಗಳೂರು (Mangaluru) ಕಾಂಗ್ರೆಸ್ ಯುವ ಮುಖಂಡ ಕೋಟಿ ಕೋಟಿ ದೋಚಿದ್ದಾನೆ.
ಉದ್ಯಮಿಯಿಂದ ಬರೋಬ್ಬರಿ 2 ಕೋಟಿ 77 ಲಕ್ಷ ದೋಚಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮತ್ತು ಜಿತೇಶ್ ಎಂಬಾತನಿಂದ ಭಾರಿ ಹನಿಟ್ರ‍್ಯಾಪ್ ನಡೆದಿದೆ. ಇದನ್ನೂ ಓದಿ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ದಾಖಲಾಗಿದ್ದ FIR ರದ್ದು
2024ರಲ್ಲೇ ಉದ್ಯಮಿಗೆ ಜಿತೇಶ್ ಹನಿಟ್ರ‍್ಯಾಪ್ ಖೆಡ್ಡಾ ತೋಡಿದ್ದ. ಉದ್ಯಮಿಯ ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಆಟ ಶುರು ಮಾಡಿದ್ದ. ಪತ್ನಿಗೆ ವಿಡಿಯೋ ತೋರಿಸೋದಾಗಿ ಬೆದರಿಸಿ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಹೆದರಿ ಚೆಕ್ ಮೂಲಕ ಜಿತೇಶ್‌ಗೆ ಉದ್ಯಮಿ ಹಣ ನೀಡಿದ್ದ. ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಗೆ ಉದ್ಯಮಿ ಮಾಹಿತಿ ನೀಡಿದ್ದ. ಆದರೆ, ಜಿತೇಶ್ ಜೊತೆ ಸೇರಿ ಉದ್ಯಮಿ ಬ್ಲ್ಯಾಕ್‌ಮೇಲ್‌ಗೆ ಕಾಂಗ್ರೆಸ್ ಮುಖಂಡ ನಿಝಾಮ್ ಕೂಡ ಇಳಿದಿದ್ದಾನೆ. ನಿಝಾಮ್ ಎಂಟ್ರಿಯಾಗಿ ಉದ್ಯಮಿಯಿಂದ ಮತ್ತೆ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಜಿತೇಶ್ ಆತ್ಮಹತ್ಯೆ ಕಥೆ ಕಟ್ಟಿ ಉದ್ಯಮಿ ಬಳಿ ನಿಝಾಮ್ ಕೋಟಿ ಕೋಟಿ ಲೂಟಿ ಮಾಡಿದ್ದ. ಸದ್ಯ ಹನಿಟ್ರ‍್ಯಾಪ್ ಕೇಸ್‌ನಲ್ಲಿ ನಿಝಾಮ್ ಮತ್ತು ಜಿತೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
2024ರ ಮೇ ತಿಂಗಳಲ್ಲಿ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ನಿಝಾಮ್ ಹೇಳಿದ್ದ. ಡೆತ್‌ನೋಟ್‌ನಲ್ಲಿ ಉದ್ಯಮಿ ಹೆಸರು ಬರೆದಿರೋದಾಗಿ ಕಥೆ ಸೃಷ್ಟಿಸಿ ಮತ್ತೆ ಬ್ಲ್ಯಾಕ್‌ಮೇಲ್ ಮಾಡಿದ್ದ. ಜಿತೇಶ್ ನೇಣಿಗೆ ಶರಣಾದ ರೀತಿ ಹಾಗೂ ಅಂತ್ಯಕ್ರಿಯೆಯ ಫೋಟೋ ಹಾಕಿ ಉದ್ಯಮಿಗೆ ಹೆದರಿಸಿದ್ದ. ಜೀವಂತ ಇದ್ದವನ ಆತ್ಮಹತ್ಯೆ ಕಥೆ ಸೃಷ್ಟಿಸಿ ಕೇಸು ಹಾಕಿಸಿ ಜೈಲಿಗೆ ತಳ್ಳುವ ಬೆದರಿಕೆ ಒಡ್ಡಿದ್ದ. ಜೈಲಿಗೆ ಹೋಗೋದನ್ನ ತಪ್ಪಿಸಲು ಕೋಟಿ ಕೋಟಿ ಹಣದ ಬೇಡಿಕೆ ಇಟ್ಟಿದ್ದ. 2024 ರಿಂದ 2026ರವರೆಗೆ 2 ಕೋಟಿ 77 ಲಕ್ಷದಷ್ಟು ಹಣ ವಸೂಲಿ ಮಾಡಿದ್ದ.
ಆದರೆ, 2026ರ ಜೂನ್‌ನಲ್ಲಿ ಉದ್ಯಮಿಗೆ ಮಂಗಳೂರಿನಲ್ಲಿ ಜಿತೇಶ್ ಕಾಣಿಸಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಜಿತೇಶ್ ಜೀವಂತ ಇರೋದು ನೋಡಿ ಉದ್ಯಮಿ ಶಾಕ್ ಆಗಿದ್ದಾರೆ. ಹೀಗಾಗಿ, ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ಉದ್ಯಮಿ ದೂರು ನೀಡಿದರು. ಉದ್ಯಮಿ ದೂರಿನ ಆಧಾರದಲ್ಲಿ ಜಿತೇಶ್ ಹಾಗೂ ನಿಝಾಮ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡಲು ಆಗಿಲ್ಲ, ನಿಮ್ಮಿಂದ ಆಗುತ್ತಾ? – ಪ್ರಿಯಾಂಕ್ ಖರ್ಗೆ ವಿರುದ್ಧ ಸಿ.ಟಿ ರವಿ ಕಿಡಿ
ಕಾಂಗ್ರೆಸ್‌ನಿಂದ ಉಚ್ಚಾಟನೆ
ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಪಕ್ಷದ ಜವಾಬ್ದಾರಿ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಆದೇಶ ಹೊರಡಿಸಿದ್ದಾರೆ. ಆರೋಪಿ ನಿಝಾಮ್ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದ. ಅಶ್ಲೀಲ ವಿಡಿಯೋ ಬಳಸಿ ಕೋಟಿ ಕೋಟಿ ದೋಚಿದ್ದ.
