Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 1.26 ಲಕ್ಷ ಮತಗಳಿಂದ ಸುಮಲತಾಗೆ ಗೆಲುವು – ಯಾವ ಕ್ಷೇತ್ರದಲ್ಲಿ ಎಷ್ಟು ಮತ ಬಿದ್ದಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | 1.26 ಲಕ್ಷ ಮತಗಳಿಂದ ಸುಮಲತಾಗೆ ಗೆಲುವು – ಯಾವ ಕ್ಷೇತ್ರದಲ್ಲಿ ಎಷ್ಟು ಮತ ಬಿದ್ದಿದೆ?

Districts

1.26 ಲಕ್ಷ ಮತಗಳಿಂದ ಸುಮಲತಾಗೆ ಗೆಲುವು – ಯಾವ ಕ್ಷೇತ್ರದಲ್ಲಿ ಎಷ್ಟು ಮತ ಬಿದ್ದಿದೆ?

Public TV
Last updated: May 24, 2019 10:38 pm
Public TV
Share
3 Min Read
SUMALATHA 1
SHARE

ಮಂಡ್ಯ: ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

ವಿಧಾನಸಭಾವಾರು ಮತ ಪ್ರಮಾಣ:
ಮಂಡ್ಯದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ? ಎಷ್ಟು? ಮತಗಳು ಲಭಿಸಿದೆ ಎಂಬುವುದನ್ನು ನೋಡುವುದಾದರೆ, ಮಂಡ್ಯದಲ್ಲಿ ನಿಖಿಲ್ ಅವರಿಗೆ 67,259 ಮತ ಹಾಗೂ ಸುಮಲತಾ ಅವರಿಗೆ 89,266 ಮತ ಲಭಿಸಿದೆ. ಸ್ವತಃ ಕುಮಾರಸ್ವಾಮಿ ಅವರ ಚನ್ನಪಟ್ಟಣದಲ್ಲಿ ಸುಮಲತಾ ಅವರಿಗೆ 22,007 ಲೀಡ್ ಸಿಕ್ಕಿದೆ.

SUMALATHA MND a

ಮದ್ದೂರು ಶಾಸಕ ಡಿಸಿ ತಮ್ಮಣ್ಣ ಅವರ ಕ್ಷೇತ್ರದಲ್ಲಿ ನಿಖಿಲ್‍ಗೆ 71,364 ಮತ, ಸುಮಲತಾಗೆ 90,331 ಸಿಕ್ಕಿದ್ದು, 18,967 ಮತಗಳ ಮುನ್ನಡೆಯನ್ನ ಸುಮಲತಾ ಪಡೆದಿದ್ದಾರೆ. ಮೇಲುಕೋಟೆಯಲ್ಲಿ ನಿಖಿಲ್‍ಗೆ 71,998 ಮತ, ಸುಮಲತಾಗೆ 87,884 ಮತ ಗಳಿಸಿದ್ದರೆ 15,886 ಮತಗಳ ಮುನ್ನಡೆಯನ್ನ ಸುಮಲತಾ ಪಡೆದಿದ್ದಾರೆ. ಶಾಸಕ ಪಿಎಂ ನರೇಂದ್ರ ಸ್ವಾಮಿ ಅವರ ಮಳವಳ್ಳಿಯಲ್ಲಿ ನಿಖಿಲ್‍ಗೆ 68,749 ಮತ ಹಾಗೂ ಸುಮಲತಾ ಅವರಿಗೆ 10,0320 ಲಭಿಸುವುದರೊಂದಿಗೆ 31,571 ಮತಗಳ ಬಹುದೊಡ್ಡ ಲೀಡ್ ಸಿಕ್ಕಿದೆ.

ಕೆಆರ್ ಪೇಟೆ ಶಾಸಕರಾದ ನಾರಾಯಣಗೌಡ ಕ್ಷೇತ್ರದಲ್ಲಿ ನಿಖಿಲ್‍ಗೆ 75,528 ಮತ ಹಾಗೂ ಸುಮಲತಾಗೆ 79,295 ಮತ ಲಭಿಸಿದ್ದು, ಸುಮಲತಾ 3,767 ಮತಗಳ ಮುನ್ನಡೆಯನ್ನ ಪಡೆದಿದ್ದಾರೆ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಕ್ಷೇತ್ರದಲ್ಲಿ ನಿಖಿಲ್‍ಗೆ 83,092 ಮತ, ಸುಮಲತಾಗೆ 76,134 ಮತ ಸಿಕ್ಕಿದ್ದು, ಈ ಕ್ಷೇತ್ರದಲ್ಲಿ ನಿಕಿಲ್ 6,958 ಮತಗಳ ಮುನ್ನಡೆ ಪಡೆದಿದ್ದರು.

mnd sumalatha money 2

ಸಚಿವ ಸಾರಾ ಮಹೇಶ್ ಅವರ ಕ್ಷೇತ್ರವಾದ ಕೆ ಆರ್ ನಗರದಲ್ಲಿ ನಿಲಿಲ್‍ಗೆ 282 ಮತ ಮುನ್ನಡೆ ಸಿಕ್ಕಿದ್ದು, ಸುಮಲತಾ 74,969 ಮತ ಪಡೆದಿದ್ದರೆ, ನಿಖಿಲ್ 75,251 ಮತ ಗಳಿಸಿದ್ದಾರೆ. ಉಳಿದಂತೆ ಶಾಸಕ ರವೀಂದ್ರ ಶೀಕಂಠಯ್ಯ ಅವರ ಶ್ರೀರಂಗಪಟ್ಟಣದಲ್ಲಿ ನಿಖಿಲ್‍ಗೆ 67,363 ಮತ, ಸುಮಲತಾಗೆ 95,142 ಮತ ಸಿಕ್ಕಿದ್ದು, 27,779 ಮತಗಳ ಮುನ್ನಡೆಯನ್ನು ಸುಮಲತಾ ಪಡೆದಿದ್ದಾರೆ.

ನಿಖಿಲ್ ಸೋಲಿಗೆ ಕಾರಣಗಳೇನು?
ಮಂಡ್ಯದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರೇ ಇದ್ದರು ಕೂಡ ನಿಖಿಲ್ ಸೋಲು ಪಕ್ಷಕ್ಕೆ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ. ಮೈತ್ರಿ ಪಕ್ಷ ಕಾಂಗ್ರೆಸ್ ಜೊತೆ ಚರ್ಚಿಸದೆ ಅಭ್ಯರ್ಥಿಯಾಗಿ ಘೋಷಿಸಿದ್ದು ನಿಖಿಲ್‍ಗೆ ಮೊದಲ ಹಿನ್ನಡೆಗೆ ಕಾರಣವಾಯಿತು. ಪರಿಣಾಮ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಪರಿಗಣನೆಗೆ ತೆಗೆದುಕೊಳ್ಳದೇ ಚುನಾವಣೆ ಎದುರಿಸಿದ್ದರು. ಇದು ಕೂಡ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿ ಸುಮಲತಾಗೆ ಬೆಂಬಲ ನೀಡಿದರು.

Nikhil

ಚುನಾವಣಾ ಪ್ರಚಾರದ ವೇಳೆಯೂ ಜೆಡಿಎಸ್ ಮುಖಂಡರು ಸುಮಲತಾರನ್ನ ಟಾರ್ಗೆಟ್ ಮಾಡಿ, ಗೌಡತಿ ಅಲ್ಲ, ಮಾಯಾಂಗನೆ ಎಂದು ಟೀಕೆ ಮಾಡಿದ್ದರು. ಅಲ್ಲದೇ ಸಿಎಂ ಕುಮಾರಸ್ವಾಮಿ ಅವರೇ ಯಶ್, ದರ್ಶನ್‍ರನ್ನು ಕಳ್ಳೆತ್ತು ಎಂದು ಕರೆದಿದ್ದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ಸಚಿವ ರೇವಣ್ಣ ಅವರು ಕೂಡ ಟೀಕೆ ಮಾಡಿ, ಗಂಡ ಸತ್ತ ಐದೇ ತಿಂಗಳಿಗೆ ರಾಜಕೀಯ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದರು. ಈ ಎಲ್ಲಾ ಹೇಳಿಕೆಗಳು ಜೆಡಿಎಸ್‍ಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ.

ಸುಮಲತಾ ಗೆಲುವಿಗೆ ಕಾರಣಗಳೇನು?
ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ನಿರ್ಣಯ ಮಾಡುವುದರಿಂದ ಪ್ರಚಾರದ ಅಂತಿಮ ಕ್ಷಣದವರೆಗೂ ಸುಮಲತಾ ಅವರು ತಾಳ್ಮೆಯಿಂದಲೇ ನಡೆದಿದ್ದರು. ಮಂಡ್ಯ ಜನರ ಬಳಿಕ ಸ್ವಾಭಿಮಾನ ಅಸ್ತ್ರ ಬಳಸಿ ಜನರ ಅಸ್ಮಿತೆ ಎಚ್ಚರಿಸಿದ್ದರು. ಪ್ರಮುಖವಾಗಿ ಪ್ರಚಾರದ ಕೊನೇ ದಿನ ಜೋಳಿಗೆ ಹಿಡಿದು, ಕಂಬನಿ ಸುರಿಸಿ ಮತಯಾಚಿಸಿದ್ದರು. ಜೆಡಿಎಸ್ ನಾಯಕರ ಕಟು ಟೀಕೆಗಳಿಗೆ ಮೌನವಾಗಿಯೇ ಪ್ರತಿಕ್ರಿಯೆ ನೀಡಿದ್ದ ಅವರು, ಜನರ ಮನ ಗೆಲ್ಲಲು ಯಶಸ್ವಿಯಾಗಿದ್ದರು. ಚುನಾವಣಾ ಸ್ಪರ್ಧೆಯ ಸಮಯದಿಂದ ಪ್ರಚಾರದ ಉದಕ್ಕೂ ನಟರಾದ ಯಶ್ ಹಾಗೂ ದರ್ಶನ್ ಅವರು ಅಬ್ಬರದ ನಡೆಸಿದ್ದರು. ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ನಿಲ್ಲಿಸದೇ ಮೈಸೂರು ಪ್ರಚಾರ ಭಾಷಣದಲ್ಲಿ ಮೋದಿ ಸುಮಲತಾಗೆ ನೀವು ಆಶೀರ್ವಾದ ಮಾಡಿ ಗೆಲ್ಲಿಸಬೇಕೆಂದು ಹೇಳಿದ್ದು ನೆರವಾಗಿದೆ. ಇತ್ತ ಕಾಂಗ್ರೆಸ್ ಅತೃಪ್ತರ ನಾಯಕರು ಕೆಲ ಮಂದಿ ಬಹಿರಂಗ ಬೆಂಬಲ ನೀಡಿದರೆ ಮತ್ತು ಕೆಲವರು ಒಳಗೊಳಗೆ ಬೆಂಬಲಕ್ಕೆ ನಿಂತು ಸುಮಲತಾರ ಗೆಲುವಿಗೆ ಕಾರಣರಾಗಿದ್ದಾರೆ.

TAGGED:Lok Sabha electionmandyaNikhilPublic TVSumalathawinಗೆಲುವುನಿಖಿಲ್ಪಬ್ಲಿಕ್ ಟಿವಿಮಂಡ್ಯಲೋಕಸಭಾ ಚುನಾವಣೆಸುಮಲತಾ
Share This Article
Facebook Whatsapp Whatsapp Telegram

Cinema news

darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru City Cinema Court Latest Main Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood
chetan 13 2
ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು
Bengaluru City Cinema Districts Karnataka Latest Sandalwood Top Stories

You Might Also Like

KKR
Cricket

ಕೆಕೆಆರ್‌ ಆಲ್‌ರೌಂಡ್‌ ಆಟಕ್ಕೆ ಸನ್‌ ಬರ್ನ್‌ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

Public TV
By Public TV
9 minutes ago
Public TV hands over archery kit to Jayashree from Koppala G. Parameshwara HR Ranganath 3
Bengaluru City

ವಿಧಿಯಾಟಕ್ಕೆ ಸೆಡ್ಡು ಹೊಡೆದ ಛಲಗಾರ್ತಿ – ಜಯಶ್ರೀ ಕನಸಿನ ಬಿಲ್ಲಿಗೆ ಪಬ್ಲಿಕ್ ಟಿವಿ ಆಸರೆ!

Public TV
By Public TV
10 minutes ago
Parameshwar 3
Bengaluru City

Exclusive | ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್‌ಗೆ ನನ್ನ ಸಾಮರ್ಥ್ಯ ಗೊತ್ತಿದೆ: ಪರಮೇಶ್ವರ್‌

Public TV
By Public TV
13 minutes ago
Hassan Illicit Relation Murder
Crime

ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ – ಕಳ್ಳಸಂಬಂಧ ಕೊಲೆಯಲ್ಲಿ ಅಂತ್ಯ

Public TV
By Public TV
1 hour ago
aadhaar has only photo and qr code pib calls this report fake news
Latest

ಆಧಾರ್‌ನಲ್ಲಿ ಕೇವಲ ಫೋಟೋ, ಕ್ಯೂಆರ್‌ ಕೋಡ್‌ – ಈ ವರದಿ ಫೇಕ್‌ ನ್ಯೂಸ್‌ ಎಂದ ಪಿಐಬಿ

Public TV
By Public TV
2 hours ago
Kolar Forest Fire
Crime

ಕೋಲಾರದ ಅಂತರಗಂಗೆ ತಪ್ಪಲಿನಲ್ಲಿ ಬೆಂಕಿ – ಅಪಾರ ಪ್ರಮಾಣದ ಅರಣ್ಯ ನಾಶ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?