ವಿಜಯಪುರ: ಗರ್ಭಿಣಿ ಪತ್ನಿ ಎದುರೇ ಪತಿಗೆ ದುಷ್ಕರ್ಮಿಗಳು ಗುಂಡಿಕ್ಕಿ (Shoutout) ಹತ್ಯೆಗೈದ ಘಟನೆ ವಿಜಯಪುರದ (Vijayapura) ನೆಹರು ನಗರದ ಮುಂಡೆವಾಡಿ ಆಸ್ಪತ್ರೆ ಬಳಿ ನಡೆದಿದೆ.
ಅಫ್ಜಲ್ಪುರದ ಟಕ್ಕೆ ಮೂಲದ ಯಾಸೀನ್ ಜುಬೇರಿ (34) ಹತ್ಯೆಯಾದ ದುರ್ದೈವಿ. ಗರ್ಭಿಣಿ ಪತ್ನಿಯನ್ನು ಯಾಸೀನ್ ಆಸ್ಪತ್ರೆಗೆ ಕರೆತಂದಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಚೈನ್ಸಾ ಅಟ್ಯಾಕ್ – ಪ್ರೀತಿ ನಿರಾಕರಿಸಿದ್ದಕ್ಕೆ ರುಂಡ ಕತ್ತರಿಸಲು ಪ್ಲ್ಯಾನ್, ಹೊಸ ಯಂತ್ರ ತಂದಿದ್ದ ಕಿರಾತಕ
ಸ್ಥಳಕ್ಕೆ ಗಾಂಧಿಚೌಕ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾಸೀನ್ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜಾರ್ಖಂಡ್ನಲ್ಲಿ 12 ವರ್ಷದ ಬಾಲಕಿಯ ಶಿರಚ್ಛೇದ – ರುಂಡ ನಾಪತ್ತೆ, ತಂದೆಯೂ ಶವವಾಗಿ ಪತ್ತೆ
