ಅಮರಾವತಿ: ಅನಂತಪುರದ (Anantapur) ರಾಪ್ತಾಡು ಸರ್ಕಾರಿ ಶಾಲೆಯಲ್ಲಿ ಬಾಲಕಿ ಮೇಲೆ ದಾಳಿ ಮಾಡಿದ ಕಿರಾತಕ ಹೇಮಂತ್ ಹೇಳಿಕೆಗೆ ಪೊಲೀಸರು ದಂಗಾಗಿದ್ದಾರೆ. ಮರ ಕತ್ತರಿಸುವ ಚೈನ್ಸಾ (Chainsaw Attack On Student) ತಂದಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಆತ, ಆಕೆ ನನ್ನ ಪ್ರೀತಿಗೆ ಒಪ್ಪಲಿಲ್ಲ. ಅದರ ಸಿಟ್ಟಿನಿಂದ ಆಕೆಯ ತಲೆಯನ್ನೇ ಒಂದೇ ಸಾರಿ ಕತ್ತರಿಸಬೇಕು ಅಂತ ಡಿಸೈಡ್ ಮಾಡಿದ್ದೆ ಎಂದಿದ್ದಾನೆ.
ಪೊಲೀಸರ ವಿಚರಾಣೆ ವೇಳೆ ಆಕೆಯ ತಲೆ ಕತ್ತರಿಸಲು ಮರ ಕತ್ತರಿಸೋ ಕೆಲಸ ಮಾಡುವ ಪರಿಚಿತರ ಬಳಿ ಯಂತ್ರ ತಂದಿದ್ದೆ. ಹಳೆಯಂತ್ರ ತಂದು ಆಫ್ ಆದ್ರೆ ಕಷ್ಟ ಅಂತ ಹೊಸ ಯಂತ್ರವನ್ನೇ ಕೇಳಿ ತಂದಿದ್ದೆ ಎಂದು ಬಾಯಿಬಿಟ್ಟಿದ್ದಾನೆ. ಅಲ್ಲದೇ ಶಾಲೆಯ ಹೊರಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ಮರ ಕಡಿಯುವ ಯಂತ್ರ ಹಿಡಿದು ಅವಿತು ಕುಳಿತಿದ್ದೆ. ಆದರೆ ಆಕೆ ಅವತ್ತು ಶಾಲೆಯಿಂದ ಆಚೆ ಬರಲೇ ಇಲ್ಲ. ಇದರಿಂದ ಮತ್ತಷ್ಟು ಕೋಪಬಂತು. ಆದ್ದರಿಂದ ಚೈನ್ಸಾ ಅನ್ನು ಹೊರಗಡೆಯಿಂದಲೇ ಆನ್ ಮಾಡ್ಕೊಂಡು ಶಾಲೆ ಒಳಗೆ ನುಗ್ಗಿದ್ದೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಆಂಧ್ರದ ಶಾಲಾ ಬಾಲಕಿ ಕೊಲೆ ಯತ್ನ ಪ್ರಕರಣ; ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಆರೋಗ್ಯದಲ್ಲಿ ಸುಧಾರಣೆ
ನೇರವಾಗಿ ಬಾಲಕಿಯ ಕತ್ತಿನ ಭಾಗಕ್ಕೆ ಯಂತ್ರ ಇಟ್ಟಾಗ ಆಕೆ ಪ್ರತಿರೋಧಿಸಿದಳು. ಅಷ್ಟರಲ್ಲಿ ಮತ್ತೊಬ್ಬ ಬಾಲಕಿ ತಳ್ಳಿದಳು. ಹಾಗಾಗಿ, ಯಂತ್ರ ಬಾಲಕಿಯ ಎದೆ ಭಾಗಕ್ಕೆ ಕೊಯ್ದಿತ್ತು. ಈ ವೇಳೆ ಯಂತ್ರವನ್ನು ಮತ್ತೊಬ್ಬ ಬಾಲಕಿ ಮೇಲೆ ಬಿಟ್ಟು ಎಸ್ಕೇಪ್ ಆಗಿದ್ದೆ ಅಂತ ಹೇಳಿಕೊಂಡಿದ್ದಾನೆ. ಅಂದಹಾಗೆ, ಸ್ಥಳಮಹಜರು ವೇಳೆ ಎಸ್ಕೇಪ್ ಆಗಲು ಯತ್ನಿಸಿ ಗುಂಡೇಟು ತಿಂದಿರುವ ಆತನ ಕಾಲಿಗೆ ಗ್ಯಾಂಗ್ರೀನ್ ಆಗಿದ್ದು, ಡಾಕ್ಟರ್ ಒಂದು ಕಾಲು ಕತ್ತರಿಸಿ ತೆಗೆದಿದ್ದಾರೆ. ಎಡಗಾಲಿಗೂ ಬುಲೆಟ್ ಬಿದ್ದಿದ್ದು ರಕ್ತಚಲನೆ ಇಲ್ಲದೆ ಈಗ ಆ ಕಾಲೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾನೆ. ಇದನ್ನೂ ಓದಿ: ಮುರಸು ಚಂಡಮಾರುತಕ್ಕೆ ಸಿಲುಕಿ ದೋಣಿ ಪಲ್ಟಿ – ನಾಲ್ವರು ಮೀನುಗಾರರು ಸಾವು, ಐವರಿಗಾಗಿ ಶೋಧ
