ರಾಂಚಿ: ಜಾರ್ಖಂಡ್ನ (Jharkhand) ಗೊಡ್ಡಾ (Godda) ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. 12 ವರ್ಷದ ಬಾಲಕಿ ಹಾಗೂ ಆಕೆಯ ತಂದೆಯ ಮೃತದೇಹ ಮನೆಯ ಅಂಗಳದಲ್ಲಿ ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಾಲಕಿಯ ತಲೆಯನ್ನು ಕತ್ತರಿಸಲಾಗಿದ್ದು, ರುಂಡ ನಾಪತ್ತೆಯಾಗಿದೆ.
ವರದಿಗಳ ಪ್ರಕಾರ, ಬಾಲಕಿ ರಾತ್ರಿ ತಂದೆ-ತಾಯಿಯೊಂದಿಗೆ ಮನೆಯಲ್ಲಿ ಮಲಗಿದ್ದಳು. ತಡರಾತ್ರಿ ಆಕೆಯನ್ನು ಮನೆಯಿಂದ ಹೊರಗೆ ಕರೆದೊಯ್ದ ದುಷ್ಕರ್ಮಿಗಳು ಮನೆಯ ಹಿಂಭಾಗಕ್ಕೆ ಕರೆದೊಯ್ದಿದ್ದಾರೆ. ಬಳಿಕ ಹರಿತವಾದ ಆಯುಧದಿಂದ ಆಕೆಯ ರುಂಡ ಕತ್ತರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತರ ಮಿಂಚಿನ ದಾಳಿ- ಕಡತಗಳ ಪರಿಶೀಲನೆ
ಮರುದಿನ ಮನೆಯ ಅಂಗಳದಲ್ಲಿ ಬಾಲಕಿಯ ಶವ ಪತ್ತೆಯಾದಾಗ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಬಾಲಕಿಯ ತಲೆ ಕಾಣೆಯಾಗಿರುವುದು ಸ್ಥಳೀಯರಲ್ಲಿ ಮತ್ತಷ್ಟು ಭಯ ಮತ್ತು ಆತಂಕ ಮೂಡಿಸಿದೆ. ಇದೇ ವೇಳೆ ಆಕೆಯ ತಂದೆಯ ಮೃತದೇಹವೂ ಮನೆಯ ಅಂಗಳದಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಬೀದಿಯಲ್ಲಿ ಗಲಾಟೆ ಬಿಟ್ಟು ಸಂಸತ್ತಿಗೆ ಬನ್ನಿ: ರಾಗಾ ಚರ್ಚೆಯ ಸವಾಲಿಗೆ ಅಮಿತ್ ಶಾ ತಿರುಗೇಟು
ಪೊಲೀಸರಿಂದ ತನಿಖೆ ಆರಂಭ:
ಘಟನೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ಲಾಲ್ಮಾಟಿಯಾ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿ ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ರೈತರಿಗೆ ದೀಪಾವಳಿ ಗಿಫ್ಟ್ – 2,500 ರೂ. ಇದ್ದ ಪರಿಹಾರದ ಮೊತ್ತ 5,000 ರೂ.ಗೆ ಹೆಚ್ಚಳ
ಬಾಲಕಿ ಮತ್ತು ಆಕೆಯ ತಂದೆಯ ಸಾವಿನ ಹಿಂದಿನ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಭೀಕರ ಕೃತ್ಯವನ್ನು ಯಾರು ಎಸಗಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ. ಬಾಲಕಿಯ ರುಂಡ ಎಲ್ಲಿದೆ ಎಂಬುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ತಂದೆ ಮತ್ತು ಮಗಳಿಬ್ಬರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು, ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೆಜೆಸ್ಟಿಕ್ನಲ್ಲಿ ಭಿಕ್ಷೆ ಬೇಡಿ ಬಿಜೆಪಿ ಪ್ರತಿಭಟನೆ – ಬಸ್ ಟಿಕೆಟ್ ದರ ಏರಿಕೆಗೆ ತೀವ್ರ ಆಕ್ರೋಶ
