ಬೆಂಗಳೂರು: ಮೀಟರ್ ಬಡ್ಡಿ (Meter Baddi) ಸಾಲದ ಸೂಲಕ್ಕೆ ಸಿಲುಕಿ ಕ್ಯಾಬ್ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಕಮಲಾನಗರದ ನಿವಾಸಿ ಬಸವರಾಜು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಡೆತ್‌ನೋಟ್ ಬರೆದಿಟ್ಟು, ವಿಡಿಯೋ ಮಾಡಿ ಕ್ಯಾಬ್ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಏಣಿಯಿಂದ ಇಳಿಯುವಾಗ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಸಾವು
ಬಸವರಾಜು ಕ್ಯಾಬ್ ಓಡಿಸಿಕೊಂಡು ಜೀವನ ಮಾಡುತ್ತಿದ್ದರು. ಸ್ನೇಹಿತನ ಮುಖಾಂತರ ಐವತ್ತು ಸಾವಿರ ಸಾಲವನ್ನು ಮಹೇಂದ್ರನ ಬಳಿ ಪಡೆದಿದ್ದರು. ಅದಕ್ಕೆ ಬಡ್ಡಿಯನ್ನು ಕೂಡ ಬಸವರಾಜು ಕಟ್ಟುತ್ತಿದ್ದರು. ಈತ ಸರಿಯಾದ ಸಮಯಕ್ಕೆ ಹಣ ಕೊಡುತ್ತಾನೆ ಅಂತ ಮಹೇಂದ್ರನಿಗೆ ಗೊತ್ತಾದ ಬಳಿಕ ಹೆಚ್ಚು ಬಡ್ಡಿಯನ್ನು ಕೊಡುವಂತೆ ಹಿಂಸೆ ನೀಡುತ್ತಿದ್ದ. 50 ಸಾವಿರ ಸಾಲಕ್ಕೆ ತಿಂಗಳಿಗೆ 10 ಸಾವಿರ ಬಡ್ಡಿಯನ್ನು ನೀಡುವಂತೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ವಿಚಾರವಾಗಿ ಅನೇಕ ಬಾರಿ ಜಗಳ ಆಗಿತ್ತು ಎನ್ನಲಾಗಿದೆ. ಆದರೂ, ಮಹೇಂದ್ರ ಮಾತ್ರ ಬಸವರಾಜ್‌ಗೆ ಬಡ್ಡಿ ಕೊಡುವಂತೆ ಕಾಟ ನೀಡುತ್ತಿದ್ದ. ಇದರಿಂದ ಮನನೊಂದ ಬಸವರಾಜ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಹೇಂದ್ರನ ವಿರುದ್ಧ ವಿಡಿಯೋ ಮಾಡಿಟ್ಟು ಹಾಗೂ ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.
ಪ್ರಕರಣ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಮಹೇಂದ್ರನ ವಿರುದ್ಧ FIR ದಾಖಲಾಗಿದೆ. ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಅತ್ತೆ, ಗಂಡನ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದು ಗೃಹಿಣಿ ಆತ್ಮಹತ್ಯೆ

