ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಲೈಂಗಿಕತೆಗೆ ಉತ್ತೇಜನ ನೀಡುತ್ತಿದ್ದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪುರುಷೋತ್ತಮ(40) ಎಂದು ಗುರುತಿಸಲಾಗಿದೆ. ಈತ ಮೂಲತಃ ಮಡಿವಾಳದವನಾಗಿದ್ದು ಜುಮೊಟೋ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇದೀಗ ಈತನನ್ನು ಆಗ್ನೇಯ ವಿಭಾಗ ಸೆನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಹುಡುಗಿಯ ಕೈ ಹಿಡಿದು ಸುಂದರವಾಗಿವೆ ಅನ್ನೋದು ಲೈಂಗಿಕ ಅಪರಾಧವಲ್ಲ – ಹೈಕೋರ್ಟ್
Advertisement
Advertisement
ಆರೋಪಿ ಫೇಸ್ ಬುಕ್ ಅಕೌಂಟ್ ನಿಂದ ಮೊದಲು ಸುಂದರವಾಗಿರುವ ಯುವತಿಯರಿಗೆ ಪ್ರೆಂಡ್ ರಿಕ್ವೆಸ್ಟ್ ಕಳಿಸಿಕೊಡುತ್ತಿದ್ದ. ಭಾರತಿಯ ಹಾಗೂ ವಿದೇಶಿ ಯುವತಿಯರಿಗೆ ರಿಕ್ವೆಸ್ಟ್ ಕಳಿಸಿ ಗೆಳೆತನ ಸಂಪಾದಿಸಿಕೊಳ್ಳುತ್ತಿದ್ದ. ಬಳಿಕ ಮೆಸೆಂಜರ್ ಮುಖಾಂತರ ಯುವತಿಯರಿಗೆ ಲೈಂಗಿಕ ಉತ್ತೇಜನ ನೀಡುವ ಅಪ್ರಾಪ್ತ ಯುವತಿಯರ ಫೋಟೋಸ್ ಹಾಗೂ ವೀಡಿಯೋಗಳನ್ನು ಕಳುಹಿಸಿಕೊಡುತ್ತಿದ್ದ.
Advertisement
ಈ ವಿಕೃತ ಕಾಮುಕನ ಬಗ್ಗೆ ಕೆಲ ಯುವತಿಯರು ದೂರು ದಾಖಲಿಸಿದ್ದರು. ಘಟನೆ ಸಂಬಂದ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.