ಭೋಪಾಲ್: ಮಧ್ಯಪ್ರದೇಶದ ಬೆತುಲ್ ಕ್ಷೇತ್ರದಿಂದ ಮಾಯಾವತಿಯವರ ಬಹುಜನ ಸಮಾಜ ಪಕ್ಷದ (BSP) ಲೋಕಸಭಾ ಅಭ್ಯರ್ಥಿ ಅಶೋಕ್ ಭಾಲವಿ (Ashok Bhalawi) ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ನಡೆಯಬೇಕಿದ್ದ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.
Madhya Pradesh | Ashok Bhalawi- a BSP candidate from Betul, Madhya Pradesh dies of a heart attack. He was sent to a hospital after he complained of chest pain, where the doctor declared him dead: Bahujan Samaj Party
— ANI MP/CG/Rajasthan (@ANI_MP_CG_RJ) April 9, 2024
Advertisement
ಪಕ್ಷದ ಪ್ರಕಾರ, ಭಾಲವಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ವಿಚಾರವನ್ನು ಬೆತುಲ್ ಡಿಎಂ ನರೇಂದ್ರ ಕುಮಾರ್ ಸೂರ್ಯವಂಶಿ ಖಚಿತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ. ಹೀಗಾಗಿ ಏಪ್ರಿಲ್ 26ರಂದು ನಡೆಯಬೇಕಿದ್ದ ಎರಡನೇ ಹಂತದ ಮತದಾನವನ್ನು ಮುಂದೂಡಿದ್ದೇವೆ ಎಂದು ಹೇಳಿದರು.
Advertisement
Advertisement
ಇತ್ತ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ನರೇಂದ್ರ ಸಿಂಗ್ ರಘುವಂಶಿ ಪ್ರತಿಕ್ರಿಯಿಸಿ, ಪ್ರಜಾಪ್ರತಿನಿಧಿ ಕಾಯ್ದೆಯಡಿ ಚುನಾವಣಾ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಸಿಎಎ ಉಲ್ಲೇಖಿಸಲು ಭಯ – ಕಾಂಗ್ರೆಸ್ ವಿರುದ್ಧ ಪಿಣರಾಯಿ ಕಿಡಿ
Advertisement
#WATCH | Madhya Pradesh: Betual DM Narendra Kumar Suryavanshi says, "BSP candidate from Betul Ashok Bhalavi died due to cardiac arrest. We have informed the Election Commission about this. Under Section 52 of the Representation of the People Act 1951, we have postponed the second… https://t.co/STKqs1yu0v pic.twitter.com/K8O2bukO9n
— ANI MP/CG/Rajasthan (@ANI_MP_CG_RJ) April 9, 2024
ಬೇತುಲ್‌ನ ಹಾಲಿ ಸಂಸದ ದುರ್ಗಾ ದಾಸ್ ಉಯಿಕೆ ಅವರನ್ನು ಬಿಜೆಪಿ ಮತ್ತೊಮ್ಮೆ ಕ್ಷೇತ್ರದಿಂದ ಕಣಕ್ಕಿಳಿಸಿದರೆ, ಕಾಂಗ್ರೆಸ್ ರಾಮು ಟೇಕಂ ಅವರನ್ನು ಕಣಕ್ಕಿಳಿಸಿದೆ. ಏಪ್ರಿಲ್ 26 ರಂದು ಟಿಕಮ್‌ಗಢ್, ದಾಮೋಹ್, ಖಜುರಾಹೊ, ಸತ್ನಾ, ರೇವಾ ಮತ್ತು ಹೊಶಂಗಾಬಾದ್ ಸ್ಥಾನಗಳೊಂದಿಗೆ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಬೇತುಲ್ ಮತದಾನ ಮಾಡಲು ನಿರ್ಧರಿಸಲಾಗಿತ್ತು.