ಎನ್.ಆರ್. ಮಂಜುನಾಥ್ (ನೀಲೇರಿ) ನಿರ್ಮಾಣ ಹಾಗೂ ಕೃತ್ವಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಲವ್ ಸೀಸನ್ಸ್’ (Love Seasons) ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿಕೊಂಡಿದೆ. ರಂಗಭೂಮಿ ಹಿನ್ನೆಲೆಯ ಹೊಸಬರ ತಂಡದಿಂದ ರೂಪುಗೊಂಡಿದ್ದ ಈ ಚಿತ್ರ, ಹಲವು ಅಡೆತಡೆಗಳನ್ನು ದಾಟಿಕೊಂಡು ತನ್ನೊಳಗಿನ ಕಂಟೆಂಟ್‌ನ ಕಸುವಿನಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಬಾಯಿಂದ ಬಾಯಿಗೆ ಹಬ್ಬಿದ ಉತ್ತಮ ಅಭಿಪ್ರಾಯಗಳಿಂದಲೇ 25 ದಿನಗಳ ಮೈಲಿಗಲ್ಲು ದಾಟಿರುವ ಈ ಸಂಭ್ರಮದ ಕ್ಷಣದಲ್ಲಿ, ಬೆಂಬಲ ನೀಡಿ ಪ್ರೋತ್ಸಾಹಿಸಿದ ಹಾಗೂ ಚಿತ್ರವನ್ನು ನೋಡಿ ಹರಸಿದ ಎಲ್ಲರಿಗೂ ಚಿತ್ರತಂಡ (Sandalwood) ಧನ್ಯವಾದ ಸಲ್ಲಿಸಿದೆ.
ಜುಲೈ 3ರಂದು ‘ಲವ್ ಸೀಸನ್ಸ್’ ಚಿತ್ರ ಬಿಡುಗಡೆಯಾಗಿತ್ತು. ವಿಭಿನ್ನ ಶೈಲಿಯ ಪ್ರೇಮಕಥೆ ಹಾಗೂ ಅದನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟ ರೀತಿಯನ್ನು ಪ್ರೇಕ್ಷಕರು ಮೊದಲ ದಿನದಿಂದಲೇ ಮೆಚ್ಚಿಕೊಂಡಿದ್ದರು. ನಂತರ ಹಲವು ಸವಾಲುಗಳು ಎದುರಾದರೂ, ಚಿತ್ರತಂಡ ಅವುಗಳನ್ನು ಧೈರ್ಯವಾಗಿ ಎದುರಿಸುತ್ತಾ ಮುಂದುವರಿಯಿತು. ಚಿತ್ರರಂಗದಿಂದಲೂ ಉತ್ತಮ ಬೆಂಬಲ ಸಿಕ್ಕಿದ್ದು, ಪ್ರೇಕ್ಷಕರಿಂದ ಬಂದ ಸಕಾರಾತ್ಮಕ ಪ್ರತಿಕ್ರಿಯೆಗಳೇ ಚಿತ್ರದ ಯಶಸ್ವಿ ಪ್ರದರ್ಶನಕ್ಕೆ ಕಾರಣವಾಗಿವೆ. ಇದರ ಫಲವಾಗಿ ಈಗ ಚಿತ್ರತಂಡ 25 ದಿನಗಳ ಸಂಭ್ರಮವನ್ನು ಆಚರಿಸುತ್ತಿದೆ.
ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಸಿನಿಮಾ 25 ದಿನಗಳ ಪ್ರದರ್ಶನ ಪೂರೈಸುವುದು ದೊಡ್ಡ ಸಾಧನೆಯಾಗಿದೆ. ಅಂತಹ ಸಂದರ್ಭದಲ್ಲಿ ಹೊಸಬರೇ ಹೆಚ್ಚಾಗಿ ಇರುವ ‘ಲವ್ ಸೀಸನ್ಸ್’ ಈ ಹಂತ ತಲುಪಿರುವುದು ಕನ್ನಡ ಚಿತ್ರರಂಗಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಿದೆ.ಇದನ್ನೂ ಓದಿ: ‘ಮಿಸೆಸ್ ಗ್ಲೋಬ್ ಕ್ಲಾಸಿಕ್ 2026’ ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ ಅರ್ಪಿತಾ
ಎನ್.ಆರ್. ಮಂಜುನಾಥ್ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ. ಕಲ್ಯಾಣ್, ಪ್ರಮೋದ್ ಮರವಂತೆ ಸೇರಿದಂತೆ ಹಲವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ್ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಾಕೆರೆ ಸಂಕಲನ ಹಾಗೂ ಭಜರಂಗಿ ಮೋಹನ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.
ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದು, ದಿಯಾ ಕೀರ್ತಿ, ಚಂದನಾ ಗೌಡ ಹಾಗೂ ಶ್ವೇತಾ ಕೊಗ್ಲೂರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ಕಾವೇರಿ ಬರ ಸಿಡಿಲು| CWMA ಸಭೆಯಲ್ಲಿ ಕರ್ನಾಟಕ, ತಮಿಳುನಾಡು ವಾದ ಏನಿತ್ತು? ನೀರು ಹರಿದಿದೆ ಅನ್ನೋದು ಗೊತ್ತಾಗೋದು ಹೇಗೆ?
