ಲಂಡನ್: ಬ್ರಿಟನ್ (Britain) ರಾಣಿ ಎಲಿಜಬೆತ್ (Elizabeth 11) ಶಕೆ ಇದೀಗ ಅದ್ಧೂರಿಯಾಗಿ ಮುಗಿಯುತ್ತಿದೆ. ಬೆಳಗ್ಗೆ ಆರೂವರೆಯಿಂದ ಸುದೀರ್ಘವಾಗಿ ನಡೆಯುತ್ತಿರುವ ಅಂತ್ಯಕ್ರಿಯೆಯ ಅಂತಿಮ ವಿಧಾನಗಳು ಲಕ್ಷಾಂತರ ಜನರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರುತ್ತಿವೆ. ಭಾರತದ ಕಾಲಮಾನ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಅಂತ್ಯಸಂಸ್ಕಾರ (Funeral) ದ ಪ್ರಕ್ರಿಯೆಗಳು ಮುಗಿಯಲಿವೆ.
#WATCH | London, The UK: The Committal Service for Queen Elizabeth II begins at St George's Chapel in Windsor Castle. It will end with the coffin being lowered into the Royal Vault.
(Source: Reuters) pic.twitter.com/O4G32d9pPC
— ANI (@ANI) September 19, 2022
Advertisement
1964ರಲ್ಲಿ ವಿನ್‍ಸ್ಟನ್ ಚರ್ಚಿಲ್ (Winston Churchill) ಅಂತ್ಯಕ್ರಿಯೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗಿತ್ತು. ಇದಾದ ನಂತರ ಬ್ರಿಟನ್‍ನಲ್ಲಿ ಇಂತಹ ಕಾರ್ಯಕ್ರಮ ನಡೆದಿರೋದು ಇದೇ ಮೊದಲು. ಬೆಳಗ್ಗೆ ವೆಸ್ಟ್ ಮಿನಿಸ್ಟರ್ ಹಾಲ್ (Wet Minister Hall) ನಿಂದ ವೆಸ್ಟ್ ಮಿನಿಸ್ಟರ್ ಅಬೆ ಚರ್ಚ್‍ಗೆ ರಾಣಿ ಎಲಿಜಬೆತ್ ಪಾರ್ಥಿವ ಶರೀರವನ್ನು ರಾಯಲ್ ನೇವಿಯ ಸ್ಟೇಟ್ ಗನ್ ಕ್ಯಾರೇಜ್‍ನಲ್ಲಿ ಕೊಂಡೊಯ್ಯಲಾಯಿತು. ಮಾರ್ಗಮಧ್ಯೆ ಪಾರ್ಲಿಮೆಂಟ್ ವೃತ್ತದಲ್ಲಿ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಯ್ತು. ನಂತರ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.
Advertisement
#WATCH | London, The UK: Still in the state hearse, Queen Elizabeth II is being taken from Albert Road via Windsor Castle’s famous Long Walk in the direction of St George’s Chapel – where a further funeral service will be conducted. pic.twitter.com/BQEkBzYAzX
— ANI (@ANI) September 19, 2022
Advertisement
ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu), ಅಮೆರಿಕಾ ಅಧ್ಯಕ್ಷ ಜೋ ಬೈಡನ್ (Joe Biden) ಸೇರಿ ವಿಶ್ವದ 2ಸಾವಿರ ಗಣ್ಯರು ರಾಣಿ ಎಲಿಜಬೆತ್‍ಗೆ ಅಂತಿಮ ನಮನ ಸಲ್ಲಿಸಿದ್ರು. 2 ನಿಮಿಷ ಇಡೀ ದೇಶ ಮೌನಾಚರಣೆ ಮೂಲಕ ಗೌರವ ಸಲ್ಲಿಸಿತು. ರಾಣಿ ಎಲಿಜಬೆತ್ 96 ವರ್ಷ ಬದುಕಿದ್ದಕ್ಕೆ ದ್ಯೋತಕವಾಗಿ 96 ಬಾರಿ ಗಂಟೆ ಮೊಳಗಿಸಲಾಯಿತು. ಅಲ್ಲಿಂದ ರಾಣಿಯ ಅಂತಿಮ ಯಾತ್ರೆ ವೆಲ್ಲಿಂಗ್ಟನ್ ಆರ್ಚ್, ನಂತರ ವಿಂಡ್ಸರ್ ಕ್ಯಾಸೆಲ್‍ವರೆಗೆ ಶಾಸ್ತ್ರೋಕ್ತವಾಗಿ ನಡೀತು. ಇದನ್ನೂ ಓದಿ: ಮಹಿಳಾ ಪೇದೆ ಹತ್ಯೆ ಪ್ರಕರಣ – ಠಾಣೆಯಲ್ಲೇ ಇದ್ಳು ಹಂತಕಿ!
Advertisement
President Droupadi Murmu attended the State Funeral of Queen Elizabeth II at Westminster Abbey, London pic.twitter.com/yvxLwVqXbg
— ANI (@ANI) September 19, 2022
ನಂತರ ಮತ್ತೊಂದು ಸೇವೆಗಾಗಿ ರಾಣಿ ಪಾರ್ಥಿವ ಶರೀರವನ್ನು ಸೇಂಟ್ ಜಾರ್ಜ್ ಚರ್ಚ್‍ಗೆ ಕೊಂಡೊಯ್ಯಲಾಯಿತು. ಇಲ್ಲಿಯೇ ಕೊಹಿನೂರ್ ವಜ್ರ (Kohinoor Diamond) ಸಹಿತ ಕಿರೀಟ ಮತ್ತಿತರ ರಾಜಸತ್ತೆಯ ಲಾಂಛನಗಳನ್ನು ತೆಗೆಯುವ ಪ್ರಕ್ರಿಯೆ ನಡೀತು. ಇನ್ನು ಕೆಲವೇ ಹೊತ್ತಲ್ಲಿ ವೆಸ್ಟ್ ಮಿನಿಸ್ಟರ್ ಡೀನ್ ಡೇವಿಡ್ ಹೋಯಲ್‍ನಲ್ಲಿ ರಾಣಿ ಅಂತ್ಯಕ್ರಿಯೆ ಕೆಲವೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ. ಕಳೆದ ವರ್ಷ ಸಾವನ್ನಪ್ಪಿದ್ದ ಪತಿ ಪ್ರಿನ್ಸ್ ಫಿಲಿಪ್ ಸಮಾಧಿ ಪಕ್ಕದಲ್ಲಿಯೇ ರಾಣಿಯ ಅಂತ್ಯಕ್ರಿಯೆ ನಡೆಯಲಿದೆ. ಸೆಪ್ಟೆಂಬರ್ 8ರಂದು 96 ವರ್ಷದ ರಾಣಿ ಎಲಿಜಬೆತ್ ಇಹಲೋಕ ತ್ಯಜಿಸಿದ್ರು.