ಚಿತ್ರದುರ್ಗ: ತಾಲೂಕಿನ ಗೊಡಬನಹಾಳ್ ಗ್ರಾಮಸ್ಥರಲ್ಲಿ ಹಲವು ದಿನಗಳಿಂದ ಭೀತಿ ಹುಟ್ಟಿಸಿದ್ದ ಚಿರತೆಯನ್ನ ಅರಣ್ಯಾಧಿಕಾರಿಗಳು ಸೆರೆ (Leopard Capture) ಹಿಡಿದಿದ್ದಾರೆ.
ಗೊಡಬನಹಾಳ್ ಗ್ರಾಮದ ಜಮೀನಲ್ಲಿ ಅವಿತಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಹೊಂಚು ಹಾಕಿ ಸೆರೆ ಹಿಡಿದಿದ್ದಾರೆ. ಇದರಿಂದ ಸುತ್ತಮುಲಿನ ಗ್ರಾಮಸ್ಥರೂ ನಿಟ್ಟುಸಿರುವ ಬಿಟ್ಟಿದ್ದಾರೆ. ಇದನ್ನೂ ಓದಿ: ಮದ್ವೆಗೆ ಒಪ್ಪದೇ ಅವಾಯ್ಡ್ ಮಾಡ್ತಿದ್ದ ಪ್ರೇಯಸಿ – ಊಟಕ್ಕೆ ಕರೆದು ಕತ್ತುಕೊಯ್ದು ಕೊಂದ ಪ್ರಿಯಕರ
ಹಲವು ದಿನಗಳಿಂದಲೂ ಗೊಡಬನಹಾಳ್ ಗ್ರಾಮಸ್ಥರನ್ನ ಕಾಡಿದ್ದ ಚಿರತೆ, ಎಲ್ಲೆಂದರಲ್ಲಿ ಕುರಿ-ಮೇಕೆಗಳನ್ನ ಹೊತ್ತೊಯ್ಯುತ್ತಿತ್ತು. ಇದರಿಂದ ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿ ಅರಣ್ಯ ಇಲಾಖೆಗೂ (Forest Department) ತಲೆನೋವಾಗಿತ್ತು.

ಕೊನೆಗೆ ಹರಸಾಹಸ ಪಟ್ಟು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯಾಧಿಕಾರಿ ಗೋಪ್ಯಾನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಜಮೀನಿನಲ್ಲಿ ಸೇರಿಕೊಂಡಿದ್ದ ಚಿರತೆಯನ್ನ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದೆ. ಈ ದೃಶ್ಯವನ್ನು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನ ಕಣ್ತುಂಬಿಕೊಂಡಿದ್ದಾರೆ.
ಸೆರೆಹಿಡಿದ ಚಿರತೆ ಆಡುಮಲ್ಲೇಶ್ವರ ಮೃಗಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಭಗ್ನಪ್ರೇಮಿಯ ಆತ್ಮಾಹುತಿ ಕೇಸ್ | ಒಟ್ಟಿಗೆ ಪ್ರಾಣಬಿಡಬೇಕೆಂದೇ 3 ನಾಡಬಾಂಬ್ ತಂದಿದ್ದ ನಾಗೇಂದ್ರ: ತನಿಖೆಯಲ್ಲಿ ಬಯಲು
