ಮುಂಬೈ: ಮಹಾರಾಷ್ಟ್ರದ (Maharashtra) ಧುಳೆ (Dhule) ಜಿಲ್ಲೆಯ ತಾಪಿ ನದಿಯ (Tapi River) ತಳದಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದ್ದು, ಕಾಲುಗಳಿಗೆ ಸರಪಳಿ, ಅದಕ್ಕೆ ಬೀಗ ಬಿಗಿದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಪತ್ತೆಯಾದ ಈ ದಂಪತಿಯನ್ನು ಮೂಲತಃ ಜಲಗಾಂವ್ ಜಿಲ್ಲೆಯ ಅಮಲ್ನೇರ್ ತಾಲೂಕಿನವರಾದ ಶ್ಯಾಮ್ ಹರಿ ಪಾಟೀಲ್ ಮತ್ತು ಸಪ್ನಾ ಪಾಟೀಲ್ ಎಂದು ಗುರುತಿಸಲಾಗಿದೆ. ಇಬ್ಬರು ಕೇವಲ ಕೆಲವು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಸೇರಿದಂತೆ 10 ವಿಪಕ್ಷ ನಾಯಕರಿಂದ ರಾಷ್ಟ್ರಪತಿ ಭೇಟಿ – ವಿಜಯ್ ಚೌಕ್‌ನಲ್ಲಿ ಇಂಡಿ ಒಕ್ಕೂಟ ಧರಣಿ
ಎರಡು ಮೃತದೇಹಗಳು ತಾಪಿ ನದಿಯ ತಳದಲ್ಲಿ ಸಿಕ್ಕಿವೆ. ಶವಗಳ ಕಾಲಿಗೆ ಕಬ್ಬಿಣದ ಸರಪಳಿ ಬಿಗಿದು, ಅದಕ್ಕೆ ಬೀಗ ಹಾಕಿರುವುದು ಕಂಡುಬಂದಿದೆ. ಹೀಗಾಗಿ ಇದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎಂಬ ಶಂಕೆ ವ್ಯಕ್ತವಾಗಿದೆ.
ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ನಾವು ಪ್ರತಿಯೊಂದು ಕೋನದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇದನ್ನೂ ಓದಿ: ಕಂಟ್ರೋಲ್ ರೂಮ್‌ಗೆ 50 ಲಕ್ಷ, ಎಐ ವ್ಯವಸ್ಥೆಗೆ 12 ಲಕ್ಷ – ಹಾಸನಾಂಬೆ ಖರ್ಚು ಲೆಕ್ಕ ಕೇಳಿ ತಲೆಚಚ್ಚಿಕೊಂಡ ಸಚಿವ ಶಿವಲಿಂಗೇಗೌಡ

