– ಮುಖ್ಯಮಂತ್ರಿಗಳೇ ತಮ್ಮ ಸ್ಥಾನ ಬಿಟ್ಟು ಕೊಟ್ಟಮೇಲೆ, ನಿಗಮ ಮಂಡಳಿ ಅಧ್ಯಕ್ಷರೂ ಬಿಡಬೇಕು ಎಂದ ಸಚಿವ
ಕಾರವಾರ: ಬಿಜೆಪಿ ಪಾದಯಾತ್ರೆಯಿಂದ (BJP Padayatra) ಆಡಳಿತ ಪಕ್ಷಕ್ಕೆ ಆತಂಕ ಎನ್ನುವುದು ಸುಳ್ಳು. ಪಾದಯಾತ್ರೆಯಿಂದ ನಮಗೆ ನಷ್ಟ ಇಲ್ಲ. ಬಿಜೆಪಿಗರ ಬಿಪಿ, ಶುಗರ್ ಕಾಯಿಲೆ ಕಡಿಮೆ ಆಗುತ್ತದೆ ಎಂದು ಸಚಿವ ಲಕ್ಷ್ಮಣ್ ಸವದಿ (Laxman Savadi) ಟಾಂಗ್ ಕೊಟ್ಟರು.
ಇಂದು ಅಂಕೋಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸವದಿ, ಬಿಜೆಪಿಗರಿಗೆ ಪಾದಯಾತ್ರೆಯಿಂದ ಬಿಬಿ-ಶುಗರ್ ಕಡಿಮೆ ಆದರೆ, ಅವರನ್ನ ನೋಡುವ ವೈದ್ಯರಿಗೆ ಆದಾಯಕ್ಕೆ ನಷ್ಟ ಆಗುತ್ತೆ ಅಂತ ಆತಂಕ ವೈದ್ಯರಿಗಿದೆ. ಕಾಂಗ್ರೆಸ್‌ನವರಿಗೆ ಯಾವುದೇ ನಷ್ಟ ಇಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಾಗಿಲಿಗೆ ಬಂದಿದೆ ಸರ್ಕಾರ, ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7 ಮೀಸಲಾತಿ: ಪ್ರಜಾಸೇವಾ ಇಲಾಖೆಗೆ ಡಿಕೆಶಿ ಚಾಲನೆ
ಬಿಜೆಪಿಗರ ಬಿಪಿ-ಶುಗರ್ ಕಾಯಿಲೆ ಕಡಿಮೆ ಆಗುತ್ತೆ ಅನ್ನೋದೆ ಒಂದು ದೊಡ್ಡ ಹೈಲೆಟ್ ಈ ಪಾದಯಾತ್ರೆಯದ್ದು ಎಂದು ಬಿಜೆಪಿ ನಾಯಕರ ಮಾತಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ನಿಗಮ ಮಂಡಳಿ ನೇಮಕ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ತಮ್ಮ ಸ್ಥಾನ ಬಿಟ್ಟು ಕೊಟ್ಟಮೇಲೆ, ನಿಗಮ ಮಂಡಳಿಯ ಅಧ್ಯಕ್ಷರೂ ಬಿಟ್ಟುಕೊಡಬೇಕು. ಹೀಗಂತ ಮೊದಲೇ ಮಾತಾಗಿತ್ತು. ಕೆಲವೇ ದಿನದಲ್ಲಿ ನಿಗಮ ಮಂಡಳಿಗೂ ನೇಮಕ ಆಗಲಿದೆ ಎಂದರು. ಇದನ್ನೂ ಓದಿ: ಸಿಎಂ ಡಿಕೆಶಿ ಕನಸಿನ ʻಪ್ರಜಾಸೇವಾ ಇಲಾಖೆʼ ಲೋಕಾರ್ಪಣೆ – ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ
