ದಕ್ಷಿಣದ ಸಿನಿಮಾ ಮತ್ತು ಬಾಲಿವುಡ್ ಚಿತ್ರಗಳ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ನಟಿ ಕೃತಿ ಸನೂನ್ ಕೈಯಲ್ಲಿ ಸದ್ಯ ಡಜನ್ಗಟ್ಟಲೇ ಸಿನಿಮಾಗಳಿವೆ. ಈಗ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಫಾಲೋವರ್ಸ್ ವಿಚಾರವಾಗಿ ಸಖತ್ ಸದ್ದು ಮಾಡ್ತಿದ್ದಾರೆ.
View this post on Instagram
ಕಳೆದ ವರ್ಷ `ಮಿಮಿ’ ಚಿತ್ರದ ಮೂಲಕ ಪರಮ ಸುಂದರಿಯಾಗಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಚೆಲುವೆ ಕೃತಿ ಸನೂನ್ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಇದಕ್ಕೆ ಪೂರಕವೆಂಬಂತೆ ಕೃತಿ ಇನ್ಸ್ಟಾಗ್ರಾಂ ಖಾತೆಯಲ್ಲಿ 5 ಕೋಟಿ (50 ಮಿಲಿಯನ್) ಫಾಲೋವರ್ಸ್ ಹೊಂದಿದ್ದಾರೆ. ಅಭಿಮಾನಿಗಳ ಜತೆ ಕೇಕ್ ಕಟ್ ಮಾಡಿ ಖುಷಿಪಟ್ಟಿದ್ದಾರೆ. ಇನ್ನು ಫ್ಯಾನ್ಸ್ಗೆ ವಿಶೇಷವಾಗಿ ವಿಡಿಯೋ ಮೂಲಕ ಕೃತಿ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಈ ಹಿಂದೆ ನಾಗಚೈತನ್ಯ ಬಾಲಿವುಡ್ ಚಿತ್ರಗಳಿಗೆ ನೋ ಅಂದಿದ್ಯಾಕೆ?
View this post on Instagram
ಕೃತಿ ನಟನೆಯ `ಗಣಪತ್’, ಬಾಹುಬಲಿ ಪ್ರಭಾಸ್ ಜತೆ `ಆದಿಪುರುಷ್’, ವರುಣ್ ಧವನ್ ಜತೆ `ಬೇಡಿಯಾ’, ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.