ಬೆಂಗಳೂರು: ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಹಗರಣ (Veterinary Recruitment Row) ಪ್ರಕರಣದಲ್ಲಿ ಅಸಲಿ ಸತ್ಯ ತಿಳಿಯಲು ಸಿಐಡಿ ಮುಂದಾಗಿದೆ.
KPSC ಕಚೇರಿಯ ಮೇಲೆ ಸಿಐಡಿ ದಾಳಿ ಮಾಡಿತ್ತು. ದಾಳಿಯ ಸಂದರ್ಭ ಪರೀಕ್ಷಾ ದಾಖಲಾತಿ, OMR ಶೀಟ್, ಸಿಸಿಟಿವಿ ವಶಕ್ಕೆ ಪಡೆಯಲಾಗಿತ್ತು. OMR ಶೀಟ್ ತಿದ್ದುಪಡಿ ಮಾಡಿದ್ದಾರೆಂಬ ಆರೋಪ ಹಿನ್ನೆಲೆ OMR ಶೀಟ್‌ಗಳು ಮತ್ತು ಸಿಸಿಟಿವಿ ದೃಶ್ಯಾವಳಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದೆ. ಇದನ್ನೂ ಓದಿ: PUBLiC TV Impact| ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ – ಆಂತರಿಕ ತನಿಖಾ ಉಪಸಮಿತಿ ರಚನೆ
ಎಫ್‌ಎಸ್‌ಎಲ್‌ನಲ್ಲಿ OMR ತಿದ್ದುಪಡಿ ಮತ್ತು ಸಿಸಿಟಿವಿ ಕ್ಯಾಮೆರಾ ಮರುಬಳಕೆ ಬಗ್ಗೆ ಸ್ಪಷ್ಟನೆ ಪಡೆಯಲು ಈ ತೀರ್ಮಾನ ಮಾಡಿದೆ. ಪ್ರತಿಭಟನೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆರೋಪದ ಬಗ್ಗೆ ಸ್ಪಷ್ಟನೆಗಾಗಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದೆ.
ಇದೇ ಸಂದರ್ಭದಲ್ಲಿ ದೂರುದಾರ ಮಂಜುನಾಥ್ ಹೇಳಿಕೆ ದಾಖಲಿಸಿರುವ ಸಿಐಡಿ, ಮಂಜುನಾಥ್ ಆರೋಪದ ಮೇಲೆ ಎಲ್ಲಾ ದಾಖಲಾತಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕೆಪಿಎಸ್‌ಸಿಯಲ್ಲಿ ಖುಲ್ಲಂ ಖುಲ್ಲಾ ಡೀಲ್ – 80 ಲಕ್ಷಕ್ಕೆ ಪಶುವೈದ್ಯಾಧಿಕಾರಿ ಹುದ್ದೆ ಸೇಲ್!
