ಸೂಪರ್ ಹಿಟ್ ಸಿನಿಮಾ ‘ಕಬಾಲಿ’ (Kabali) ನಿರ್ಮಾಪಕ ಕೆ.ಪಿ ಚೌಧರಿ (Kp Chowdary) ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಆಗುವ ಮೂಲಕ ಕಾಲಿವುಡ್ (Kollywood) ಗೆ ಶಾಕ್ ನೀಡಿದ್ದರು. ಈ ಬಂಧನ ಕಾಲಿವುಡ್ ನಲ್ಲೇ ಸಾಕಷ್ಟು ಸಂಚಲನ ಮೂಡಿಸಿತ್ತು. ಈಗ ಅದೇ ಚೌಧರಿ ವಿಚಾರಣೆ ಸಂದರ್ಭದಲ್ಲಿ ಅನೇಕರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅಶು ರೆಡ್ಡಿ (Ashu Reddy) ಹೆಸರು ಕೇಳಿ ಬಂದಿದೆ ಎಂದು ಹೇಳಲಾಗಿತ್ತು. ಅಶು ರೆಡ್ಡಿ ಹೆಸರು ಆಚೆ ಬರುತ್ತಿದ್ದಂತೆಯೇ ಸಾಕಷ್ಟು ಜನರಿಗೆ ನಡುಕ ಶುರುವಾಗಿದೆ.
- Advertisement 2
ನಟಿ ಅಶು ರೆಡ್ಡಿ ಈಗ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌಧರಿ ಅವರು ಡ್ರಗ್ (Drugs) ಕೇಸ್ನಲ್ಲಿ ಅಂದರ್ ಆಗಿದ್ದಾರೆ. ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.
- Advertisement 3
- Advertisement 4
ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ.
ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.
ಈ ಹಿಂದೆ ಇದೇ ಅಶು ರೆಡ್ಡಿ ಜೊತೆ ರಾಮ್ ಗೋಪಾಲ್ ವರ್ಮಾ(Ram Gopal Varma) ಕಾಣಿಸಿಕೊಂಡಿದ್ದರು. ಅಶು ರೆಡ್ಡಿ ಅಚರ ಪಾದ ಹಿಡಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಶೇರ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಆರ್ಜಿವಿ ಮತ್ತು ಅಶು ರೆಡ್ಡಿ ಭಾಗಿಯಾಗಿದ್ದರು. ಸಂದರ್ಶನದ ಬಳಿಕ ಅಶು ರೆಡ್ಡಿ ಅವರ ಕಾಲ ಬುಡದಲ್ಲಿ ಆರ್ಜಿವಿ ಕುಳಿತು ಆಕೆಯನ್ನ ಗುರಾಯಿಸುತ್ತಿರುವ ಫೋಟೋವನ್ನ ಆರ್ಜಿವಿ ಶೇರ್ ಮಾಡಿದ್ದು, ಫೋಟೋಗೆ ಭಾರಿ ಕಾಮೆಂಟ್ ಹರಿದು ಬಂದಿತ್ತು.
ಅಶು ರೆಡ್ಡಿ ಸೋಫಾದ ಮೇಲೆ ಕುಳಿತಿದ್ದರು. ಅವರ ಹಿಡಿದು ಕುಳಿತಿರುವ ಆರ್ಜಿವಿ, ನಾನೇ ತುಂಬಾ ಡೇಂಜರಸ್ ಆದರೆ ಅಶು ರೆಡ್ಡಿ ನನಗಿಂತ ಡಬಲ್ ಡೇಂಜರಸ್ ಎಂದು ಆರ್ಜಿವಿ ಫೋಟೋ ಜತೆ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಅಶು ರೆಡ್ಡಿ ಜೊತೆ ಯಾರೆಂಬ ಕಾಂಟ್ಯಾಕ್ಟ್ ನಲ್ಲಿದ್ದರೋ ಅವರಿಗೆಲ್ಲ ವಿಚಾರಣೆ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.