– 30 ಅಂಗಡಿ, ಮನೆಗಳು ಭಸ್ಮ
ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ಕುರುಂಗ್ ಕುಮೇ (Kurung Kumey) ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕೆಲವೇ ಕ್ಷಣಗಳಲ್ಲಿ ಆವರಿಸಿಕೊಂಡ ಬೆಂಕಿಯಿಂದ ಸುಮಾರು 30 ಅಂಗಡಿಗಳು ಮತ್ತು ಮನೆಗಳು ಸುಟ್ಟು ಭಸ್ಮವಾಗಿವೆ.
ಪಾರ್ಸಿ ಪಾರ್ಲೋ ಪಟ್ಟಣದಲ್ಲಿ ಈ ಅವಘಡ ನಡೆದಿದೆ. ಮೃತಪಟ್ಟ ನಾಲ್ವರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾರ್ಸಿ ಪಾರ್ಲೋದಲ್ಲಿ ಯಾವುದೇ ಅಗ್ನಿಶಾಮಕ ಠಾಣೆ ಅಥವಾ ಅಗ್ನಿಶಾಮಕ ವಾಹನಗಳ ಸೌಲಭ್ಯವಿಲ್ಲ. ಇಲ್ಲಿಗೆ ಹತ್ತಿರದ ಅಗ್ನಿಶಾಮಕ ಠಾಣೆಯಿರುವುದು ಕುರುಂಗ್ ಕುಮೇ ಜಿಲ್ಲಾ ಕೇಂದ್ರವಾದ ಕೊಲೋರಿಯಾಂಗ್ನಲ್ಲಿ. ಇಲ್ಲಿಂದ ಪಾರ್ಸಿ ಪಾರ್ಲೋಗೆ ವಾಹನಗಳು ತೆರಳಲು ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ. ಇದನ್ನೂ ಓದಿ: ಬೆಂಗಳೂರು ವಕೀಲ ಮಂಜುನಾಥ್ ಶೂಟೌಟ್ ಪ್ರಕರಣ – ಪ್ರಮುಖ ಆರೋಪಿ ಬಂಧನ
ಮುಖ್ಯಮಂತ್ರಿ ಪೆಮಾ ಖಂಡು ಅವರು ಈ ದುರಂತ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಶ್ರಮಿಸಿದ ಸ್ಥಳೀಯ ಆಡಳಿತದ ಅಧಿಕಾರಿಗಳು, ಸಾರ್ವಜನಿಕರು ಮತ್ತು ಪೊಲೀಸರ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.
ಈ ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಶಾಲೆಯ ಅಡುಗೆ ಕೋಣೆಗೆ ಬೆಂಕಿ ಹಚ್ಚಿ ಸಿಲಿಂಡರ್ ಸ್ಫೋಟಿಸಲು ಯತ್ನ – ಸ್ಥಳೀಯರಿಂದ ಪ್ರತಿಭಟನೆ
