ಬೆಂಗಳೂರು: ಫಿಟ್‍ನೆಸ್ ವಿಷಯದಲ್ಲಿ ಭಾರತ ತಂಡದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಎಂದಿಗೂ ಒಂದು ಹೆಜ್ಜೆ ಮುಂದಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ತರಬೇತಿ ಶಿಬಿರದ ಯೋ ಯೋ ಟೆಸ್ಟ್‌ನಲ್ಲಿ ಅವರು 17.2 ಅಂಕ ಗಳಿಸಿದ್ದಾರೆ.
ಈಗ ಏಷ್ಯಾ ಕಪ್ 2023ಕ್ಕೆ (Asia Cup 2023) ಸಜ್ಜಾಗುತ್ತಿರುವ ವಿರಾಟ್ ಇಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ಮಾಹಿತಿಯ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ನಲ್ಲಿ ಯೋ ಯೋ ಟೆಸ್ಟ್ ಸ್ಕೋರ್ ಅನ್ನು ಬಹಿರಂಗಪಡಿಸಿದ್ದಾರೆ. ಇದೀಗ ಅವರ ಶಿಸ್ತುಬದ್ಧ ಮತ್ತು ಕಠಿಣ ಫಿಟ್‍ನೆಸ್ ಲೈಫ್‍ಸ್ಟೈಲ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಗೆಲ್ಲುವ ಉತ್ಸಾಹ – ಟೀಂ ಇಂಡಿಯಾಕ್ಕೆ ಬೆಂಗಳೂರಿನಲ್ಲಿ ಫಿಟ್‍ನೆಸ್ ಟ್ರೈನಿಂಗ್
Advertisement
Advertisement
ಏಷ್ಯಾ ಕಪ್ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಆಟಗಾರರು ವಿವಿಧ ತರಬೇತಿಯಲ್ಲಿ ತೊಡಗಿದ್ದಾರೆ. ಅಲ್ಲದೇ ಗಾಯಗೊಂಡ ಆಟಗಾರರಿಂದ ಹತಾಶೆ ಅನುಭವಿಸಿದ ಮೇಲೆ ತಂಡವನ್ನು ಸದೃಢಗೊಳಿಸಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಇಂದಿನಿಂದ 13 ದಿನಗಳ ತರಬೇತಿ ನೀಡಲು ಮುಂದಾಗಿದೆ. ಏಷ್ಯಾ ಕಪ್‍ಗೆ ಶ್ರೀಲಂಕಾಕ್ಕೆ ಹಾರಲಿರುವ ರೋಹಿತ್ ಶರ್ಮಾ ನೇತೃತ್ವದ ತಂಡ ತರಬೇತಿ ಪಡೆಯುತ್ತಿದೆ.
Advertisement
Advertisement
ಸೆಪ್ಟೆಂಬರ್ 2ರಂದು ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಇದನ್ನೂ ಓದಿ: ಭಾರತಕ್ಕಾಗಿ ಮತ್ತೆ ಬ್ಯಾಟಿಂಗ್ ಮುಂದುವರೆಸುತ್ತೇನೆ: ಸಚಿನ್ ತೆಂಡೂಲ್ಕರ್
Web Stories