ಬೆಂಗಳೂರು: ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ (Asia Cup) ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾ (Team India) ಆಟಗಾರರಿಗೆ ಇಂದಿನಿಂದ ಬೆಂಗಳೂರಿನ ಆಲೂರಿನಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಫಿಟ್‍ನೆಸ್ ಪರೀಕ್ಷೆ ನಡೆಸಲಾಗುತ್ತದೆ. 13 ದಿನಗಳ ಫಿಟ್‍ನೆಸ್ ಶಿಬಿರದಲ್ಲಿ ಅಗ್ರ ಆಟಗಾರರು ಸಂಪೂರ್ಣ ದೇಹ ಪರೀಕ್ಷೆ ಸೇರಿದಂತೆ ರಕ್ತದ ಮಾದರಿ ಆಧಾರಿತ ಪರೀಕ್ಷೆಗೆ ಒಳ ಪಡಿಸಲಾಗುತ್ತದೆ.
ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದಿರುಗಿದ ಮತ್ತು ಐಲೆರ್ಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಆಡದ ಆಟಗಾರರಿಗೆ 13 ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆಲ್ ರೌಂಡರ್‍ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಚಂದ್ರಯಾನದ ಯಶಸ್ಸು ಸಂಭ್ರಮಿಸಿದ ಟೀಂ ಇಂಡಿಯಾ
Advertisement
ಮುಂಬರುವ ವಿಶ್ವಕಪ್‍ಗಾಗಿ ಪ್ರತಿಯೊಬ್ಬ ಆಟಗಾರನ ಆರೋಗ್ಯದ ಮೇಲೆ ಇರಿಸುವುದು ಶಿಬಿರದ ಉದ್ದೇಶವಾಗಿದೆ. ಅಲ್ಲದೇ ಆಟಗಾರರು ಪಂದ್ಯದ ವೇಳೆ ಗಾಯಗೊಳ್ಳದಂತೆ ತರಬೇತಿ ನೀಡಲು ನಿರ್ಧರಿಸಲಾಗಿದೆ.
Advertisement
Advertisement
ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಮುಖ ಪಂದ್ಯಾವಳಿಗಳ ಮೊದಲು ಟೀಂ ಇಂಡಿಯಾ ಆಟಗಾರರು ಗಾಯದ ಸಮಸ್ಯೆಗೆ ಗುರಿಯಾಗಿರುವುದನ್ನು ಗಮನದಲ್ಲಿರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಜಸ್ಪ್ರೀತ್ ಬುಮ್ರಾ ಕಳೆದ ವರ್ಷ ಟಿ20 ವಿಶ್ವಕಪ್‍ನಿಂದ ಹೊರಗುಳಿದಿದ್ದರು. ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್ ರಾಹುಲ್ ಸಹ ಗಾಯದ ಸಮಸ್ಯೆಯಿಂದ ಬಳಲಿದ್ದರು. ಇದು ಟೀಂ ಇಂಡಿಯಾಕ್ಕೆ ಆಘಾತವನ್ನು ಉಂಟು ಮಾಡಿತ್ತು.
Advertisement
ಇದರಿಂದಾಗಿ ಆಟಗಾರರ ಗಾಯದ ಬಗ್ಗೆ ಬಿಸಿಸಿಐ ಜಾಗರೂಕವಾಗಿದೆ. ಇದರಿಂದಾಗಿ ಅಯ್ಯರ್, ರಾಹುಲ್ ಮತ್ತು ಬುಮ್ರಾ ಆರೋಗ್ಯವಾಗಿದ್ದಾರೆ. ಅದ್ದರಿಂದ ನಿರ್ಣಾಯಕ ವಿಶ್ವಕಪ್‍ಗೆ ಮುಂಚಿತವಾಗಿ ಆಟಗಾರರ ಫಿಟ್‍ನೆಸ್‍ನ್ನು ಟ್ರ್ಯಾಕ್ ಮಾಡಲು ಬಿಸಿಸಿಐ (BCCI) ಅಗತ್ಯ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: AsiaCup 2023: ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್ ನಿರೂಪಕಿಯರು ಇವರೇ
Web Stories