ಭೋಪಾಲ್: ಸದ್ಯ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ (Australia Test Cricket) ಫಾರ್ಮ್ ಕಳೆದುಕೊಂಡಿರುವ ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ (KL Rahul) 3ನೇ ಟೆಸ್ಟ್ ಅಭ್ಯಾಸಕ್ಕೂ ಮುನ್ನವೇ ಪತ್ನಿ ಅಥಿಯಾ ಶೆಟ್ಟಿ (Athiya Shetty) ಜೊತೆ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
KL Rahul and Athiya Shetty at the Mahakaleshwar Jyotirlinga Temple. pic.twitter.com/KQ1q04nuYg
— Mufaddal Vohra (@mufaddal_vohra) February 26, 2023
ಆಸ್ಟ್ರೇಲಿಯಾ (Australia) ವಿರುದ್ಧದ ಬಾರ್ಡರ್ ಗಾವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ಗಾಗಿ ಭಾರತ ತಂಡ ಇಂದೋರ್ ತಲುಪಿದ್ದು, ಭಾನುವಾರ ಮುಂಜಾನೆ 4 ಗಂಟೆ ವೇಳೆಗೆ ರಾಹುಲ್ ಮೊದಲ ಬಾರಿಗೆ ಪತ್ನಿಯೊಂದಿಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ (Mahakaleshwar Temple) ಭೇಟಿ ನೀಡಿದ್ದರು. ಪ್ರಮುಖ ಭಸ್ಮ ಆರತಿಯಲ್ಲೂ ದಂಪತಿ ಭಾಗವಹಿಸಿದರು.
ದೇವಸ್ಥಾನದ ನವಗ್ರಹಕ್ಕೆ ತೆರಳಿದ್ದ ನವದಂಪತಿ ಪೂಜಾ ಕೈಂಕರ್ಯಗಳನ್ನು ವಿಧಿ ವಿಧಾನಗಳ ಅನ್ವಯ ನೆರವೇರಿಸಿದರು. ನಂದಿ ಸಭಾಂಗಣದಲ್ಲಿ ಕೆಲಹೊತ್ತು ಧ್ಯಾನ ಮಾಡಿದರು. ಇದನ್ನೂ ಓದಿ: ನಾನೊಬ್ಬ ವಿಫಲ ನಾಯಕ – ಕಿಂಗ್ ಕೊಹ್ಲಿ ಭಾವುಕ
ನಂತರ ಮಹಾಕಾಳೇಶ್ವರನಿಗೆ ಜಲಾಭಿಷೇಕ ನಡೆಯಿತು. ಅರ್ಚಕರು ಹಾಲು, ಮೊಸರು, ತುಪ್ಪ, ಸಕ್ಕರೆ ಮತ್ತು ಹಣ್ಣಿನ ರಸದಿಂದ ಅಭಿಷೇಕ ಮಾಡಿದ ಪೂಜಾ ವಿಧಿ ವಿಧಾನಗಳಲ್ಲೂ ಪಾಲ್ಗೊಂಡಿದ್ದರು. ಇದನ್ನೂ ಓದಿ: ಹಸಿರು ಉಡುಗೆಯಲ್ಲಿ ಸಪ್ನಾ ಶೈನ್ – ಕೊಹ್ಲಿ ಜೊತೆ ಜಗಳವಾಡಿದ್ರೆ ಇನ್ನೂ ಫೇಮಸ್ ಆಗ್ತೀರಿ: ನೆಟ್ಟಿಗರಿಂದ ತರಾಟೆ
ಕೆಲ ದಿನಗಳ ಹಿಂದೆ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಸೂರ್ಯಕುಮಾರ್ ಯಾದವ್, ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಸೇರಿ ಹಲವರು ದೇವಸ್ಥಾನಕ್ಕೆ ಭೇಟಿ ನೀಡಿ, ರಿಷಭ್ ಪಂತ್‌ಗಾಗಿ ಪ್ರಾರ್ಥಿಸಿದ್ದರು.