ತಿರುವನಂತಪುರ: ರನ್ ಮಷಿನ್ ವಿರಾಟ್ ಕೊಹ್ಲಿ (Virrat Kohli) ತಮ್ಮ ಮುಡಿಗೇರಿಸಿಕೊಂಡಿರುವ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಐತಿಹಾಸಿಕ ಗರಿ ಸೇರ್ಪಡೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಕರ್ಷಕ ಶತ ಸಿಡಿಸಿದ ‘ಕಿಂಗ್’ ಕೊಹ್ಲಿ, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ODI) 15,000 ರನ್‌ಗಳ ಮೈಲಿಗಲ್ಲು ದಾಟಿದ ವಿಶ್ವದ ಎರಡನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಈ ಪಂದ್ಯಕ್ಕೂ ಮುನ್ನ 15 ಸಹಸ್ರ ರನ್‌ಗಳ ಗಡಿ ತಲುಪಲು ಕೊಹ್ಲಿ 14,941 ರನ್ ಹೊಡೆದಿದ್ದರು. ಇಂದು ವಿಂಡೀಸ್ ಬೌಲರ್‌ಗಳನ್ನು ದಂಡಿಸುತ್ತಾ ಶತಕ ಪೂರೈಸಿದ ಕೊಹ್ಲಿ, ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್ ಎಂಬ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ವಿಶೇಷವೆಂದರೆ, ಕೊಹ್ಲಿ ಕೇವಲ 315 ಪಂದ್ಯಗಳ 303 ಇನಿಂಗ್ಸ್‌ಗಳಲ್ಲೇ ಈ ಮೈಲಿಗಲ್ಲು ತಲುಪಿದ್ದಾರೆ. ಇದಕ್ಕೂ ಮುನ್ನ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್(Sachin Tendulkar) ಅವರು 15,000 ರನ್ ಪೂರೈಸಲು 377 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಇದೀಗ ಕೊಹ್ಲಿ ಬರೋಬ್ಬರಿ 74 ಇನಿಂಗ್ಸ್‌ಗಳಿಗೂ ಮುನ್ನವೇ ಅಂದರೆ 315 ಪಂದ್ಯಗಳ 303 ಇನ್ನಿಂಗ್ಸ್‌ನಲ್ಲಿ ಸಚಿನ್ ಅವರ ಸುದೀರ್ಘ ಕಾಲದ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ.
ಚೇಸ್ ಮಾಸ್ಟರ್ ಖ್ಯಾತಿಯ ಕೊಹ್ಲಿ 40 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 74 ಎಸೆತಗಳಲ್ಲಿ ಶತಕ ಚಚ್ಚಿದರು. ಅಂತಿಮವಾಗಿ ಕೊಹ್ಲಿ ಔಟಾಗದೇ 139 ರನ್(88 ಎಸೆತ, 10 ಬೌಂಡರಿ, 9 ಸಿಕ್ಸರ್) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.
ಎರಡನೇ ವಿಕೆಟಿಗೆ ಶುಭಮನ್ ಗಿಲ್ ಜೊತೆ 132 ಎಸೆತಗಳಲ್ಲಿ 151 ರನ್ ಕೊಹ್ಲಿ ಜೊತೆಯಾಟವಾಡಿದರು. ಈ ಜೊತೆಯಾಟದಲ್ಲಿ ಕೊಹ್ಲಿ 61 ಎಸೆತಗಳಲ್ಲಿ 81 ರನ್ ಹೊಡೆದರೆ, ಗಿಲ್ 71 ಎಸೆತಗಳಲ್ಲಿ 69 ರನ್ ಹೊಡೆದರು.

