ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಪೈಲಟ್ ಗೊಂದಲದಿಂದ ಕಿಚ್ಚ ಸುದೀಪ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಇಳಿಯುವಾಗ ಹೆಲಿಪ್ಯಾಡ್ (Helipad) ಬದಲಾಯಿಸಿದ್ದು ಅಧಿಕಾರಿಗಳಲ್ಲಿ ಕೆಲಕಾಲ ಗೊಂದಲ, ಆತಂಕ ಸೃಷ್ಟಿ ಮಾಡಿತ್ತು.
ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಲ್ಯಾಂಡ್ ಆಗಬೇಕಿದ್ದ ಸ್ಥಳದಲ್ಲಿ ಸುದೀಪ್ (Sudeep) ಆಗಮಿಸಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಿದೆ. ಸಿಂಧನೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಶೃಂಗೇರಿ | ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಮೇಲುಗೈ – ಶಾರದಾಂಬೆ ದರ್ಶನ ಪಡೆದ ಅಭ್ಯರ್ಥಿ ಜೀವರಾಜ್

ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬೇರೆ ಬೇರೆ ಹೆಲಿಕ್ಯಾಪ್ಟರ್ ನಲ್ಲಿ ಡಿಕೆಶಿ ಹಾಗೂ ಸುದೀಪ್ ಆಗಮಿಸಿದ್ದು ನಟ ಕಿಚ್ಚ ಸುದೀಪ್ ಬಂದಿದ್ದ ಹೆಲಿಕ್ಯಾಪ್ಟರ್ ಪೈಲೆಟ್ ಗೊಂದಲಕ್ಕೀಡಾಗಿದ್ದಾರೆ. ನಿಗದಿತ ಹೆಲಿಪ್ಯಾಡ್ ಬಿಟ್ಟು ಬೇರೆ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಮಾಡಲಾಗಿತ್ತು. ಇದರಿಂದ ಪೊಲೀಸ್ ಅಧಿಕಾರಿಗಳು ಪೈಲೆಟನ್ನ ತರಾಟೆ ತೆಗೆದುಕೊಂಡರು.
ಬಳಿಕ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ನಿಗದಿತ ಹೆಲಿಪ್ಯಾಡ್‌ನಲ್ಲಿ ಪುನಃ ಲ್ಯಾಂಡಿಂಗ್ ಮಾಡಲಾಯಿತು. ಮೈದಾನದಲ್ಲಿ ಒಂದೇ ಕಡೆ ಮೂರು ಹೆಲಿಪ್ಯಾಡ್ ಸಿದ್ದ ಮಾಡಿದ್ದರಿಂದ ಪೈಲಟ್ ಗೊಂದಲಕ್ಕೊಳಗಿದ್ದಾರೆ. ಇದನ್ನೂ ಓದಿ: ಫ್ಲೈಟ್‌ನಲ್ಲಿ 2 ಬಾರಿ ವಾಂತಿ – ಚೆನ್ನೈನಲ್ಲಿ ಚಲಿಸುತ್ತಿದ್ದ ವಿಮಾನದಿಂದ ಹೊರಕ್ಕೆ ಜಿಗಿದ ಪ್ರಯಾಣಿಕ

ಈ ಹಿಂದೆ ಲಿಂಗಸೂಗೂರಿನಲ್ಲಿ ಸಿಎಂ ಹೆಲಿಕ್ಯಾಪ್ಟರ್ ಬೇರೆಡೆ ಲ್ಯಾಂಡಿಂಗ್ ಆಗಿ ಗೊಂದಲ ಸೃಷ್ಟಿಸಿತ್ತು. ಈಗ ಸಿಂಧನೂರಿನಲ್ಲಿ ಡಿಸಿಎಂ ಹಾಗೂ ಸುದೀಪ್ ಹೆಲಿಕಾಪ್ಟರ್ ಲ್ಯಾಂಡಿಂಗ್ ಗೊಂದಲದಿಂದ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಆತಂಕಕ್ಕೊಳಗಾಗಿತ್ತು. ಇದನ್ನೂ ಓದಿ: ಟಿಬಿ ಡ್ಯಾಂ ಮುಂದಿನ 50 ವರ್ಷ ಸುಭದ್ರ, ಕ್ರಸ್ಟ್ ಗೇಟ್‌ಗಳ ಅಳವಡಿಕೆ ಪೂರ್ಣ- ಮೇ 15ಕ್ಕೆ ಲೋಕಾರ್ಪಣೆ: ಡಿಕೆಶಿ

